ಬೆಂಗಳೂರು ಅಕ್ಟೋಬರ್ 10: ಮಣಿಪುರದಲ್ಲಿ (Manipur) ಹಿಂದೂಗಳು ಕ್ರೈಸ್ತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಸುಳ್ಳು ಮತ್ತು ಕೋಮುವಾದದ ಹೇಳಿಕೆಯೊಂದಿಗೆ (communal claim)ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. 2021 ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಘಟನೆಯ ವಿಡಿಯೊ ಇದಾಗಿದ್ದು, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ(Manipur Violence) ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು BOOM ಫ್ಯಾಕ್ಟ್ ಚೆಕ್ ವರದಿ ಮಾಡಿದೆ.
ಮಣಿಪುರದಿಂದ ಕ್ರಿಶ್ಚಿಯನ್ ಹುಡುಗಿಯನ್ನು ಅಪಹರಿಸಿದ ವಿಡಿಯೊ ವರದಿಯಾಗಿದೆ. ಆಕೆ ಸಹಾಯಕ್ಕಾಗಿ ಬೇಡುತ್ತಿರುವಾಗ ಕೆಲವು ಹಿಂದೂ ಪುರುಷರು ಆಕೆಯ ಬಟ್ಟೆಗಳನ್ನು ಕಿತ್ತುಕೊಳ್ಳುವುದನ್ನು ಕಾಣಬಹುದು. ಹಿಂದೂ ಪುರುಷರೇ ಈ ವಿಡಿಯೊವನ್ನು ಹರಿಬಿಟ್ಟಿದ್ದು. ಅವರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಯಾಕೆಂದರೆ ಮಣಿಪುರದ ಹಿಂದೂಗಳಿಗೆ ಆಡಳಿತದ ಬೆಂಬಲವಿದೆ ಎಂಬ ಬರಹದೊಂದಿದೆ ಈ ವಿಡಿಯೊವನ್ನು ಎಕ್ಸ್ ನಲ್ಲಿ ಶೇರ್ ಮಾಡಲಾಗಿದೆ.
ಫೇಸ್‌ಬುಕ್‌ನಲ್ಲಿ ತಮಿಳು ಬರಹದೊಂದಿಗೆ ಈ ವಿಡಿಯೊ ಹರಿದಾಡುತ್ತಿದೆ. ಮಣಿಪುರದಲ್ಲಿ ಸಂಘಿಗಳ ಅಟ್ಟಹಾಸ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.
ಮಣಿಪುರದಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನ ದೇಹವನ್ನು ಸುಟ್ಟು ಹಾಕಿರುವ ವಿಡಿಯೊ ವೈರಲ್ ಆದ ನಂತರ ಮಣಿಪುರದಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿರುವ ವರದಿಗಳಿವೆ. ಪೊಲೀಸರ ಪ್ರಕಾರ, ವಿಡಿಯೊ ಮೇ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡಿದ್ದು, ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮೇ 3, 2023 ರಂದು ಬಹುಸಂಖ್ಯಾತ ಮೈತಿ ಮತ್ತು ಬುಡಕಟ್ಟು ಕುಕಿ-ಜೊ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದ ನಂತರ ಮಣಿಪುರ ತೀವ್ರ ಹಿಂಸಾಚಾರ ನಡೆದಿದ್ದು, ಸಾವು ನೋವುಗಳು ವರದಿ ಆಗಿವೆ. ಭಾರೀ ಹಿಂಸಾಚಾರ ಮತ್ತು ಸ್ಥಳಾಂತರದ ನಂತರ, ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಸೆಪ್ಟೆಂಬರ್ 23 ರಂದು ಇಂಟರ್ನೆಟ್ ಮರುಸ್ಥಾಪಿಸಲಾಯಿತು. ಜುಲೈನಲ್ಲಿ ಕಾಣೆಯಾದ ಇಬ್ಬರು ಮೈತಿ ವಿದ್ಯಾರ್ಥಿಗಳ ಶವಗಳ ಫೋಟೋಗಳು ಸೆಪ್ಟೆಂಬರ್ 25 ರಂದು ಕಾಣಿಸಿಕೊಂಡ ನಂತರ ಇಂಟರ್ನೆಟ್ ಮತ್ತೆ ನಿರ್ಬಂಧಿಸಲಾಯಿತು, ಇದು ಹೆಚ್ಚಿನ ಹಿಂಸಾಚಾರಕ್ಕೆ ಕಾರಣವಾಯಿತು.
ವಿಡಿಯೊ ಪರಿಶೀಲಿಸಿದಾಗ ಸಂತ್ರಸ್ತೆ ಮತ್ತು ದುಷ್ಕರ್ಮಿಗಳು ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕೇಳಿದ ಕಾರಣ ಘಟನೆಯು ಮಣಿಪುರದವರಲ್ಲ ಎಂಬುದನ್ನು ತಿಳಿಯಬಹುದು. ಈ ಬಗ್ಗೆ ಸಂಬಂಧಿತ ಕೀವರ್ಡ್ ಹುಡುಕಾಟಗಳನ್ನು ನಡೆಸಲಾಗಿದೆ. ಬಾಂಗ್ಲಾದೇಶದ ಪ್ರಜೆಯೊಬ್ಬರ ಮೇಲೆ ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಘಟನೆಯ ಬಗ್ಗೆ ವರದಿ ಮಾಡಿದ ನ್ಯೂಸ್ ಬಾಂಗ್ಲಾ 24 ಫೀಚರ್ ಇಮೇಜ್ ನ್ನು ಈ ವಿಡಿಯೊದಲ್ಲಿ ಬಳಸಲಾಗಿದೆ.
ವರದಿಯ ಪ್ರಕಾರ, ಬಾಂಗ್ಲಾದೇಶ ಮತ್ತು ಭಾರತದ ನಡುವೆ ಕಾರ್ಯನಿರ್ವಹಿಸುತ್ತಿರುವ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಅಶ್ರಫುಲ್ ಮೊಂಡಲ್ ಅಲಿಯಾಸ್ ಬಾಸ್ ರಫಿ ಮತ್ತು ಅಬ್ದುರ್ ರೆಹಮಾನ್ ಢಾಕಾದ ನ್ಯಾಯಾಲಯದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಐವರು ಪುರುಷರು ಮಹಿಳೆಯೊಬ್ಬರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಭಯಾನಕ ವಿಡಿಯೊವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೇ, 2021ರ ಎನ್‌ಡಿಟಿವಿ ವರದಿಯ ಪ್ರಕಾರ, ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು. ವಿಡಿಯೊದ ದೃಶ್ಯಗಳಲ್ಲಿ “ಆರೋಪಿಗಳು ಮಹಿಳೆಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ತೋರಿಸಿದೆ. ಆಕೆಯ ಗುಪ್ತಾಂಗಕ್ಕೆ ಬಾಟಲಿ ತುರುಕಿಸಿ, 22 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಬೆಂಗಳೂರು ಪೊಲೀಸರು ಆರೋಪಿ ಬಂಧಿಸಿದ್ದಾರೆ ‘ಐದು ವಾರಗಳ ಅಲ್ಪಾವಧಿಯಲ್ಲಿ’ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿ ಹೇಳಿದೆ.
ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ.
An update on the Bangladeshi woman abuse case:
Twelve accused are arrested, out of which 11 accused persons & the victim are Bangladeshi nationals. The investigation is complete and a detailed & systemic 1019 page charge sheet has been submitted to the Hon’ble Court.. (1/3)
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) July 8, 2021
ಈ ಪ್ರಕರಣವನ್ನು ವೈಟ್‌ಫೀಲ್ಡ್ ಪೊಲೀಸರು ನಿರ್ವಹಿಸುತ್ತಿದ್ದು, ಆರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಉಳಿದ ಐವರು ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ನಂತರ ಬಂಧಿಸಿದ್ದರು.
ಈ ಘಟನೆಯು ಪೂರ್ವ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಮೇ, 2021 ರ ಮೊದಲ ವಾರದಲ್ಲಿ ಸಂಭವಿಸಿದೆ. 22ರ ಹರೆಯದ ಮಹಿಳೆ ಮೇಲೆ ಹಲ್ಲೆ ಮತ್ತು ಅತ್ಯಾಚಾರಕ್ಕಾಗಿ ಮೂವರು ಮಹಿಳೆಯರು ಸೇರಿದಂತೆ 12 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಶೋಬುಜ್ ಶೇಕ್, ರಫೀಕ್, ರಿಡೋಯ್ ಬಾಬು, ರಕಿಬುಲ್ ಇಸ್ಲಾಂ ಸಾಗರ್, ಮೊಹಮ್ಮದ್ ಬಾಬು ಶೇಕ್, ಹಕೀಲ್, ಅಜೀಮ್, ಜಮಾಲ್, ದಲೀಮ್, ನಸ್ರತ್, ಕಾಜಲ್ ಮತ್ತು ತಾನ್ಯಾ ಎಂದು ಗುರುತಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ರಿಡೋಯ್ ಬಾಬು ಕೂಡ ದೇಶದ ಪ್ರಸಿದ್ಧ ಟಿಕ್ ಟಾಕರ್ ಆಗಿದ್ದು, ಮಹಿಳೆಯರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಎನ್ನಲಾಗಿದೆ. ಬಾಬು, ರಫೀಕ್ ಮತ್ತು ಶೋಬುಜ್ ಜೊತೆಗೆ ಬಾಂಗ್ಲಾದೇಶದಿಂದ ಮಹಿಳೆಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ಭಾರತಕ್ಕೆ ಕರೆತಂದು ನಂತರ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ.
ಇದನ್ನೂ ಓದಿ: ಉತ್ತರ ಪ್ರದೇಶ: ಪ್ರೀತಿ, ಅಕ್ಕರೆ ಎಲ್ಲಾ ಎಲ್ಲಿ ಹೋಯ್ತು? ಇಬ್ಬರು ಸಹೋದರಿಯರ ಶಿರಚ್ಛೇದ ಮಾಡಿದ ಅಕ್ಕ
ಸಂತ್ರಸ್ತೆ ಗುಂಪಿನಿಂದ ದೂರ ಸರಿದಿದ್ದಳು. ಆಕೆ ಮಹಿಳೆಯರು ದಂಧೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಳು ಎಂದು ವರದಿ ಹೇಳಿದೆ. ರಫೀಕ್ ಮತ್ತು ಶೋಬುಜ್ ಮಹಿಳೆ ಮೇಲೆ ಸಿಟ್ಟಿಗೆದ್ದಿದ್ದು ಸೇಡಿನ ಕ್ರಮವಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೇ 21, 2022 ರಂದು ಬೆಂಗಳೂರು ನ್ಯಾಯಾಲಯವು 11 ಜನರನ್ನು ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದು ಅವರೆಲ್ಲರಿಗೂ ಶಿಕ್ಷೆ ವಿಧಿಸಲಾಗಿದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ