ಅಬ್ಬಬ್ಬಾ ಲಾಟರಿ! ಕೈಯಲ್ಲಿ ಕಾಸಿಲ್ಲದಿದ್ದರೂ 11 ಮಹಿಳಾ ಪೌರಕಾರ್ಮಿಕರು ಒಟ್ಟಾಗಿ ಟಿಕೆಟ್​ ಖರೀದಿಸಿ 10 ಕೋಟಿ ಕೇರಳ ಲಾಟರಿ ಗೆದ್ದುಬಿಟ್ಟರು!

|

Updated on: Jul 29, 2023 | 10:57 AM

Monsoon 2023 Jack Pot: ಕೇರಳದಲ್ಲಿ ಮೊದಲಿಡುವ ದೇಶದ ಮುಂಗಾರು ಋತು ಈ ಬಾರಿ ಈ ಮಹಿಳೆಯರಿಗೆ ಅಮೋಘವಾಗಿ ಪರಿಣಮಿಸಿದೆ. ಕೇರಳದ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುತ್ತಿರುವ ಆ 11 ಮಹಿಳೆಯರು 250 ಮುಖಬೆಲೆಯ ಲಾಟರಿ ಟಿಕೆಟ್ ಖರೀದಿಸಲು ತಲಾ ಸುಮಾರು 25 ರೂಪಾಯಿಗಳನ್ನು ಸಂಗ್ರಹಿಸಿ 10 ಕೋಟಿ ರೂಪಾಯಿ ಗೆದ್ದಿದ್ದಾರೆ.

ಅಬ್ಬಬ್ಬಾ ಲಾಟರಿ! ಕೈಯಲ್ಲಿ ಕಾಸಿಲ್ಲದಿದ್ದರೂ 11 ಮಹಿಳಾ ಪೌರಕಾರ್ಮಿಕರು ಒಟ್ಟಾಗಿ ಟಿಕೆಟ್​ ಖರೀದಿಸಿ 10 ಕೋಟಿ ಕೇರಳ ಲಾಟರಿ ಗೆದ್ದುಬಿಟ್ಟರು!
ಕೇರಳ ಲಾಟರಿಗೆ ನೂತನ ಬ್ರ್ಯಾಂಡ್​​ ಅಂಬಾಸಿಡರ್​​ಗಳು ಈ ಅದೃಷ್ಟ ದೇವತೆಗಳು!
Follow us on

ಮಲಪ್ಪುರಂ (Malappuram): ಅವರಲ್ಲಿ ಅನಕ್ಷರತೆ, ಬಡತನ ತಾಂಡವವಾಡುತ್ತಿತ್ತು. ಆದರೆ ಸಾಮಾನ್ಯ ಜ್ಞಾನಕ್ಕೆ ಕೊರತೆ ಇರಲಿಲ್ಲ. ಸ್ವಲ್ಪ ಜಾಣ್ಮೆ ಉಪಯೋಗಿಸಿದ್ದಕ್ಕೆ 11 ಮಹಿಳಾ ಪೌರ ಕಾರ್ಮಿಕರು ಇದ್ದಕ್ಕಿದ್ದಂತೆ ಅದೃಷ್ಟ ದೇವತೆಯರಾಗಿರುವ ತೆಜೋಹಾರಿ ಕತೆಯಿದು. 11 ಮಂದಿ ಮಹಿಳಾ ಪೌರ ಕಾರ್ಮಿಕರ ತಂಡ (women civic workers), ತಮ್ಮ ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ, ಸಂಘಟಿತರಾಗಿ ಕೇರಳದ ಮುಂಗಾರು ಬಂಪರ್​​ ಲಾಟರಿ ಟಿಕೆಟ್​ (Kerala state-sponsored Monsoon Bumper lottery) ಅವಕಾಶವನ್ನು ಖರೀದಿಸಲು ನಿರ್ಧರಿಸಿದರು. ಅದಕ್ಕಾಗಿ ಅವರು ತಮ್ಮ ಅಲ್ಪ ಆದಾಯದಿಂದ ಬರುವ ಸಣ್ಣ ಮೊತ್ತವನ್ನು ಒಟ್ಟುಗೂಡಿಸಿ 250 ರೂಪಾಯಿ ಮೌಲ್ಯದ ಲಾಟರಿ  ಟಿಕೆಟ್ ಖರೀದಿಸಿದರು. ಲಾಟರಿ ಫಲಿತಾಂಶ ಪ್ರಕಟವಾದಾಗ ಅವರು ಜಾಕ್‌ಪಾಟ್ ಹೊಡೆದು (Jackpot) 10 ಕೋಟಿ ರೂಪಾಯಿ ಧನಿಕರಾದರು. ಹೌದು ಕೇರಳ ಲಾಟರಿಗೆ ನೂತನ ಬ್ರ್ಯಾಂಡ್​​ ಅಂಬಾಸಿಡರ್​​ಗಳು ಈ ಅದೃಷ್ಟ ದೇವತೆಗಳು!

ಕೇರಳದ ಮಲಪ್ಪುರಂ ಜಿಲ್ಲೆಯ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರು, ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವ ತಮ್ಮ ದಿನಚರಿಯಲ್ಲಿ ನಿರತರಾಗಿದ್ದಾಗ ಅವರಿಗೆ ತಾವು ಜಾಕ್​​ಪಾಟ್​ ಗೆದ್ದಿರುವ ಸುದ್ದಿ ತಿಳಿದಿದೆ. ತಲಾ ಒಂದಷ್ಟು ಹಣ ಸಂಗ್ರಹಿಸಿ, 250 ರೂಪಾಯಿ ಟಿಕೆಟ್ ಖರೀದಿಸಿದ್ದ 11 ಮಹಿಳೆಯರಿಗೆ 10 ಕೋಟಿ ರೂಪಾಯಿಗಳ ಮಾನ್ಸೂನ್ ಜಾಕ್‌ಪಾಟ್ ಹೊಡೆದಿದೆ ಎಂದು ಕೇರಳ ಲಾಟರಿ ಇಲಾಖೆ ಪ್ರಕಟಿಸಿದೆ.

ಸುದ್ದಿ ಹರಡಿದ ತಕ್ಷಣ, ಮಲಪ್ಪುರಂನ ಪರಪ್ಪನಂಗಡಿಯಲ್ಲಿರುವ ಪುರಸಭೆಯ ಗೋಡೌನ್ ಆವರಣಕ್ಕೆ ಹಲವಾರು ಜನರು ಆಗಮಿಸಿ ಜಾಕ್‌ಪಾಟ್ ವಿಜೇತರನ್ನು ಭೇಟಿ ಮಾಡಿ ಅಭಿನಂದಿಸಿದರು. ಆ ವೇಳೆಯೂ ಆ 11 ಮಂದಿ ಅದೃಷ್ಟ ದೇವತೆಯರು ಹಸಿರು ಮೇಲುಡುಪುಗಳು ಮತ್ತು ರಬ್ಬರ್ ಕೈಗವಸುಗಳನ್ನು ಧರಿಸಿದ್ದರು ಎಂಬುದು ಗಮನಾರ್ಹ! ಈ ಹಣವು ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ವಿಜೇತರಲ್ಲಿ ಒಬ್ಬರಾದ ರಾಧಾ ಅವರು ತಮ್ಮ ಅಗಾಧವಾದ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಇವರು ಅದೃಷ್ಟ ಲಕ್ಷ್ಮಿಯರು!

ಈ ಎಲ್ಲಾ 11 ಮಹಿಳೆಯರು ಹರಿತಾ ಕರ್ಮ ಸೇನೆ ಸಂಘಟನೆಯಡಿ (Malappuram Haritha Karma Sena) ಕೆಲಸ ಮಾಡುತ್ತಾರೆ. ಇವರು ಸ್ಥಳೀಯ ಮನೆಗಳು ಮತ್ತು ಸಂಸ್ಥೆಗಳಿಂದ ದಿನಾ ತ್ಯಾಜ್ಯವನ್ನು ಸಂಗ್ರಹಿಸುವ ಕಾಯಕ ಮಾಡಿಕೊಂಡುಬಂದವರು. ಪರಪ್ಪನಂಗಡಿ ಘಟಕದಲ್ಲಿ ಕೆಲಸ ಮಾಡುವ ಈ ಮಹಿಳೆಯರಿಗೆ 7,500 ರೂ.ನಿಂದ 14,000 ರೂ.ವರೆಗೆ ವೇತನವಿದೆ.

ಹರಿತಾ ಕರ್ಮ ಸೇನೆಯ ಅಧ್ಯಕ್ಷೆ ಶೀಜಾ ಅವರು ಮಾತನಾಡಿ, ಅದೃಷ್ಟವು ಈ ಬಾರಿ ಸರಿಯಾದವರನ್ನು ಆಯ್ಕೆ ಮಾಡಿದೆ ಎನಿಸುತ್ತದೆ. ಈ ವಿಜೇತರು ಸಮರ್ಪಿತ ಕೆಲಸಗಾರರು ಮತ್ತು ಅವರ ಕುಟುಂಬಗಳಿಗೆ ಇವರೇ ಆಧಾರ, ಅನ್ನದಾತರು ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಈ ಮಹಿಳೆಯರು ಅತ್ಯಂತ ವಿನಮ್ರವಾಗಿ ಜೀವನ ನಡೆಸುತ್ತಿದ್ದಾರೆ. ಜೀವನದ ಕಠೋರ ಸತ್ಯಗಳ ವಿರುದ್ಧ ಅವರು ದಿನನಿತ್ಯ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.

“ಅನೇಕರಿಗೆ ತೀರಿಸಲು ಸಾಲಗಳಿವೆ, ಮದುವೆಗೆ ಬಂದ ಹೆಣ್ಣುಮಕ್ಕಳಿದ್ದಾರೆ, ಹತ್ತಿರದ ಮತ್ತು ಆತ್ಮೀಯರ ಚಿಕಿತ್ಸಾ ವೆಚ್ಚವನ್ನು ಪೂರೈಸಬೇಕಾಗಿದೆ. ಅವರು ಅತ್ಯಂತ ವಿನಮ್ರ ಕುಟುಂಬಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದರು.

ಕುತೂಹಲಕಾರಿಯಾಗಿ ಸಂಗತಿಯೆಂದರೆ ಈ 11 ಮಹಿಳೆಯರು ತಮ್ಮ ಅದೃಷ್ಟವನ್ನು ಪ್ರಯತ್ನಿಸಿದ್ದು ಇದೇ ಮೊದಲ ಬಾರಿ ಅಲ್ಲ. ಕಳೆದ ವರ್ಷವೂ ಇದೇ ಮಹಿಳೆಯರು ಓಣಂ ಬಂಪರ್ ಟಿಕೆಟ್‌ಗೆ ಇದೇ ರೀತಿ ಹಣವನ್ನು ಸಂಗ್ರಹಿಸಿದ್ದರು. ಅಂದು ಅವರಿಗೆ ಜಸ್ಟ್​ 7,500 ರೂಪಾಯಿ ಸಮಾಧಾನಕರ ಬಹುಮಾನ ಲಭಿಸಿತ್ತು. ಆ ಯಶಸ್ಸು ಮತ್ತೊಂದು ಅವಕಾಶಕ್ಕೆ ದಾರಿದೀಪವಾಯಿತು, ಅವರ ನಿರ್ಧಾರವನ್ನು ಉತ್ತೇಜಿಸಿತು. ಅದೇ ಈಗ 11 ಕೋಟಿ ರೂಪಾಯಿಯಾಗಿ, ತಲಾ ಅಂದಾಜು 90 ಲಕ್ಷ ರೂಪಾಯಿ ಪಾಲು ಗಳಿಸಿದ್ದಾರೆ.

Published On - 8:58 am, Sat, 29 July 23