ಮಹಾರಾಷ್ಟ್ರ to ಜಮ್ಮು-ಕಾಶ್ಮೀರ: ವೈಷ್ಣೋದೇವಿಯ ಸನ್ನಿಧಾನಕ್ಕೆ ವೃದ್ಧೆಯ ‘ಸೈಕಲ್’ಯಾತ್ರೆ!

|

Updated on: Oct 20, 2020 | 7:36 PM

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಖಂಗಾಂ ಎಂಬ ಪುಟ್ಟ ಹಳ್ಳಿಯಿಂದ ವೃದ್ಧೆಯೊಬ್ಬರು ಬರೋಬ್ಬರಿ 2,200 ಕಿ.ಮೀ ದೂರವಿರುವ ಮಾತಾ ವೈಷ್ಣೋದೇವಿಯ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ. ಅದು ಬಸಲ್ಲಿ ಅಥವಾ ಕಾರಿನಲ್ಲಿ ಅಲ್ಲ; ಬದಲಿಗೆ ಸೈಕಲ್​ನಲ್ಲಿ. ಹೌದು, ರೇಖಾ ದೇವ್ಭಂಕರ್​ ಎಂಬುವ 68 ವರ್ಷದ ವೃದ್ಧೆ ಮಹಾರಾಷ್ಟ್ರದ ತಮ್ಮ ಹಳ್ಳಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿಯ ಸನ್ನಿಧಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಲು ಮುಂದಾಗಿದ್ದಾರೆ. ಪ್ರಯಾಣದ ವೇಳೆ ತಮಗೆ ಬೇಕಾಗುವ ಅಗತ್ಯ ವಸ್ತುಗಳನ್ನ ಸೈಕಲ್​ನ ಕ್ಯಾರಿಯರ್​ ಮೇಲೇ ಕಟ್ಟಿಕೊಂಡು […]

ಮಹಾರಾಷ್ಟ್ರ to ಜಮ್ಮು-ಕಾಶ್ಮೀರ: ವೈಷ್ಣೋದೇವಿಯ ಸನ್ನಿಧಾನಕ್ಕೆ ವೃದ್ಧೆಯ ‘ಸೈಕಲ್’ಯಾತ್ರೆ!
Follow us on

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಖಂಗಾಂ ಎಂಬ ಪುಟ್ಟ ಹಳ್ಳಿಯಿಂದ ವೃದ್ಧೆಯೊಬ್ಬರು ಬರೋಬ್ಬರಿ 2,200 ಕಿ.ಮೀ ದೂರವಿರುವ ಮಾತಾ ವೈಷ್ಣೋದೇವಿಯ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ. ಅದು ಬಸಲ್ಲಿ ಅಥವಾ ಕಾರಿನಲ್ಲಿ ಅಲ್ಲ; ಬದಲಿಗೆ ಸೈಕಲ್​ನಲ್ಲಿ.

ಹೌದು, ರೇಖಾ ದೇವ್ಭಂಕರ್​ ಎಂಬುವ 68 ವರ್ಷದ ವೃದ್ಧೆ ಮಹಾರಾಷ್ಟ್ರದ ತಮ್ಮ ಹಳ್ಳಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿಯ ಸನ್ನಿಧಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಲು ಮುಂದಾಗಿದ್ದಾರೆ. ಪ್ರಯಾಣದ ವೇಳೆ ತಮಗೆ ಬೇಕಾಗುವ ಅಗತ್ಯ ವಸ್ತುಗಳನ್ನ ಸೈಕಲ್​ನ ಕ್ಯಾರಿಯರ್​ ಮೇಲೇ ಕಟ್ಟಿಕೊಂಡು ತಮ್ಮ ತೀರ್ಥಯಾತ್ರೆ ಕಂ ಸೈಕಲ್​ ಟ್ರಿಪ್​ ಶುರುಮಾಡಿದ್ದಾರೆ.

ರೇಖಾರವರು ಇದೇ ಜುಲೈ 24 ರಂದು ತಮ್ಮ ಮನೆಯಿಂದ ಹೊರಟು ಸದ್ಯ ಮಧ್ಯಪ್ರದೇಶ ತಲುಪಿದ್ದಾರೆ. ಈ ನಡುವೆ, ಕೆಲವರೊಟ್ಟಿಗೆ ಮಾತನಾಡಿದ ವೃದ್ಧೆ ಪ್ರತಿಯೊಬ್ಬ ಮಹಿಳೆ ಧೈರ್ಯದಿಂದ ಬದುಕು ಸಾಗಿಸಬೇಕು ಮತ್ತು ಈ ನಿಟ್ಟಿನಲ್ಲಿ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.