ರಜನಿಕಾಂತ್ ಪಕ್ಷದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತಿಲ್ಲ: ದಿನೇಶ್ ಗುಂಡೂರಾವ್

ರಜನಿಕಾಂತ್ ಪಕ್ಷ ಇನ್ನೂ ನೋಂದಣಿಯಾಗಿಲ್ಲ, ಅವರ ಉದ್ದೇಶಿತ ಸಂಘಟನೆಯ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿಯುತಿಲ್ಲ ಎಂದ ದಿನೇಶ್ ಗುಂಡು ರಾವ್ ಬಿಜೆಪಿಯ ಅನೇಕ ಮುಖಂಡರು ಈಗ ತಮಿಳಿನ ಸೂಪರ್ ಸ್ಟಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದರು.

ರಜನಿಕಾಂತ್ ಪಕ್ಷದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತಿಲ್ಲ: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂ ರಾವ್
Updated By: ಸಾಧು ಶ್ರೀನಾಥ್​

Updated on: Dec 05, 2020 | 5:34 PM

ಬೆಂಗಳೂರು: ತಮಿಳುನಾಡಿನ ರಾಜಕೀಯ ರಂಗದಲ್ಲಿ ನಟ ರಜನಿಕಾಂತ್ ಪಕ್ಷದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ ಎಂದು ತಮಿಳನಾಡಿನ ಎಐಸಿಸಿ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಶುಕ್ರವಾರ ಅಭಿಪ್ರಾಯಪಟ್ಟರು.

ರಜನಿಕಾಂತ್ ಪಕ್ಷ ಇನ್ನೂ ನೋಂದಣಿಯಾಗಿಲ್ಲ, ಸೂಪರ್​ ಸ್ಟಾರ್​ನ ಉದ್ದೇಶಿತ ಸಂಘಟನೆಯ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿಯುತ್ತಿಲ್ಲ ಎಂದ ದಿನೇಶ್ ಗುಂಡೂ ರಾವ್, ಬಿಜೆಪಿಯ ಅನೇಕ ಮುಖಂಡರು ಈಗ ತಮಿಳಿನ ಸೂಪರ್​ ಸ್ಟಾರ್ ರಜನಿಕಾಂತ್  ಜೊತೆ ಸಂಬಂಧ ಹೊಂದಿದ್ದಾರೆ ಎಂದರು.

ಸ್ಪಷ್ಟತೆ ಸಿಕ್ಕಾಗ ಪಕ್ಷದ ರಾಜಕೀಯ ಪ್ರಭಾವ ನಿರ್ಧಾರ:

ಮುಂದಿನ ವರ್ಷ ತಮಿಳುನಾಡಿಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತದೆಯಾ ಅಥವಾ ಚುನಾವಣಾ ಮೈತ್ರಿಕೂಟ ಮಾಡಲಿದೆಯಾ ಎನ್ನುವ  ಸ್ಪಷ್ಟ ಮಾಹಿತಿಯಿಲ್ಲ ಎಂದು ಹೇಳಿದರು. ಜೊತೆಗೆ ರಜನಿಕಾಂತ್ ಪಕ್ಷದ ರಚನೆ ಹಾಗೂ ನಿಖರವಾದ ಮಾಹಿತಿ ಲಭ್ಯವಾಗುತಿಲ್ಲ. ಇವರ ರಾಜಕೀಯದ ಕುರಿತು ಸ್ಪಷ್ಟತೆ ಸಿಕ್ಕಾಗ ನಾವು ಪಕ್ಷದ ರಾಜಕೀಯ ಪ್ರಭಾವವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ ಎಂದರು.

ರಾಜಕೀಯದಲ್ಲಿ ರಜನಿಕಾಂತ್​ಗೆ ಯಶ ಸಿಗೋಲ್ಲ: ವೀರಪ್ಪ ಮೊಯಿಲಿ