Fact Check: ಮಣಿಪುರದಲ್ಲಿ ಬುಡಕಟ್ಟು ಜನರು ಅಂಗಡಿ ಲೂಟಿ ಮಾಡುತ್ತಿರುವುದು ಎಂಬ ವೈರಲ್ ವಿಡಿಯೊ ಫಿಲಿಪೈನ್ಸ್​​​ನದ್ದು

|

Updated on: May 06, 2023 | 8:54 PM

ಮಣಿಪುರದಲ್ಲಿ ಬಿಜೆಪಿ ವಿಫಲ ಸರ್ಕಾರವಾಗಿದೆ, ಜನರ ಆಸ್ತಿ ಮತ್ತು ಜೀವಗಳನ್ನು ಉಳಿಸುವ ಸರ್ಕಾರದ ಜವಾಬ್ದಾರಿ ಎಲ್ಲಿದೆ? ನಾಚಿಕೆಗೇಡು ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗಿದೆ.

Fact Check: ಮಣಿಪುರದಲ್ಲಿ ಬುಡಕಟ್ಟು ಜನರು ಅಂಗಡಿ ಲೂಟಿ ಮಾಡುತ್ತಿರುವುದು ಎಂಬ ವೈರಲ್ ವಿಡಿಯೊ ಫಿಲಿಪೈನ್ಸ್​​​ನದ್ದು
ವೈರಲ್ ಆಗಿರುವ ಫಿಲಿಫೈನ್ಸ್ ವಿಡಿಯೊ
Follow us on

ಹಿಂಸಾಚಾರ ನಡೆದ ಮಣಿಪುರದಲ್ಲಿ (Manipur) ಹಿಂದೂ ಮೈತಿ (Hindu Meiteis)ಒಡೆತನದ ಅಂಗಡಿಗಳನ್ನು ಬುಡಕಟ್ಟು (Tribals ) ಗುಂಪುಗಳು ಲೂಟಿ ಮಾಡುತ್ತಿವೆ ಎಂಬ ಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೊ ಮಣಿಪುರದ್ದಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊ ಫಿಲಿಪೈನ್ಸ್‌ನ ಲುಸೆನಾ ಸಿಟಿಯದ್ದು ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಎಸ್‌ಟಿ ಪಟ್ಟಿಗೆ ಮೈತಿ ಸಮುದಾಯವನ್ನು ಸೇರಿಸುವ ನಿರ್ಧಾರ ವಿರೋಧಿಸಿ ಮಣಿಪುರದ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಮೇ 2 ರಂದು ಪ್ರತಿಭಟನೆಗೆ ಕರೆ ನೀಡಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಘಟನೆಗಳ ನಡುವೆಯೇ ಬುಡಕಟ್ಟು ಜನಾಂಗ ಅಂಗಡಿ ಲೂಟಿ ಮಾಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದೆ.


ಅಂಗಡಿಯ ಶಟರ್ ಪೂರ್ಣವಾಗಿ ತೆರೆಯುವ ಮೊದಲೇ ಜನರು ಅಂಗಡಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಒಳಗೆ ಪ್ರವೇಶಿಸಿದ ಪ್ರತಿಯೊಬ್ಬರೂ ತಮಗೆ ಬೇಕಾದ ವಸ್ತುಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಮಣಿಪುರದಲ್ಲಿ ಬಿಜೆಪಿ ವಿಫಲ ಸರ್ಕಾರವಾಗಿದೆ, ಜನರ ಆಸ್ತಿ ಮತ್ತು ಜೀವಗಳನ್ನು ಉಳಿಸುವ ಸರ್ಕಾರದ ಜವಾಬ್ದಾರಿ ಎಲ್ಲಿದೆ? ನಾಚಿಕೆಗೇಡು ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗಿದೆ.

ಫ್ಯಾಕ್ಟ್  ಚೆಕ್

ಈ ವಿಡಿಯೊ ಫೆಬ್ರವರಿ 24, 2023ರದ್ದು. ಮಾರಾಟದ ಸಮಯದಲ್ಲಿ ಫಿಲಿಪೈನ್ಸ್‌ನ ಲುಸೆನಾ ಸಿಟಿಯ ಅಂಗಡಿಯಲ್ಲಿ ತೆಗೆದ ವಿಡಿಯೊ ಇದಾಗಿದೆ. ವಿಡಿಯೊದಿಂದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ VICE ಜಪಾನ್‌ನ ಪೋಸ್ಟ್ ಅನ್ನು ಎಂಬೆಡ್ ಮಾಡಿದ Instagrammer News ಎಂಬ ವೆಬ್‌ಸೈಟ್‌ ಸಿಕ್ಕಿದೆ. ಈ ವಿಡಿಯೊವನ್ನು ಏಪ್ರಿಲ್ 4 ರಂದು ಅಪ್‌ಲೋಡ್ ಮಾಡಲಾಗಿದೆ.


ತಿಂಗಳಶ ಕೊನೆಯಲ್ಲಿ,ಫಿಲಿಪೈನ್ಸ್‌ನ ಲುಸೆನಾ ನಗರದಲ್ಲಿ Ukay Ukay ತೆರೆದ ತಕ್ಷಣ ಗ್ರಾಹಕರು ನೂಕು ನುಗ್ಗಲು ಮಾಡಿ ಅಂಗಡಿಯೊಳಗೆ ಪ್ರವೇಶಿಸಿರುವುದು ಎಂದು ಜಪಾನೀಸ್ ಭಾಷೆಯಲ್ಲಿ ಶೀರ್ಷಿಕೆಯಲ್ಲಿ ಬರೆಯಲಾಗಿದ. ಫೆಬ್ರವರಿ 24 ರಂದು ಲುಸೆನಾ ನಗರದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Fact Check: ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರಾ ಮೋದಿ?; ವೈರಲ್ ವಿಡಿಯೊ ಎಡಿಟ್ ಮಾಡಿದ್ದು

ಈ ಮಾಹಿತಿಯನ್ನು ಬಳಸಿಕೊಂಡು ಮತ್ತಷ್ಟು ಹುಡುಕಿದಾಗ ಮಾರ್ಚ್ 3 ರಂದು DZRH ನ್ಯೂಸ್ ಟೆಲಿವಿಷನ್ ಅಪ್‌ಲೋಡ್ ಮಾಡಿದ ವಿಡಿಯೊ ಫೇಸ್ ಬುಕ್ ನಲ್ಲಿದೆ. ಘಟನೆಯ ಕುರಿತು ಫೆಬ್ರವರಿ 27 ರಂದು News5Everywhere ಕೂಡ ಇದೇ ವಿಡಿಯೊ ಅಪ್‌ಲೋಡ್ ಮಾಡಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ