ಸುಳ್ಳು ಆರೋಪ ಮಾಡಿರುವ ಆಪ್​​ ನಾಯಕರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಮುಂದಾದ ದೆಹಲಿ ಲೆಫ್ಟಿನೆಂಟ್​​ ಗವರ್ನರ್​​ ಸಕ್ಸೇನಾ

| Updated By: ರಶ್ಮಿ ಕಲ್ಲಕಟ್ಟ

Updated on: Aug 31, 2022 | 5:19 PM

ಇದು ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಗಡಿಗರ ಹಾಲ್​​ಮಾರ್ಕ್, ಮೊದಲು ಆರೋಪ ಮಾಡಿ ಆಮೇಲೆ ಓಡಿ ಹೋಗುವುದು. ಸತ್ಯ ಹೊರಬಂದಾಗ ಕ್ಷಮೆಯಾಚಿಸುವುದು ಎಂದು ಸಕ್ಸೇನಾ ಅವರ ಕಚೇರಿ ಹೇಳಿದೆ

ಸುಳ್ಳು ಆರೋಪ ಮಾಡಿರುವ ಆಪ್​​ ನಾಯಕರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಮುಂದಾದ ದೆಹಲಿ ಲೆಫ್ಟಿನೆಂಟ್​​ ಗವರ್ನರ್​​ ಸಕ್ಸೇನಾ
ವಿಕೆ ಸಕ್ಸೇನಾ
Follow us on

ದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (VK Saxena )ಅವರು ತಮ್ಮ ವಿರುದ್ಧ ಮಾನನಷ್ಟ ಮತ್ತು ಸುಳ್ಳು ಭ್ರಷ್ಟಾಚಾರ ಆರೋಪಗಳಿಗಾಗಿ ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಆಮ್ ಆದ್ಮಿ ಪಕ್ಷದ (AAP) ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 2016 ರ ನೋಟು ಅಮಾನ್ಯೀಕರಣದ ಸಮಯದಲ್ಲಿ ಸಕ್ಸೇನಾ ಅವರು ಸರ್ಕಾರಿ ಖಾದಿ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ₹ 1,400 ಕೋಟಿ ಮೌಲ್ಯದ ನಿಷೇಧಿತ ಕರೆನ್ಸಿ ನೋಟುಗಳನ್ನು ಬದಲಾಯಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ. ಸಕ್ಸೇನಾ ಅವರು ಎಎಪಿ ಆರೋಪವನ್ನು ಅವರ ಊಹೆ ಎಂದು ನಿರಾಕರಿಸಿದ್ದಾರೆ. ದೆಹಲಿಯ ಸಂವಾದ ಮತ್ತು ಅಭಿವೃದ್ಧಿ ಆಯೋಗದ ಉಪಾಧ್ಯಕ್ಷರಾಗಿರುವ ಜಾಸ್ಮಿನ್ ಶಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಗಡಿಗರ ಹಾಲ್​​ಮಾರ್ಕ್, ಮೊದಲು ಆರೋಪ ಮಾಡಿ ಆಮೇಲೆ ಓಡಿ ಹೋಗುವುದು. ಸತ್ಯ ಹೊರಬಂದಾಗ ಕ್ಷಮೆಯಾಚಿಸುವುದು ಎಂದು ಸಕ್ಸೇನಾ ಅವರ ಕಚೇರಿ ಹೇಳಿದೆ. ಈ ಎಎಪಿ ನಾಯಕರು ಮಾಡಿದ  ಸ್ಪಷ್ಟವಾದ ಸುಳ್ಳು, ಮಾನಹಾನಿಕರ ಮತ್ತು ನಿಸ್ಸಂಶಯವಾಗಿ ದಿಕ್ಕು ತಪ್ಪಿಸುವ ಆರೋಪಗಳನ್ನು ಲೆಫ್ಟಿನೆಂಟ್ ಗವರ್ನರ್ ಗಂಭೀರವಾಗಿ ಪರಿಗಣಿಸಿದ್ದು ಎಎಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಕಚೇರಿ ಹೇಳಿದೆ.