ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಕ್ರೂರತೆ ದಿನೇ ದಿನೆ ಏರುತ್ತಲೇ ಇದ್ದು ಸಂಕಷ್ಟದ ಸ್ಥಿತಿ ಎದುರಾಗಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಇದರಿಂದಾಗಿ ಸಾವಿರಾರು ಕಂಪನಿಗಳು ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ.
ಹೀಗಾಗಿ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಜೊತೆಗೆ, ಸಾಕಷ್ಟು ನಷ್ಟದಲ್ಲಿರುವ ಕೆಲವು ಕಂಪನಿಗಳು ತಮ್ಮ ಕೆಲಸಗಾರರಿಗೆ ಅರ್ಧ ವೇತನ ನೀಡುತ್ತಿವೆ. ಇದರಿಂದಾಗಿ ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಖಾತೆಯಿಂದ ಹಣವನ್ನು ಹಿಂಪಡೆಯಲು ಮುಂದಾಗಿದ್ದು ಇದರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ದೇಶದಲ್ಲಿ 6 ಕೋಟಿ ನೌಕರರ PF ಖಾತೆ ಇದ್ದು, ಅದರಲ್ಲಿ ಏಪ್ರಿಲ್ನಿಂದ ಜುಲೈವರೆಗೂ ಸುಮಾರು 80 ಲಕ್ಷ ಉದ್ಯೋಗಿಗಳು ತಾವು ಕೂಡಿಟ್ಟಿದ್ದ ಸುಮಾರು 30 ಸಾವಿರ ಕೋಟಿ ಹಣವನ್ನು ಹಿಂತೆಗೆದುಕೊಂಡಿದ್ದಾರೆ.
ಕೊರೊನಾ ಸೋಂಕಿನ ಕಾರಣ ನೀಡಿ 30 ಲಕ್ಷ ಉದ್ಯೋಗಿಗಳು 8,000 ಕೋಟಿ ಹಣವನ್ನು ಭವಿಷ್ಯ ನಿಧಿಯಿಂದ ಹಿಂಪಡೆದಿದ್ದರೆ, ವೈದ್ಯಕೀಯ ಕಾರಣ ನೀಡಿ 50 ಲಕ್ಷ ಉದ್ಯೋಗಿಗಳು 22,000 ಕೋಟಿ ಹಣವನ್ನು ಹಿಂತೆಗೆದಿದ್ದಾರೆ ಎಂದು ವರದಿಯಾಗಿದೆ.
Published On - 2:38 pm, Tue, 28 July 20