ಅಣ್ಣನಿಗೆ ಕೊನೆಯ ಕರೆ, ಕಿರುಚಾಟ, ಫೋನ್ ಕಟ್, ಮಹಿಳಾ ಪೊಲೀಸ್ ಅಧಿಕಾರಿಯ ಕೊನೇ ಕ್ಷಣ ಏನೇನಾಯ್ತು?

ದೆಹಲಿಯಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಕಾಜಲ್ ಅವರನ್ನು ಪತಿ ಅಂಕುರ್ ಡಂಬಲ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸಾಯುವ ಮುನ್ನ ತನ್ನ ಸಹೋದರನಿಗೆ ಕೊನೆಯ ಕರೆ ಮಾಡಿದ್ದ ಕಾಜಲ್ ಅವರ ಕಿರುಚಾಟ ಕೇಳಿಸಿತ್ತು. ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ವಿವಾದ ಕೊಲೆಗೆ ಕಾರಣ ಎನ್ನಲಾಗಿದ್ದು, ಈ ದುರಂತವು ಇಡೀ ದೆಹಲಿಯನ್ನು ಬೆಚ್ಚಿಬೀಳಿಸಿದೆ.

ಅಣ್ಣನಿಗೆ ಕೊನೆಯ ಕರೆ, ಕಿರುಚಾಟ, ಫೋನ್ ಕಟ್, ಮಹಿಳಾ ಪೊಲೀಸ್ ಅಧಿಕಾರಿಯ ಕೊನೇ ಕ್ಷಣ ಏನೇನಾಯ್ತು?
ಪೊಲೀಸ್ ಅಧಿಕಾರಿ
Image Credit source: Hindustan Times

Updated on: Jan 29, 2026 | 3:34 PM

ನವದೆಹಲಿ, ಜನವರಿ 29: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ ಲೋಹದ ಡಂಬಲ್​ನಿಂದ ಜಜ್ಜಿ ಕೊಲೆ(Murder) ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಯುವ ಮುನ್ನ ಕಾಜಲ್ ಕೊನೆಯ ಕರೆಯನ್ನು ತನ್ನ ಸಹೋದರನಿಗೆ ಮಾಡಿದ್ದರು. ಕರೆ ಮಾಡಿದಾಗ ಆಕೆಯ ಕಿರುಚಾಟವೇ ಕೇಳುತ್ತಿತ್ತು. ಕೂಡಲೇ ಫೋನ್ ಸಂಪರ್ಕವೇ ಕಡಿತಗೊಂಡಿತ್ತು ಎಂದು ಆಕೆಯ ಸಹೋದರ ಮಾಹಿತಿ ನೀಡಿದ್ದಾರೆ.
ಸ್ವ್ಯಾಟ್(SWAT) ಕಮಾಂಡೋ ಆಗಿ ನೇಮಕಗೊಂಡಿದ್ದ 27 ವರ್ಷದ ಅಧಿ ಮಂಗಳವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪತಿ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಕೆಲ ದಿನಗಳ ಕಾಲ ಅವರು ಬದುಕಿದ್ದರು.
ನೈಋತ್ಯ ದೆಹಲಿಯ ದ್ವಾರಕಾ ಮೋರ್‌ನಲ್ಲಿರುವ ಅವರ ಮನೆಯಲ್ಲಿ ಕಾಜಲ್ ಎಂಬ ಮಹಿಳೆಯ ಮೇಲೆ ಆಕೆಯ ಪತಿ ಅಂಕುರ್ ಚೌಧರಿ (28) ಲೋಹದ ಡಂಬಲ್​ನಿಂದ ಹಲ್ಲೆ ನಡೆಸಿದ್ದು, ಆಕೆಯ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಹೊಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಕೌಟುಂಬಿಕ ವಿಚಾರ ಮತ್ತು ವರದಕ್ಷಿಣೆ ಬಗ್ಗೆ ನಡೆದ ಜಗಳದಲ್ಲಿ ಕಾಜಲ್ ಮೇಲೆ ಹಲ್ಲೆ ನಡೆಸಿದ ನಂತರ ಅಂಕುರ್ ಕಾಜಲ್ ಸಹೋದರ ನಿಖಿಲ್ ಗೆ ಕರೆ ಮಾಡಿದ್ದ ಎನ್ನಲಾಗಿದೆ. ಅಂಕುರ್ ತನ್ನ ಸಹೋದರಿಯನ್ನು ಕೊಂದಿರುವುದಾಗಿ ನಿಖಿಲ್‌ಗೆ ಹೇಳಿದ್ದಾನೆ ಎಂದು ಪೊಲೀಸರು ನಿಖಿಲ್ ಹೇಳಿಕೆಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕಗ್ಗತ್ತಲೆಯಲ್ಲಿ ಬಾಲಕಿಯ ಅಪಹರಿಸಿ ಅತ್ಯಾಚಾರ ಮಾಡಿ, ಕೊನೆಗೆ ಭಯದಿಂದ ಕಾಲುವೆಗೆ ಎಸೆದ ಸಂಬಂಧಿ
ಜನವರಿ 22 ರಂದು ರಾತ್ರಿ 10 ಗಂಟೆ ಸುಮಾರಿಗೆ ಅಂಕುರ್ ತನಗೆ ಕರೆ ಮಾಡಿ ತನ್ನ ಸಹೋದರಿ ತನ್ನೊಂದಿಗೆ ಜಗಳವಾಡುತ್ತಿದ್ದಾಳೆ ಎಂದು ಹೇಳಿದ್ದ,  ಏನಾಯಿತು ಎಂದು ವಿವರಿಸಲು ಕಾಜಲ್ ಫೋನ್ ತೆಗೆದುಕೊಂಡಳು ಆದರೆ ಅಂಕುರ್ ಅದನ್ನು ಕಸಿದುಕೊಂಡಿದ್ದ.
ಸುಮಾರು ಐದು ನಿಮಿಷಗಳ ನಂತರ, ಅಂಕುರ್ ಮತ್ತೆ ಕರೆ ಮಾಡಿ ನಿಖಿಲ್‌ಗೆ ತಂಗಿಯನ್ನು ಕೊಂದಿರುವುದಾಗಿ ತಿಳಿಸಿದ್ದ, ಅಂಕುರ್ ಶವವನ್ನು ತೆಗೆದುಕೊಂಡು  ಹೋಗಿ ಎಂದು ಕೇಳಿದ್ದ.
ಅದಕ್ಕೆ ನಿಖಿಲ್  ಮಧ್ಯರಾತ್ರಿ ದೆಹಲಿಗೆ ಓಡಿ ಬಂದಿದ್ದರು, ಅಷ್ಟರಲ್ಲೇ  ಕುಟುಂಬದವರು ಅಲ್ಲಿಗೆ ಬಂದಿದ್ದರು ಮತ್ತು ಅವರು ಕಾಜಲ್​ರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಜನವರಿ 25 ರಂದು, ಅವರನ್ನು ಗಾಜಿಯಾಬಾದ್‌ನ ನೆಹರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ನಿಧನರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:33 pm, Thu, 29 January 26