Gurmeet Ram Rahim: ಗುರ್ಮೀತ್ ರಾಮ್​ ರಹೀಮ್​ ಪೆರೋಲ್ ಮೇಲೆ ಬಿಡುಗಡೆ

ಈ ಬಾರಿಯ ಪೆರೋಲ್ ಅವಧಿಯಲ್ಲಿ, ಡೇರಾ ಸಚ್ಚಾ ಸೌದಾ ಮಾಜಿ ಮುಖ್ಯಸ್ಥ ಶಾ ಸಂತಮ್ ಸಿಂಗ್ ಜಯಂತಿಯಲ್ಲಿ ಸಿಂಗ್ ಪಾಲ್ಗೊಳ್ಳಲಿದ್ದಾನೆ ಎನ್ನಲಾಗಿದೆ. ಶಾ ಸಂತಮ್ ಸಿಂಗ್ ಜಯಂತಿ ಕಾರ್ಯಕ್ರಮ ಜನವರಿ 25ರಂದು ನಡೆಯಲಿದೆ.

Gurmeet Ram Rahim: ಗುರ್ಮೀತ್ ರಾಮ್​ ರಹೀಮ್​ ಪೆರೋಲ್ ಮೇಲೆ ಬಿಡುಗಡೆ
ಗುರ್ಮೀತ್ ರಾಮ್​ ರಹೀಮ್
Image Credit source: PTI

Updated on: Jan 21, 2023 | 2:54 PM

ನವದೆಹಲಿ: ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಹರಿಯಾಣದ ರೋಹ್ಟಕ್​ ಜಿಲ್ಲೆಯ ಸುನರಿಯಾ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್​ನನ್ನು (Gurmeet Ram Rahim Singh) 40 ದಿನಗಳ ಪೆರೋಲ್ ಮೇಲೆ ಶನಿವಾರ ಬಿಡುಗಡೆ ಮಾಡಲಾಗಿದೆ. ಮೂರು ತಿಂಗಳ ಹಿಂದಷ್ಟೇ ರಹೀಮ್ ಸಿಂಗ್​ಗೆ ಪೆರೋಲ್ ನೀಡಲಾಗಿತ್ತು. ನಿಯಮಗಳ ಅನುಸಾರ ಪೆರೋಲ್ ನೀಡಲಾಗಿದೆ ಎಂದು ರೋಹ್ಟಕ್​ನ ವಿಭಾಗೀಯ ಕಮಿಷನರ್ ಸಂಜೀವ್ ವರ್ಮಾ ತಿಳಿಸಿದ್ದಾರೆ. ಡೇರಾ ಸಚ್ಚಾ ಸೌದಾ ಮುಖ್ಯಸ್ಥನ ಈ ಹಿಂದಿನ ಪೆರೋಲ್ ಅವಧಿ ನವೆಂಬರ್ 25ರಂದು ಮುಗಿದಿತ್ತು. ಆ ಅವಧಿಯಲ್ಲಿ ಆತ ಉತ್ತರ ಪ್ರದೇಶದ ಬರ್ಣವ ಆಶ್ರಮಕ್ಕೆ ತೆರಳಿದ್ದ. 40 ದಿನಗಳ ಪೆರೋಲ್ ಕೋರಿ ರಹೀಮ್ ಸಿಂಗ್ ಅರ್ಜಿ ಸಲ್ಲಿಸಿದ್ದ. ಅದನ್ನು ರೋಹ್ಟಕ್ ವಿಭಾಗೀಯ ಆಯುಕ್ತರಿಗೆ ಕಳುಹಿಸಿಕೊಡಲಾಗಿತ್ತು ಎಂದು ಹರಿಯಾಣದ ಜೈಲುಗಳ ಸಚಿವ ರಂಜಿತ್ ಸಿಂಗ್ ಚೌಟಾಲ ತಿಳಿಸಿದ್ದಾರೆ.

ಈ ಬಾರಿಯ ಪೆರೋಲ್ ಅವಧಿಯಲ್ಲಿ, ಡೇರಾ ಸಚ್ಚಾ ಸೌದಾ ಮಾಜಿ ಮುಖ್ಯಸ್ಥ ಶಾ ಸಂತಮ್ ಸಿಂಗ್ ಜಯಂತಿಯಲ್ಲಿ ಸಿಂಗ್ ಪಾಲ್ಗೊಳ್ಳಲಿದ್ದಾನೆ ಎನ್ನಲಾಗಿದೆ. ಶಾ ಸಂತಮ್ ಸಿಂಗ್ ಜಯಂತಿ ಕಾರ್ಯಕ್ರಮ ಜನವರಿ 25ರಂದು ನಡೆಯಲಿದೆ.

ಇದನ್ನೂ ಓದಿ: Social Media Influencers: ಸಾಮಾಜಿಕ ಮಾಧ್ಯಮ ಪ್ರಭಾವಿಗಳೇ ಎಚ್ಚರ; ಬಂದಿದೆ ಹೊಸ ನಿಯಮ, ತಪ್ಪಿದರೆ 50 ಲಕ್ಷ ದಂಡ

ಈ ಹಿಂದಿನ ಪೆರೋಲ್ ಅವಧಿಯಲ್ಲಿ ಉತ್ತರ ಪ್ರದೇಶದ ಬರ್ಣವ ಆಶ್ರಮದಿಂದಲೇ ಆನ್​ಲೈನ್ ಸತ್ಸಂಗ ಕಾರ್ಯಕ್ರಮಗಳನ್ನು ರಹೀಮ್ ಸಿಂಗ್ ನಡೆಸಿಕೊಟ್ಟಿದ್ದ. ಈ ಪೈಕಿ ಕೆಲವು ಕಾರ್ಯಕ್ರಮಗಳಿಗೆ ಹರಿಯಾಣದ ಬಿಜೆಪಿ ನಾಯಕರೂ ಹಾಜರಾಗಿದ್ದರು. ಅದಕ್ಕೂ ಮುನ್ನ ಜೂನ್​ನಲ್ಲಿ 1 ತಿಂಗಳ ಪೆರೋಲ್​ನಲ್ಲಿ ರಹೀಮ್ ಸಿಂಗ್ ಜೈಲಿನಿಂದ ಹೊರಬಂದಿದ್ದ. 2022ರ ಫೆಬ್ರವರಿ 7ರಂದು ಕೂಡ ಆತನಿಗೆ ಮೂರು ವಾರಗಳ ಪೆರೋಲ್ ನೀಡಲಾಗಿತ್ತು.

ರಹೀಮ್ ಸಿಂಗ್​ಗೆ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 16 ವರ್ಷಗಳ ಹಿಂದಿನ ಪತ್ರಕರ್ತನ ಕೊಲೆ ಪ್ರಕರಣದಲ್ಲಿಯೂ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರನ್ನು ಅಪರಾಧಿಗಳು ಎಂದು ಪರಿಗಣಿಸಿದ್ದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sat, 21 January 23