ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಪುರಿಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ಭೇಟಿ ಕೊಟ್ಟು ಬೀಚ್​​ನಲ್ಲಿ ಇಬ್ಬರು ಕುಳಿರುವಾಗ ಅವರನ್ನೇ ಹಿಂಬಾಲಿಸಿ ಬಂದ ಗುಂಪೊಂದು ಅವರಿಬ್ಬರ ವಿಡಿಯೋವನ್ನು ಚಿತ್ರೀಕರಿಸಿ ಹಣ ನೀಡುವಂತೆ ಬೆದರಿಕೆ ಹಾಕಿತ್ತು. ಅವರು ಕೇಳಿದಷ್ಟು ಹಣ ಕೊಡಲು ಸಾಧ್ಯವಾಗದಿದ್ದಾಗ, ಆಕೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ನಂತರ ಅವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದರು. ಆನ್​ಲೈನ್ ವಹಿವಾಟಿನ ಮೂಲಕ 2,500 ರೂ. ಮತ್ತು 1,000 ರೂ. ನಗದು ಪಾವತಿಸಿದ್ದಾರೆ, ಆದರೆ ಆ ಮೊತ್ತ ಸಾಕಾಗಲಿಲ್ಲ. ಹೆಚ್ಚಿನ ಹಣ ನೀಡಲು ನಿರಾಕರಿಸಿದಾಗ, ಆರೋಪಿ ಮೊದಲು ಆ ವ್ಯಕ್ತಿಗೆ ಥಳಿಸಿ, ನಂತರ ಅವರ ಮುಂದೆಯೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಕ್ರೈಂ

Updated on: Sep 16, 2025 | 12:32 PM

ಪುರಿ, ಸೆಪ್ಟೆಂಬರ್ 16: ಪುರಿಯಲ್ಲಿ ಗೆಳೆಯ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ(Rape)ವೆಸಗಲಾಗಿದೆ.ಒಡಿಶಾದ ಪುರಿ ಜಿಲ್ಲೆಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಯುವತಿ ದೇವಸ್ಥಾನಕ್ಕೆ ಭೇಟಿಕೊಟ್ಟು ಗೆಳೆಯನ ಜತೆ ಬೀಚ್​ಗೆ ಹೋದಾಗ ಕೆಲವು ಕಿಡಿಗೇಡಿಗಳು ಅವರನ್ನು ಹಿಂಬಾಲಿಸಿದ್ದರು. ಇಬ್ಬರ ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್​​ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಕೇಳಿದಷ್ಟು ಹಣವನ್ನು ಪಾವತಿಸಲು ಸಾಧ್ಯವಾಗದಿದ್ದಾಗ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.

ಯುವತಿಯ ಸ್ನೇಹಿತನನ್ನು ಕೂಡ ಥಳಿಸಿದ್ದಾರೆ. ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 13 ರಂದು ಯುವತಿ ಮತ್ತು ಆಕೆಯ ಸ್ನೇಹಿತ ಬ್ರಹ್ಮಗಿರಿಯಲ್ಲಿರುವ ಮಾ ಬಾಲಿ ಹರಚಂಡಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಪ್ರಾರ್ಥನೆ ಸಲ್ಲಿಸಿದ ನಂತರ, ಇಬ್ಬರು ಬೀಚ್‌ಗೆ ತೆರಳಿದ್ದರು, ಅಲ್ಲಿ ಆರೋಪಿಗಳು ಅವರನ್ನು ಹಿಂಬಾಲಿಸಿದ್ದರು.

ನಂತರ ಆರೋಪಿಗಳು ಇಬ್ಬರ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ, ನಂತರ ಅವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದರು. ಆನ್​ಲೈನ್ ವಹಿವಾಟಿನ ಮೂಲಕ 2,500 ರೂ. ಮತ್ತು 1,000 ರೂ. ನಗದು ಪಾವತಿಸಿದ್ದಾರೆ, ಆದರೆ ಆ ಮೊತ್ತ ಸಾಕಾಗಲಿಲ್ಲ. ಹೆಚ್ಚಿನ ಹಣ ನೀಡಲು ನಿರಾಕರಿಸಿದಾಗ, ಆರೋಪಿ ಮೊದಲು ಆ ವ್ಯಕ್ತಿಗೆ ಥಳಿಸಿ, ನಂತರ ಅವರ ಮುಂದೆಯೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಪರಾಧದ ನಂತರ, ದಂಪತಿಯನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಲಾಗಿದೆ.

ಮತ್ತಷ್ಟು ಓದಿ: ವಾಕಿಂಗ್ ಹೋಗಿದ್ದ 80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ; ಆರೋಪಿಗೆ ಗುಂಡು ಹಾರಿಸಿದ ಪೊಲೀಸರು

ಯುವತಿ ತನ್ನ ಕಷ್ಟವನ್ನು ಸ್ಥಳೀಯರಿಗೆ ವಿವರಿಸಿದ್ದು, ಪೊಲೀಸರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಶಂಕಿತ ಶಿವ ಪ್ರಸಾದ್ ಸಾಹು ತಲೆಮರೆಸಿಕೊಂಡಿದ್ದು, ರಾಜ್ಯದಿಂದ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.

ವಿಶೇಷ ಪೊಲೀಸ್ ತಂಡವು ಪ್ರಸ್ತುತ ಸಾಹು ಇರುವ ಸ್ಥಳವನ್ನು ಪತ್ತೆಹಚ್ಚುತ್ತಿದೆ. ಏತನ್ಮಧ್ಯೆ, ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸೋಮವಾರ ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:32 pm, Tue, 16 September 25