ದೆಹಲಿ: ಅಗ್ನಿಪಥ್ (Agnipath) ಯೋಜನೆಯ ಸಿಂಧುತ್ವವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ. ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್, ಈ ಬಗ್ಗೆ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ. ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದ್ದು. ಈ ಬಗ್ಗೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಶಸ್ತ್ರ ಪಡೆಗಳು ಸುಸಜ್ಜಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
Delhi HC while dismissing a batch of plea challenging Agnipath scheme, says find no reason to interfere https://t.co/hMaeN4Cvsd
— ANI (@ANI) February 27, 2023
ಕಳೆದ ವರ್ಷ ಜೂನ್‌ನಲ್ಲಿ ಅನಾವರಣಗೊಂಡ ಅಗ್ನಿಪಥ್ ಯೋಜನೆಯು ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗೆ ನಿಯಮಗಳನ್ನು ರೂಪಿಸುತ್ತದೆ.
ಇದನ್ನೂ ಓದಿ: Agnipath Scheme: ಜಮ್ಮು ಕಾಶ್ಮೀರದಿಂದ ಅಗ್ನಿವೀರ್ಗಳ ಮೊದಲ ಬ್ಯಾಚ್ ಭಾರತೀಯ ಸೇನೆಗೆ ತರಬೇತಿಗೆ ಸೇರ್ಪಡೆ
17 ಮತ್ತು 21 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಮತ್ತು ನಾಲ್ಕು ವರ್ಷಗಳ ಅವಧಿಗೆ ಸೇರ್ಪಡೆಯಾಗುತ್ತಾರೆ. ಯೋಜನೆಯು 25 ಪ್ರತಿಶತದಷ್ಟು ಜನರಿಗೆ ನಂತರ ನಿಯಮಿತ ಸೇವೆಯನ್ನು ನೀಡಲು ಅನುಮತಿಸುತ್ತದೆ. ಯೋಜನೆ ಅನಾವರಣಗೊಂಡ ನಂತರ, ಯೋಜನೆಯ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು, ಇದೀಗ ದೆಹಲಿ ಹೈಕೋರ್ಟ್ ಯೋಜನೆಯ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
Published On - 10:54 am, Mon, 27 February 23