ಕಾಡಾನೆ ಅರಿಕೊಂಬನ್ ದಾಳಿಯಿಂದ ಗಾಯಗೊಂಡಿದ್ದ ಕಂಬಂ ಮೂಲದ ಪಾಲರಾಜ್ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ಶನಿವಾರ ಕುಂಬಂ ಪ್ರವೇಶಿಸಿದ ಅರಿಕೊಂಬ ಆನೆ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿತ್ತು, ಆಕ್ರಮಣಕಾರಿ ಆನೆಯು ಆಟೋರಿಕ್ಷಾಗೆ ಹಾನಿ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಭೀಕರ ದಾಳಿ ಸಂಭವಿಸಿದಾಗ ಪಾಲರಾಜ್ ಅವರು ವಾಹನದೊಳಗೆ ಇದ್ದರು ಹೀಗಾಗಿ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.
ಆನೆಯನ್ನು ಶಾಂತಗೊಳಿಸಿ ಮೇಘಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ತಮಿಳುನಾಡು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದರೂ, ಆನೆ ದಟ್ಟ ಅರಣ್ಯಕ್ಕೆ ವಾಪಸಾದ ಕಾರಣ ಆನೆ ಸಿಗಲಿಲ್ಲ.
ಇಡುಕ್ಕಿ ಜಿಲ್ಲೆಯ ಚಿನ್ನಕನಾಲ್ ಪ್ರದೇಶದಲ್ಲಿ ಆನೆ 11 ಜನರನ್ನು ಕೊಂದು 300 ಮನೆಗಳು ಮತ್ತು ಅಂಗಡಿಗಳನ್ನು ನಾಶಪಡಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಓದಿ: ತಮಿಳುನಾಡು ಗಡಿಯಲ್ಲಿ ಆನೆ ಹಾವಳಿ: ಸಿಕ್ಕ ಸಿಕ್ಕವರ ಮೇಲೆ ದಾಳಿ, ಇಬ್ಬರು ಸಾವು, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಚಿನ್ನಕನಾಲ್‌ನಿಂದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸುಮಾರು 100 ಕಿಲೋಮೀಟರ್‌ಗಳವರೆಗೆ ಸಾಗುವ ಮೊದಲು ಆನೆಯನ್ನು ಶಾಂತಗೊಳಿಸಲಾಯಿತು ಮತ್ತು ರೇಡಿಯೊ ಕಾಲರ್ ಹಾಕಲಾಗಿತ್ತು. ಆದಾಗ್ಯೂ, ಇದು ತಮಿಳುನಾಡು ಅರಣ್ಯ ವ್ಯಾಪ್ತಿಯೊಳಗೆ ಚಲಿಸುತ್ತಲೇ ಇತ್ತು. ತಮಿಳುನಾಡು ಮತ್ತು ಕೇರಳ ಅರಣ್ಯಾಧಿಕಾರಿಗಳು ಆನೆಯ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 am, Tue, 30 May 23