Sankranti: ಸಂಕ್ರಾಂತಿಗೆ ಹೊಸ ಅಳಿಯ ಬಂದ ಅಂತಾ 379 ರುಚಿರುಚಿಯಾದ ಆಹಾರ ಮಾಡಿಟ್ಟರು ಅತ್ತೆ-ಮಾವ! ಅಳಿಯ ಏನಂದ?

| Updated By: ಸಾಧು ಶ್ರೀನಾಥ್​

Updated on: Jan 17, 2023 | 10:51 AM

Makar Sankranti 2023: ಏಲೂರು ನಗರದ ಡೊಂಗಲ ಮಂಟಪದ ಭೀಮರಾವ್ ಮತ್ತು ಚಂದ್ರಲೀಲಾ ದಂಪತಿ ತಮ್ಮ ಮಗಳನ್ನು ಅನಕಾಪಲ್ಲಿಯ ಬುದ್ಧ ಮುರಳಿಧರ್​​​ಗೆ ಕೊಟ್ಟು ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹ ಮಾಡಿದ್ದರು. ಮದುವೆಯ ನಂತರದ ಮೊದಲ ಸಂಕ್ರಾಂತಿ ಇದಾಗಿದ್ದರಿಂದ ಮಗಳು ಮತ್ತು ಅಳಿಯ ಹಬ್ಬಕ್ಕೆ ಬಂದಿದ್ದರು.

Sankranti: ಸಂಕ್ರಾಂತಿಗೆ ಹೊಸ ಅಳಿಯ ಬಂದ ಅಂತಾ 379 ರುಚಿರುಚಿಯಾದ ಆಹಾರ ಮಾಡಿಟ್ಟರು ಅತ್ತೆ-ಮಾವ! ಅಳಿಯ ಏನಂದ?
ಸಂಕ್ರಾಂತಿಗೆ ಹೊಸ ಅಳಿಯ ಬಂದ ಅಂತಾ 379 ರುಚಿರುಚಿಯಾದ ಆಹಾರ ಮಾಡಿಟ್ಟರು
Image Credit source: timesofindia.indiatimes.com
Follow us on

ಆಂಧ್ರದ ಗೋದಾವರಿ (Godavari) ಅಂದ್ರೆ ಸುಮ್ನೇನಾ, ಅಲ್ಲೇನೋ ವಿಶೇಷ ಇದ್ದೇಇರುತ್ತೆ. ಅದೂ ಸಂಕ್ರಮಣ ಸಂದರ್ಭದಲ್ಲಿ ಅದು ತುಸು ಹೆಚ್ಚೆ ಅನ್ನುವಂತಿರುತ್ತದೆ. ಹಾಗೆಂದೇ, ಸಂಕ್ರಾಂತಿ ಹಬ್ಬಕ್ಕೆ ಬಂದ ಹೊಸ ಅಳಿಮಯ್ಯನಿಗೆ 379 ಬಗೆಯ ತಿನಿಸುಗಳೊಂದಿಗೆ ಸಮೃದ್ಧ ಭೋಜನ ಉಣಬಡಿಸಿದ್ದಾರೆ ಅತ್ತೆ-ಮಾವ. ಇದೆಲ್ಲಾ ನಡೆದಿದ್ದು ಮೊನ್ನೆ ಭಾನುವಾರ ಸಂಕ್ರಾಂತಿ ಹಬ್ಬದಂದು (Makar Sankranti 2023). ಇತ್ತೀಚಿನ ದಿನಗಳಲ್ಲಿ ಈ ಪಾಟಿ 379 ತಿನಿಸುಗಳನ್ನು ಅಳಿಮಯನಿಗೆ (Son in Law) ತಿನಿಸಿರುವುದು ಅತ್ಯಧಿಕವಾಗಿದೆ.

ಆಂಧ್ರದ ಗೋದಾವರಿ ಅಂದ್ರೆ ಸುಮ್ನೇನಾ, ಅಲ್ಲೇನೋ ವಿಶೇಷ ಇದ್ದೇಇರುತ್ತೆ. ಅದೂ ಸಂಕ್ರಮಣ ಸಂದರ್ಭದಲ್ಲಿ ಅದು ತುಸು ಹೆಚ್ಚೆ ಅನ್ನುವಂತಿರುತ್ತದೆ. ಹಾಗೆಂದೇ, ಸಂಕ್ರಾಂತಿ ಹಬ್ಬಕ್ಕೆ ಬಂದ ಹೊಸ ಅಳಿಮಯ್ಯನಿಗೆ 379 ಬಗೆಯ ತಿನಿಸುಗಳೊಂದಿಗೆ ಸಮೃದ್ಧ ಭೋಜನ ಉಣಬಡಿಸಿದ್ದಾರೆ ಅತ್ತೆ-ಮಾವ. ಅಷ್ಟೂ ತಿನಿಸುಗಳನ್ನು ನೋಡಿ ಬೆರಗಾಗುವ ಸರದಿ ಅಳಿಮಯ್ಯನದ್ದು. ವಿಶಾಲವಾದ ಡೈನಿಂಗ್ ಟೇಬಲ್ ಮೇಲೆ ಜಾಗವೇ ಇಲ್ಲದಂತೆ ಎಲ್ಲಾ ಭಕ್ಷ್ಯಗಳಿಂದ ತುಂಬಿತ್ತು. ಹೊಸದಾಗಿ ಬಂದ ಅಳಿಯ ಈ ರೀತಿ ನೀತಿಗಳನ್ನು ನೋಡಿ ಬೆಚ್ಚಿಬಿದ್ದ. ಅಷ್ಟಕ್ಕೂ ಯಾರಪ್ಪಾ ಆ ಅದೃಷ್ಟಶಾಲಿ ಅಳಿಯ ಅಂದ್ರೆ ಆತ ವಿಶಾಖಪಟ್ಟಣ ಮೂಲದ ಆರ್ಕಿಟೆಕ್ಟ್​​.

ಏಲೂರು ನಗರದ ಡೊಂಗಲ ಮಂಟಪದ ಭೀಮರಾವ್ ಮತ್ತು ಚಂದ್ರಲೀಲಾ ದಂಪತಿ ತಮ್ಮ ಮಗಳನ್ನು ಅನಕಾಪಲ್ಲಿಯ ಬುದ್ಧ ಮುರಳಿಧರ್​​​ಗೆ ಕೊಟ್ಟು ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹ ಮಾಡಿದ್ದರು. ಮದುವೆಯ ನಂತರದ ಮೊದಲ ಸಂಕ್ರಾಂತಿ ಇದಾಗಿದ್ದರಿಂದ ಮಗಳು ಮತ್ತು ಅಳಿಯ ಹಬ್ಬಕ್ಕೆ ಬಂದಿದ್ದರು. ಅಳಿಯನ ಆಗಮನದ ಸಂದರ್ಭದಲ್ಲಿ ಏನಾದರೂ ವಿಶೇಷವಾಗಿ ಮಾಡಬೇಕೆಂದು ಮನೆಯವರು ನಿರ್ಧರಿಸಿದರು. ರೊಟ್ಟಿ, ಕರ್ರಿ, ಸಿಹಿತಿಂಡಿ, ಹಣ್ಣುಗಳು, ಕೂಲ್ ಡ್ರಿಂಕ್ಸ್, ಉಪ್ಪಿನಕಾಯಿ ಹೀಗೆ 379 ಬಗೆಯ ಖಾದ್ಯಗಳನ್ನು ತಯಾರಿಸಿಟ್ಟರು. ಅದನ್ನು ನೋಡಿ ಅಳೀಮಯ್ಯ ದಂಗಾದ. ಅತ್ತೆಯ ಪ್ರೀತಿಗೆ, ಮಾವನ ಮಮಕಾರಕ್ಕೆ ಫುಲ್ ಫಿದಾ ಆಗಿಬಿಟ್ಟನಂತೆ.

ಡೈನಿಂಗ್ ಟೇಬಲ್ ಪೂರ್ತಿ ತಿನಿಸುಗಳಿಂದ ತುಂಬಿತ್ತು. ಅಳಿಯ ಮತ್ತು ಮಗಳನ್ನು ಊಟಕ್ಕೆ ಬಡಿಸಿದರು. ಹಳೆಯ ದಂಪತಿಯಿಬ್ಬರೂ ನವ ದಂಪತಿಗೆ (ಅಳಿಯ ಮತ್ತು ಮಗಳು) ಕೊಸರಿ ಕೊಸರಿ ಉಣಿಸಿದ್ದೇ ಉಳಿಸಿದ್ದು. ಆಂಧ್ರದ ಗೋದಾವರಿ ಜಿಲ್ಲೆ ಸಂಸ್ಕೃತಿ, ಸಂಪ್ರದಾಯಗಳ ತಾಯ್ನಾಡು… ಹಾಗಾಗಿ ನಮ್ಮ ಅಳಿಯ ಮಗಳಿಗೆ 379 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದೆವು ಎನ್ನುತ್ತಾರೆ ಭೀಮರಾವ್ ದಂಪತಿ.

ಅತ್ತೆ ಬಡಿಸಿದ ಅಷ್ಟೂ ತಿನಿಸುಗಳನ್ನು ಬಹಳ ಪ್ರೀತಿಯಿಂದ ತಿನ್ನುವುದು ಕಷ್ಟವಾದರೂ ಅಳಿಯ ಎಲ್ಲ ಖಾದ್ಯಗಳನ್ನು ಇಷ್ಟಪಟ್ಟು ಸವಿಯುತ್ತಿದ್ದರು. ಇತ್ತೀಚೆಗೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರದ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ತಮ್ಮ ಅಳಿಯನಿಗೆ 173 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದರು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Tue, 17 January 23