ಭಾರತದ ವೃದ್ಧಾಪ್ಯದ ಸವಾಲುಗಳು: ಹಿರಿಯ ನಾಗರಿಕರ ಆರೈಕೆ ಮತ್ತು ಭವಿಷ್ಯದ ಯೋಜನೆ

Santosh Nair's article in 'Your India' series: ಭಾರತವು ವೇಗವಾಗಿ ವೃದ್ಧಿಸುತ್ತಿರುವ ದೇಶ. 2050ರ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 20ರಷ್ಟು ತಲುಪಲಿದೆ. ವೃದ್ಧಾಪ್ಯದಲ್ಲಿ ಆದಾಯ, ಆರೋಗ್ಯ ರಕ್ಷಣೆ ಮತ್ತು ಕುಟುಂಬದ ಬೆಂಬಲದ ಕೊರತೆ ಪ್ರಮುಖ ಸವಾಲಾಗಿದೆ. ಜಂಟಿ ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ಔಪಚಾರಿಕ ಸುರಕ್ಷತಾ ಜಾಲಗಳ ಕೊರತೆಯಿದೆ. ಈ ಬದಲಾವಣೆಗೆ ಭಾರತವು ಈಗಲೇ ಸಿದ್ಧತೆ ನಡೆಸಬೇಕಿದೆ.

ಭಾರತದ ವೃದ್ಧಾಪ್ಯದ ಸವಾಲುಗಳು: ಹಿರಿಯ ನಾಗರಿಕರ ಆರೈಕೆ ಮತ್ತು ಭವಿಷ್ಯದ ಯೋಜನೆ
ಹಿರಿಯ ನಾಗರಿಕರ ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Oct 22, 2026 | 12:01 PM

ಬಿಹಾರದ ಸಣ್ಣ ಪಟ್ಟಣವೊಂದರಲ್ಲಿ ಎಪ್ಪತ್ತರ ಹರೆಯದ ಮಹಿಳೆಯೊಬ್ಬರು ಮಂಚದ ಮೇಲೆ ಕುಳಿತಿದ್ದಾರೆ. ಅವರ ಮಕ್ಕಳು ಬೆಂಗಳೂರು ಮತ್ತು ದುಬೈನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಊಟ, ಔಷಧಗಳನ್ನು ಅವರೇ ನಿರ್ವಹಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಒಂಟಿತನದ ಬಾಧೆ. ಅವರ ಕುಟುಂಬದಲ್ಲಿ ಯಾರೂ ಯಾವುದೇ ತಪ್ಪನ್ನು ಮಾಡಿಲ್ಲ. ಆದರೆ, ಇದು ಅವರ ವೃದ್ಧಾಪ್ಯದ ಇಂದಿನ ವಾಸ್ತವವಾಗಿಯೇ ಹೋಗಿದೆ. ಇಂತಹ ಕಥೆಗಳು ಭಾರತದಲ್ಲಿ ವೇಗದಲ್ಲಿ ಹೆಚ್ಚುತ್ತಿವೆ.

ಭಾರತ ತಾನಿನ್ನೂ ಯುವ ದೇಶವೆಂದೇ ಭಾವಿಸಿದೆ. ದಶಕಗಳವರೆಗೆ ಇದು ಸತ್ಯವಾಗಿದ್ದುದು ಹೌದು. ಉದ್ಯೋಗ ನೀತಿಯಿಂದ ಹಿಡಿದು ರಾಜಕೀಯ ಗಮನದವರೆಗೆ ಎಲ್ಲವನ್ನೂ ಕೂಡ ಇದೇ ನಂಬಿಕೆಯಲ್ಲಿ ರೂಪಿಸಿತು. ಆದರೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ವರದಿಯ ಪ್ರಕಾರ, 2050ರ ವೇಳೆಗೆ ಭಾರತದ ಹಿರಿಯ ನಾಗರಿಕರ (60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ. 20ರಷ್ಟನ್ನು ದಾಟಲಿದೆ. ಇದು ಇಂದಿನ ಪ್ರಮಾಣಕ್ಕಿಂತ ಎರಡರಷ್ಟು ಹೆಚ್ಚಾಗಿದೆ. 2046ರ ವೇಳೆಗೆ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಂತ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ.

ಇದು ದೂರದ ಮಾತಲ್ಲ. ಇಂದು 40 ವರ್ಷ ವಯಸ್ಸಿನವರಾಗಿರುವ ಯಾರಾದರೂ 2046ರಲ್ಲಿ ಆ ಹಿರಿಯ ನಾಗರಿಕರ ಗುಂಪಿನ ಭಾಗವಾಗುತ್ತಾರೆ. ಯುವ ಕಾರ್ಯಪಡೆಗಾಗಿ ನಿರ್ಮಿಸಲಾದ ಭಾರತವು, ಒಂದೇ ಕೆಲಸದ ಜೀವಿತಾವಧಿಯಲ್ಲಿ ತನ್ನ ವೃದ್ಧರಿಗೂ ಸ್ಪಂದಿಸುವ ದೇಶವಾಗಿ ಬದಲಾಗಬೇಕಿದೆ.

ಭಾರತವು ವೃದ್ಧಿಸುತ್ತಿದೆಯೇ ಎಂಬುದು ಕಠಿಣ ಪ್ರಶ್ನೆಯಲ್ಲ; ಅದು ಖಂಡಿತವಾಗಿಯೂ ವೃದ್ಧಿಸುತ್ತಿದೆ. ಆದರೆ ಅದರ ಕೆಳಗೆ ಯಾವುದೇ ಸುರಕ್ಷಿತ ಜಾಲವಿದೆಯೇ (safety net) ಎಂಬುದು ನಿಜವಾದ ಕಠಿಣ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಆರೋಗ್ಯ ಅಸಮಾನತೆ: ಭಾರತದಲ್ಲಿ ಶಿಶು ಮರಣದ ಭಿನ್ನ ಮುಖಗಳು ಮತ್ತು ಕಾರಣಗಳು

ಇಲ್ಲಿ ಪರಿಸರವು ಕಳವಳಕಾರಿಯಾಗಿದೆ. ಭಾರತದ ಶೇ. 40ಕ್ಕೂ ಹೆಚ್ಚು ಹಿರಿಯ ನಾಗರಿಕರು ಅತ್ಯಂತ ಬಡತನದ ಐದನೇ ಭಾಗದ ಜನಸಂಖ್ಯೆಯಲ್ಲಿ (wealth quintile) ವಾಸಿಸುತ್ತಿದ್ದಾರೆ. ಸುಮಾರು ಶೇ. 18.7ರಷ್ಟು ಹಿರಿಯ ನಾಗರಿಕರಿಗೆ ಯಾವುದೇ ಆದಾಯದ ಮೂಲವಿಲ್ಲ. ಪಿಂಚಣಿ ಇಲ್ಲ, ಉಳಿತಾಯವಿಲ್ಲ, ಕುಟುಂಬದಿಂದ ಸ್ಥಿರವಾದ ಬೆಂಬಲವಿಲ್ಲ, ಯಾವುದು ಇಲ್ಲ. ಹಿರಿಯ ಭಾರತೀಯರ ದೊಡ್ಡ ಪಾಲಿಗೆ, ವೃದ್ಧಾಪ್ಯವೆಂದರೆ ಕೇವಲ ಜೈವಿಕ ಹಂತವಲ್ಲ, ಅದೊಂದು ಮೌನವಾದ ಆರ್ಥಿಕ ಕುಸಿತವಾಗಿದೆ.

ಇದು ಯಾವುದೂ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ. ಭಾರತದ ಆಧುನಿಕ ಇತಿಹಾಸದಲ್ಲಿ, ವೃದ್ಧಾಪ್ಯವನ್ನು ಕುಟುಂಬದೊಳಗೆ ಮಕ್ಕಳಿಂದ, ಜಂಟಿ ಕುಟುಂಬಗಳಿಂದ ನೋಡಿಕೊಳ್ಳಲಾಗುತ್ತದೆ ಎಂದು ಭಾವಿಸಲಾಗಿತ್ತು. ಅನೇಕ ಕುಟುಂಬಗಳಲ್ಲಿ ಈ ನಂಬಿಕೆ ಇಂದಿಗೂ ಇದೆ. ಆದರೆ ಪ್ರೀತಿ ಅಥವಾ ಕರ್ತವ್ಯಕ್ಕೆ ಸಂಬಂಧಿಸದ ಕಾರಣಗಳಿಂದಾಗಿ ಇದು ಕ್ರಮೇಣ ಸಡಿಲಗೊಳ್ಳುತ್ತಿದೆ. ಸಣ್ಣ ಕುಟುಂಬಗಳೆಂದರೆ ಜವಾಬ್ದಾರಿಯನ್ನು ಹಂಚಿಕೊಳ್ಳಲು ಕಡಿಮೆ ಮಕ್ಕಳಿದ್ದಾರೆ ಎಂದರ್ಥ. ಕೆಲಸಕ್ಕಾಗಿ ಭಾರತದೊಳಗೆ ಮತ್ತು ವಿದೇಶಗಳಿಗೆ ವಲಸೆ ಹೋಗುವುದರಿಂದ ಆ ಮಕ್ಕಳಲ್ಲಿ ಅನೇಕರು ದೂರದಲ್ಲಿ ವಾಸಿಸುತ್ತಿದ್ದಾರೆ. ಏರುತ್ತಿರುವ ಜೀವನ ವೆಚ್ಚವು, ಸ್ವಂತ ಮತ್ತು ಹೆೋಷಿಯವರ ಎರಡೂ ಕುಟುಂಬಗಳನ್ನು ಏಕಕಾಲದಲ್ಲಿ ಬೆಂಬಲಿಸುವ ಮಕ್ಕಳ ಸಾಮರ್ಥ್ಯವನ್ನೂ ಕುಗ್ಗಿಸುತ್ತಿದೆ.

ಮತ್ತೊಂದೆಡೆ, ಭಾರತದಲ್ಲಿ ವೃದ್ಧಾಪ್ಯಕ್ಕಾಗಿರುವ ಔಪಚಾರಿಕ ಸುರಕ್ಷತಾ ಜಾಲಗಳು — ಪಿಂಚಣಿ, ಆರೋಗ್ಯ ರಕ್ಷಣೆ, ಹಿರಿಯರ ಆರೈಕೆ ಸೇವೆಗಳು — ಹಿಂದಿನ ಯುಗದಲ್ಲಿ ವೃದ್ಧರಾದ ಮತ್ತು ತಮ್ಮ ಜನಸಂಖ್ಯೆ ಹಾಗೂ ತೆರಿಗೆ ನೆಲೆ ಬೆಳೆಯುತ್ತಿದ್ದಾಗ ಈ ವ್ಯವಸ್ಥೆಗಳನ್ನು ನಿರ್ಮಿಸಿದ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆಯಿವೆ. ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿನ ಹೆಚ್ಚಿನ ಭಾಗಗಳು ದಶಕಗಳ ಆರ್ಥಿಕ ಸಮೃದ್ಧಿಯೊಂದಿಗೆ ಪಿಂಚಣಿ ಮತ್ತು ಹಿರಿಯರ ಆರೈಕೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿವೆ. ಆದರೆ ಭಾರತವು ಅಂತಹದೇ ಜನಸಂಖ್ಯಾ ಬದಲಾವಣೆಯನ್ನು ಕಡಿಮೆ ತಯಾರಿ ಸಮಯದೊಂದಿಗೆ ಮತ್ತು ದೊಡ್ಡ ಜನಸಂಖ್ಯೆಗೆ ತಲುಪಬೇಕಾದ ಸವಾಲಿನೊಂದಿಗೆ ಎದುರಿಸುತ್ತಿದೆ.

ಇಂದಿನ ಸಾಮಾನ್ಯ ಕುಟುಂಬಕ್ಕೆ ಇದರ ಅರ್ಥವೇನು ಎಂದು ಯೋಚಿಸಿ. ನಿವೃತ್ತಿ ಯೋಜನೆಯನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವೈಯಕ್ತಿಕ ಆರ್ಥಿಕ ನಿರ್ಧಾರವೆಂದು ಪರಿಗಣಿಸಲಾಗುತ್ತದೆ — ಮ್ಯೂಚುಯಲ್ ಫಂಡ್, ಫಿಕ್ಸೆಡ್ ಡೆಪಾಸಿಟ್ ಅಥವಾ ಮೂವತೋ ಅಥವಾ ನಾಲವತೋ ವಯಸ್ಸಿನಲ್ಲಿ ಆಯ್ಕೆಮಾಡಿದ ಪಿಂಚಣಿ ಯೋಜನೆ. ಮಕ್ಕಳು ಎಲ್ಲಿ ವಾಸಿಸುತ್ತಾರೆ, ಕೆಲಸಕ್ಕಾಗಿ ಎಷ್ಟು ದೂರ ಹೋಗುತ್ತಾರೆ ಮತ್ತು ಪೋಷಕರು ಸಂಪೂರ್ಣವಾಗಿ ಏಕಾಂಗಿಯಾಗಿರಲು ಸಾಧ್ಯವಿಲ್ಲದಾಗ ವಾಸ್ತವಿಕವಾಗಿ ಯಾರು ಹತ್ತಿರವಿರುತ್ತಾರೆ ಎಂಬ ನಿರ್ಧಾರಗಳ ಜೊತೆಗೆ, ಇಡೀ ಕುಟುಂಬವು ಒಟ್ಟಾಗಿ ಯೋಜನೆ ಮಾಡಬೇಕಾದ ಪ್ರಶ್ನೆಯಾಗಿ ಇದನ್ನು ಎಂದಿಗೂ ಚರ್ಚಿಸಲಾಗುವುದಿಲ್ಲ.

ಇದನ್ನೂ ಓದಿ: ಅಪೌಷ್ಟಿಕತೆಯಿಂದ ಬೊಜ್ಜಿನತ್ತ ಭಾರತದ ಆರೋಗ್ಯ ಸಮಸ್ಯೆ: ಒಂದೇ ಕುಟುಂಬದಲ್ಲಿ ಎರಡು ತಲೆಮಾರಿನ ಎರಡು ಸವಾಲುಗಳು

ದೇಶದ ಒಟ್ಟಾರೆ ಜನಸಂಖ್ಯೆಗಾಗಿ ಈ ದತ್ತಾಂಶದಲ್ಲಿ ಒಂದು ಮೌನವಾದ ಎಚ್ಚರಿಕೆಯೂ ಇದೆ. ಜನಸಂಖ್ಯೆಯು ಶ್ರೀಮಂತವಾಗುವ ಮುನ್ನವೇ ವೃದ್ಧಿಸುತ್ತಿದೆ. ಇದನ್ನು ಅರ್ಥಶಾಸ್ತ್ರಜ್ಞರು ಕೆಲವೊಮ್ಮೆ ಶ್ರೀಮಂತರಾಗುವ ಮುನ್ನವೇ ವೃದ್ಧರಾಗುವ ಅಪಾಯ (growing old before growing rich) ಎಂದು ಕರೆಯುತ್ತಾರೆ ಮತ್ತು ಇದು ಭಾರತದ ಸರ್ಕಾರ, ಉದ್ಯೋಗದಾತರು ಮತ್ತು ಕುಟುಂಬಗಳು ಏನು ಸಿದ್ಧತೆ ನಡೆಸಬೇಕು ಹಾಗೂ ಎಷ್ಟು ಬೇಗ ಸಿದ್ಧರಾಗಬೇಕು ಎಂಬುದನ್ನು ಬದಲಾಯಿಸುತ್ತದೆ.

ಇದು ಯಾವುದೂ ಆತಂಕಪಡುವ ಕರೆ ಅಲ್ಲ. ಇದು ಭಾರತವು ಇನ್ನೂ ಸಂಪೂರ್ಣವಾಗಿ ಆರಂಭಿಸದ ಒಂದು ರೀತಿಯ ಯೋಜನೆಗೆ ನೀಡುವ ಕರೆಯಾಗಿದೆ. ಹಿರಿಯರ ಆರೈಕೆ, ಜೆರಿಯಾಟ್ರಿಕ್ ಹೆಲ್ತ್ ಕೇರ್ (ವೃದ್ಧರ ಆರೋಗ್ಯ ರಕ್ಷಣೆ), ಭಾರತದ ಕಾರ್ಯಪಡೆಯ ಬಹುಪಾಲು ಭಾಗವಾಗಿರುವ ಅನೌಪಚಾರಿಕ ಕಾರ್ಮಿಕರಿಗೆ ಪಿಂಚಣಿ ರಕ್ಷಣೆ — ಇವುಗಳಿಗೆ ಈಗಲೇ ಗಮನ ಹರಿಸಬೇಕಾಗಿದೆ ವಿನಃ ಸಂಖ್ಯೆಗಳು 2046ರಲ್ಲಿ ಅತಿ ಹೆಚ್ಚಾದ ಮೇಲಲ್ಲ.

ಒಬ್ಬ ಸಾಮಾನ್ಯ ಓದುಗರಿಗೆ ಕೇಳಿಕೊಳ್ಳಬೇಕಾದ ಪ್ರಾಮಾಣಿಕ ಪ್ರಶ್ನೆಯೆಂದರೆ, ನಿಮ್ಮ ಕುಟುಂಬದಲ್ಲಿ ಪ್ರಸ್ತುತ 60 ವರ್ಷ ಮೇಲ್ಪಟ್ಟವರು ಯರಿದ್ದಾರೆ ಮತ್ತು ಅವರಿಗೆ ನಿಜವಾದ ಆದಾಯ, ನೈಜ ಆರೋಗ್ಯ ರಕ್ಷಣಾ ಸೌಲಭ್ಯ ಹಾಗೂ ಹತ್ತಿರದಲ್ಲಿ ಸಹಾಯ ಮಾಡಲು ಯಾರಾದರೂ ಇದ್ದಾರೆಯೇ ಎಂಬುದು. ಈ ಯಾವುದಾದರೂ ಪ್ರಶ್ನೆಗೆ ಉತ್ತರ ಅನಿಶ್ಚಿತವಾಗಿದ್ದರೆ, ಬಿಕ್ಕಟ್ಟು ಎದುರಾದ ನಂತರ ಯೋಚಿಸುವ ಬದಲು ಈ ವಾರವೇ ಈ ಕುರಿತು ಮಾತನಾಡುವುದು ಉತ್ತಮ.

ಭಾರತವು ತನ್ನ ಯುವಜನರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸಲು ದಶಕಗಳನ್ನು ಕಳೆದಿದೆ. ಈಗ ತನ್ನ ವೃದ್ಧರಿಗಾಗಿ ಯಾರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಸಮಾನ ಗಂಭೀರತೆಯಿಂದ ಕೇಳಿಕೊಳ್ಳಬೇಕಾದ ಸಮಯ ಬಂದಿದೆ.

ಆಧಾರಗಳು: ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA), ಹಿರಿಯ ನಾಗರಿಕರ ಜನಸಂಖ್ಯಾ ಪಾಲು ಮತ್ತು 2046ರ ವೇಳೆಗೆ ಹಿರಿಯರು ಹಾಗೂ ಮಕ್ಕಳ ಜನಸಂಖ್ಯಾ ಸಮತೋಲನದ ಕುರಿತ ಇಂಡಿಯಾ ಏಜಿಂಗ್ ವರದಿ ಪ್ರಕ್ಷೇಪಗಳು; ಭಾರತದ ಹಿರಿಯ ನಾಗರಿಕರ ಆದಾಯ ಮೂಲಗಳು ಮತ್ತು ಸಂಪತ್ತಿನ ಐದನೇ ಭಾಗದ ವಿತರಣೆ ಕುರಿತ UNFPA ಹಾಗೂ ಸಂಬಂಧಿತ ಜನಸಂಖ್ಯಾ ಸಂಶೋಧನಾ ದತ್ತಾಂಶ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us