AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

67 ವರ್ಷ ನಂತರ ಓರ್ವ ಮಹಿಳಾ ಅಪರಾಧಿಗೆ ಮರಣ ದಂಡನೆ! ಗಲ್ಲು ಹೇಗೆ ಗೊತ್ತಾ?

ಅಮೇರಿಕೆಯಲ್ಲಿ 67 ವರ್ಷದ ನಂತರ ಮೊದಲ ಬಾರಿಗೆ ಓರ್ವ ಮಹಿಳಾ ಅಪರಾಧಿಗೆ ಮರಣ ದಂಡನೆ ನೀಡಲಾಗುತ್ತಿದೆ. ಡಿಸೆಂಬರ್ 8 ರಂದು ಓರ್ವ ಮಹಿಳಾ ಅಪರಾಧಿಗೆ ಒಂದು ಮಾರಣಾಂತಿಕ ಇಂಜೆಕ್ಷನ್ ಕೊಡುವ ಮೂಲಕ ಮರಣ ದಂಡನೆಯನ್ನು ಜಾರಿಗೊಳಿಸಿಲಾಗುವುದು. 1953 ರಲ್ಲಿ ಕೊನೆಯ ಬಾರಿ ಓರ್ವ ಅಪರಾಧಿಗೆ ಮರಣದಂಡನೆ ನೀಡಲಾಗಿತ್ತು. ಈ ಮಹಿಳೆ ಮಾಡಿದ ಅಪರಾಧ ಏನು? ವಿವಿಧ ಸುದ್ದಿ ಸಂಸ್ಥೆಗಳ ಪ್ರಕಾರ, ಅಪರಾಧಿ ಲೀಸಾ ಮೊಂಟೋಮೆರಿ ಒಂದು ಬರ್ಬರ ಕೊಲೆ ಮಾಡಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಕೊಲೆ ನಡೆದ […]

67 ವರ್ಷ ನಂತರ ಓರ್ವ ಮಹಿಳಾ ಅಪರಾಧಿಗೆ ಮರಣ ದಂಡನೆ! ಗಲ್ಲು ಹೇಗೆ ಗೊತ್ತಾ?
ಸಾಧು ಶ್ರೀನಾಥ್​
|

Updated on: Oct 20, 2020 | 6:17 PM

Share

ಅಮೇರಿಕೆಯಲ್ಲಿ 67 ವರ್ಷದ ನಂತರ ಮೊದಲ ಬಾರಿಗೆ ಓರ್ವ ಮಹಿಳಾ ಅಪರಾಧಿಗೆ ಮರಣ ದಂಡನೆ ನೀಡಲಾಗುತ್ತಿದೆ. ಡಿಸೆಂಬರ್ 8 ರಂದು ಓರ್ವ ಮಹಿಳಾ ಅಪರಾಧಿಗೆ ಒಂದು ಮಾರಣಾಂತಿಕ ಇಂಜೆಕ್ಷನ್ ಕೊಡುವ ಮೂಲಕ ಮರಣ ದಂಡನೆಯನ್ನು ಜಾರಿಗೊಳಿಸಿಲಾಗುವುದು. 1953 ರಲ್ಲಿ ಕೊನೆಯ ಬಾರಿ ಓರ್ವ ಅಪರಾಧಿಗೆ ಮರಣದಂಡನೆ ನೀಡಲಾಗಿತ್ತು.

ಈ ಮಹಿಳೆ ಮಾಡಿದ ಅಪರಾಧ ಏನು? ವಿವಿಧ ಸುದ್ದಿ ಸಂಸ್ಥೆಗಳ ಪ್ರಕಾರ, ಅಪರಾಧಿ ಲೀಸಾ ಮೊಂಟೋಮೆರಿ ಒಂದು ಬರ್ಬರ ಕೊಲೆ ಮಾಡಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಕೊಲೆ ನಡೆದ ದಿನ, ಆಕೆ ಮಿಸೌರಿಯಲ್ಲಿರುವ 23 ವರ್ಷದ ಬಾಬಿ ಜೋ ಸ್ಟಿನೆಟ್ ಅವರ ಮನೆಗೆ ಸಾಕೋ ನಾಯಿ ಖರೀದಿಸುವ ನೆಪದಲ್ಲಿ ಬರುತ್ತಾಳೆ. ಮನೆಯೊಳಗೆ ಬಂದವಳೇ ಬಾಬಿಯನ್ನು ಕಟ್ಟಿ ಕುತ್ತಿಗೆಯನ್ನು ಒತ್ತುತ್ತಾಳೆ. ಒಂದು ಬಾರಿ ಪ್ರಜ್ಞೆ ತಪ್ಪಿದ್ದ ಅವಳಿಗೆ ಸ್ವಲ್ಪ ಹೊತ್ತಿಗೆ ಪ್ರಜ್ಞೆ ಬರುತ್ತದೆ.

ಲೀಸಾ ಅಡುಗೆ ಮನೆಯ ಚಾಕುವಿನಿಂದ ಬಾಬಿಯ ಹೊಟ್ಟೆ ಕೊಯ್ಯುತ್ತಾಳೆ. ಆಗ ಬಾಬಿ ಕೊನೆ ಬಾರಿಗೆ ತಪ್ಪಿಸಿಕೊಳ್ಳಲು ಬಹಳ ಹೋರಾಟ ಮಾಡುತ್ತಾಳೆ. ಕೊನೆಗೆ ಅವಳು ಸಾಯುತ್ತಿರುವಂತೆಯೇ ಅಪರಾಧಿ ಲೀಸಾ ಹೊಟ್ಟೆ ಕೊಯ್ದು ಎಂಟು ತಿಂಗಳ ಮಗುವನ್ನು ಹೊತ್ತೊಯ್ದುಬಿಡುತ್ತಾಳೆ.

2008 ರಲ್ಲಿ ಪೊಲೀಸರು ಅವಳನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, ಅವಳು ತಾನು ಮಾಡಿದ ಅಪರಾಧವನ್ನು ಒಪ್ಪಿಕೊಳ್ಳುತ್ತಾಳೆ. ಅವಳ ಕಡೆಯ ವಕೀಲರು ಅಪರಾಧಿಯ ಆರೋಗ್ಯ ತುಂಬಾ ಕ್ಷೀಣಿಸಿದೆ, ಹಾಗಾಗಿ ಅವಳಿಗೆ ಕಠಿಣ ಶಿಕ್ಷೆ ಕೊಡಬಾರದೆಂದು ಕೇಳಿಕೊಳ್ಳುತ್ತಾರೆ. ಆದರೆ, ನ್ಯಾಯಾಧೀಶರು ಇದನ್ನು ಒಪ್ಪಿಕೊಳ್ಳದೆ, ಅವಳಿಗೆ ಅಪಹರಣ ಮತ್ತು ಬರ್ಬರ ಕೊಲೆಯ ಅಪರಾಧಕ್ಕೆ ಮರಣದಂಡನೆಯ ಶಿಕ್ಷೆಯನ್ನು ಘೋಷಿಸುತ್ತಾರೆ.

ಇದಾದ ಮೇಲೆ ಲೀಸಾ ಮೊಂಟೋಮೆರಿ ಮೇಲ್ಮನವಿ ಸಲ್ಲಿಸುತ್ತಾ ಹೋಗುತ್ತಾಳೆ. ಆದರೆ, ಉನ್ನತ ಫೆಡರಲ್ ನ್ಯಾಯಾಲಯಗಳೆಲ್ಲ ಅವಳ ಮನವಿಯನ್ನು ತಿರಸ್ಕರಿಸುತ್ತಾರೆ. ಈಗ ಅಪರಾಧಿ ಲೀಸಾಗೆ 52 ವರ್ಷ. ಇದೇ ಡಿಸೆಂಬರ್ 8 ರಂದು ಅವಳಿಗೆ ಮರಣದಂಡನೆ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.