ಕೊರೊನಾ ಸೋಂಕಿತ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ

| Updated By: ಸಾಧು ಶ್ರೀನಾಥ್​

Updated on: Jun 19, 2020 | 4:39 PM

ನವದೆಹಲಿ: ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರವಷ್ಟೇ ತಮಗೆ ಕೋವಿಡ್‌-19 ಸೋಂಕು ತಗುಲಿದೆಯೆಂದು ಟ್ವೀಟ್‌ ಮಾಡಿದ್ದ ಜೈನ್‌, ನವದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಈಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಮತ್ತೊಂದು ಕೋವಿಡ್‌-19 ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಅಲ್ಲಿ ಸತ್ಯೆಂದ್ರ ಜೈನ್‌ ಅವರಿಗೆ ಫ್ಲಾಸ್ಮಾ ಥೆರಪಿ ನೀಡಲಾಗುವುದು ಎಂದು ತಿಳಿದು ಬಂದಿದೆ. ಇವರಷ್ಟೇ ಅಲ್ಲ, ಆಮ್‌ ಆದಮಿ ಪಕ್ಷದ ಇತರ […]

ಕೊರೊನಾ ಸೋಂಕಿತ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ
Follow us on

ನವದೆಹಲಿ: ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರವಷ್ಟೇ ತಮಗೆ ಕೋವಿಡ್‌-19 ಸೋಂಕು ತಗುಲಿದೆಯೆಂದು ಟ್ವೀಟ್‌ ಮಾಡಿದ್ದ ಜೈನ್‌, ನವದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು.

ಆದ್ರೆ ಈಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಮತ್ತೊಂದು ಕೋವಿಡ್‌-19 ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಅಲ್ಲಿ ಸತ್ಯೆಂದ್ರ ಜೈನ್‌ ಅವರಿಗೆ ಫ್ಲಾಸ್ಮಾ ಥೆರಪಿ ನೀಡಲಾಗುವುದು ಎಂದು ತಿಳಿದು ಬಂದಿದೆ.

ಇವರಷ್ಟೇ ಅಲ್ಲ, ಆಮ್‌ ಆದಮಿ ಪಕ್ಷದ ಇತರ ಇನ್ನಿಬ್ಬರು ನಾಯಕರೂ ಕೂಡಾ ಕೊರೊನಾ ವೈರಸ್‌ ಸೋಂಕಿತರಾಗಿದ್ದಾರೆಂದು ತಿಳಿದು ಬಂದಿದೆ. ಜತೆಗೆ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಅರವಿಂದ್‌ ಕೆಜ್ರಿವಾಲ್‌ ಕೋವಿಡ್‌-19 ಟೆಸ್ಟ್‌ಗೆ ಒಳಗಾಗಿದ್ದರು. ಆದ್ರೆ ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕಿರಲಿಲ್ಲ.

ಆದ್ರೆ ಅವರ ಮತ್ತು ಉಪಮುಖ್ಯ ಮಂತ್ರಿ ಮನೀಷ್‌ ಸಿಸೋಡಿಯಾ ಅವರ ಸಲಹೆಗಾರರಿಗೆ ಕೊರೊನಾ ಸೋಂಕಿರೋದು ಪತ್ತೆಯಗಿದೆ. ಹೀಗಾಗಿ ಈಗ ದೆಹಲಿಯ ಸರ್ಕಾರ ಮತ್ತು ಆಪ್‌ ಪಕ್ಷದಲ್ಲಿ ಆತಂಕದರ ವಾತಾವರಣ ಮನೆ ಮಾಡಿದೆ.