ರೈತ ಸಂಘಟನೆಯ ಫೇಸ್​ಬುಕ್ ಪೇಜ್ ರದ್ದು : ಸಮಜಾಯಿಷಿ ನೀಡಿದ ಫೇಸ್​ಬುಕ್

| Updated By: ರಾಜೇಶ್ ದುಗ್ಗುಮನೆ

Updated on: Dec 22, 2020 | 7:49 PM

ಫೇಸ್​ಬುಕ್​ನ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಸ್ಪಷ್ಟನೆ ನೀಡಿದ್ದ ಫೇಸ್​ಬುಕ್, ಸ್ಪಾಮ್ ಕಂಟೆಂಟ್​ಗಳ ವಿರುದ್ಧ ಹೋರಾಡಲು ಸ್ವಯಂ ಚಾಲಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಫೇಸ್​ಬುಕ್​ ಹೇಳಿದೆ.

ರೈತ ಸಂಘಟನೆಯ ಫೇಸ್​ಬುಕ್ ಪೇಜ್ ರದ್ದು : ಸಮಜಾಯಿಷಿ ನೀಡಿದ ಫೇಸ್​ಬುಕ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಫೇಸ್​ಬುಕ್​ನ ಸ್ವಯಂಚಾಲಿತ ವ್ಯವಸ್ಥೆ ಕಿಸಾನ್ ಏಕ್ತಾ ಮೋರ್ಚಾದ ಫೇಸ್​ಬುಕ್ ಪುಟವನ್ನು ಸ್ಪಾಮ್ ಎಂದು ಪರಿಗಣಿಸಿ ಮೂರು ಘಂಟೆ ಸ್ಥಗಿತಗೊಳಿಸಿತ್ತು. ಆದರೆ ತಕ್ಷಣ ಎಚ್ಚೆತ್ತ ಫೇಸ್​ಬುಕ್, ದೆಹಲಿ ಚಲೋ ಚಳವಳಿಯಲ್ಲಿ ಸಕ್ರಿಯವಾಗಿರುವ ಸಂಘಟನೆಯ ಪುಟವನ್ನು ಪುನಃ ಸಕ್ರಿಯಗೊಳಿಸಿದೆ. ಏಕಾಏಕಿ ಸಂಘಟನೆಯ ಪುಟದಲ್ಲಿ ಪೋಸ್ಟ್​ಗಳ ಸಂಖ್ಯೆ ಹೆಚ್ಚಾದ ಕಾರಣ ತನ್ನ ಸ್ವಯಂಚಾಲಿತ ವ್ಯವಸ್ಥೆಯಿಂದ ಸಂಘಟನೆಯ ಪುಟ ಸ್ಥಗಿತಗೊಂಡಿತ್ತು ಎಂದು ಫೇಸ್​ಬುಕ್ ಸ್ಪಷ್ಟನೆ ನೀಡಿದೆ.

ನಮ್ಮ ಚಳವಳಿಯ ಸಂದೇಶ ರವಾನೆಗೆ ಫೇಸ್​ಬುಕ್ ಪುಟವನ್ನು ಬಳಸಿಕೊಳ್ಳುತ್ತಿದ್ದೇವೆ. ಸ್ಥಗಿತವಾಗಿದ್ದರಿಂದ ಸಂದೇಶ ರವಾನೆಗೆ ತೊಂದರೆಯುಂಟಾಯಿತು. ನಮ್ಮ ಚಳವಳಿಯನ್ನು ನಿಲ್ಲಿಸಲೆಂದೇ ಫೇಸ್​ಬುಕ್ ಪುಟವನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಹಲವರು ಭಾವಿಸಿದ್ದರು ಎಂದು ಕಿಸಾನ್ ಏಕ್ತಾ ಮೋರ್ಚಾ ದೂರಿದೆ.

ಫೇಸ್​ಬುಕ್​ನ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಸ್ಪಷ್ಟನೆ ನೀಡಿದ್ದ ಫೇಸ್​ಬುಕ್, ಸ್ಪಾಮ್ ಕಂಟೆಂಟ್​ಗಳ ವಿರುದ್ಧ ಹೋರಾಡಲು ಸ್ವಯಂ ಚಾಲಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. 2020ರ ಮೂರನೇ ತ್ರೈಮಾಸಿಕದಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 190 ಕೋಟಿ ಕಂಟೆಂಟ್​ಗಳನ್ನು ಸ್ಪಾಮ್ ಎಂದು ಪರಿಗಣಿಸಿದ್ದೆವು. ನಂತರ ಸ್ಪಾಮ್ ಅಲ್ಲದ 7.49 ಕೋಟಿ ಕಂಟೆಂಟ್​ಗಳನ್ನು ಮತ್ತೆ ಸಕ್ರಿಯಗೊಳಿಸಿದ್ದೇವೆ ಎಂದು ತಿಳಿಸಿದೆ.

ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?