ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬುಧವಾರ (ಡಿಸೆಂಬರ್ 4) ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹೈದರಾಬಾದ್‌ನಾದ್ಯಂತ ಕಂಪನಗಳ ಅನುಭವಗಳಾಗಿವೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ಬೆಳಗ್ಗೆ 7:27ರ ವೇಳೆಗೆ ಸಂಭವಿಸಿದೆ, ಇದು ಅಲ್ಲಿನ ಪ್ರದೇಶಗಳಲ್ಲಿನ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿತು.
ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ.
ಅಧಿಕಾರಿಗಳು ಪ್ರಸ್ತುತ ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದಾರೆ, ಆದರೆ ತಜ್ಞರು ಜಾಗರೂಕರಾಗಿರಲು ಮತ್ತು ಭೂಕಂಪಗಳ ಸಮಯದಲ್ಲಿ ಕಿಕ್ಕಿರಿದ ಅಥವಾ ಅಸುರಕ್ಷಿತ ಕಟ್ಟಡಗಳಿಂದ ದೂರವಿರುವಂತೆ ತಿಳಿಸಲಾಗಿದೆ. ತೆಲಂಗಾಣದಲ್ಲಿ ಭೂಕಂಪಗಳಂತಹ ಘಟನೆಗಳು ತೀರಾ ಅಪರೂಪ.
ಹೈದರಾಬಾದ್, ಹನ್ಮಕೊಂಡ, ವಾರಂಗಲ್, ಖಮ್ಮಂ, ರಂಗಾರೆಡ್ಡಿ, ಹೈದರಾಬಾದ್ ಮತ್ತು ಭದ್ರಾದ್ರಿ ಕೊಟ್ಟಗುಡೆಂನಲ್ಲಿ ಇದೇ ರೀತಿಯ ಕಂಪನದ ಅನುಭವವಾಗಿದೆ. 2024 ರ ಮಾರ್ಚ್ 14 ರಂದು ಆಂಧ್ರಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿತ್ತು.
ಅಕ್ಟೋಬರ್ 12 ರಾತ್ರಿ ಭೂಕಂಪ 2022 ಸಂಭವಿಸಿತ್ತು.ಆದಿಲಾಬಾದ್ ಜಿಲ್ಲೆಯ ಉಟ್ನೂರಿನಲ್ಲಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಜನರು ಆತಂಖಗೊಂಡಿದ್ದರು. 13 ಜುಲೈ 2022 ರಂದು ನೆಲ್ಲೂರು ಮತ್ತು ಕಡಪ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿತ್ತು. ಕಂಡ್ರಿಕ, ಪಡಮಟ ನಾಯ್ಡುಪಲ್ಲಿ, ಚಿಲಕಪಾಡು, ಕೃಷ್ಣಾಪುರ ಮತ್ತಿತರ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:36 am, Wed, 4 December 24