ಬಾಂಬ್​ ಇದೆ ಎಂದು ಹೇಳಿದ ಬಿಜೆಪಿ ನಾಯಕಿ ಉಮಾ ಭಾರತಿ; ಉತ್ತರಪ್ರದೇಶದ ಬಳಿ 2 ತಾಸು ನಿಲುಗಡೆಯಾದ ರೈಲು

| Updated By: Lakshmi Hegde

Updated on: Dec 25, 2021 | 1:12 PM

ಲಲಿತ್​ಪುರ ರೈಲ್ವೆ ಸ್ಟೇಶನ್​​ನಲ್ಲಿ 9.40ರ ಹೊತ್ತಿಗೆ ರೈಲನ್ನು ನಿಲ್ಲಿಸಲಾಯಿತು. ಸುಮಾರು 11.30ರವರೆಗೆ ರೈಲ್ವೆ ಪೊಲೀಸ್​ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಇಡೀ ರೈಲನ್ನು ಪರಿಶೀಲಿಸಿದರು.

ಬಾಂಬ್​ ಇದೆ ಎಂದು ಹೇಳಿದ ಬಿಜೆಪಿ ನಾಯಕಿ ಉಮಾ ಭಾರತಿ; ಉತ್ತರಪ್ರದೇಶದ ಬಳಿ 2 ತಾಸು ನಿಲುಗಡೆಯಾದ ರೈಲು
ಉಮಾ ಭಾರತಿ
Follow us on

ಝಾನ್ಸಿ: ಮಧ್ಯಪ್ರದೇಶದ ಟಿಕಾಮ್​ಗಢ್​​ನಿಂದ ದೆಹಲಿಗೆ ಹೊರಟಿದ್ದ ರೈಲಿನಲ್ಲಿ ಬಾಂಬ್​ ಇದೆ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಆ ರೈಲು ಪ್ರಯಾಣದ ಮಧ್ಯೆ ಉತ್ತರಪ್ರದೇಶದ ಲಲಿತ್​ಪುರದಲ್ಲಿ ಸುಮಾರು 2 ತಾಸು ನಿಲುಗಡೆಯಾದ ಘಟನೆ ನಡೆದಿದೆ. ಲಲಿತ್​ಪುರದಲ್ಲಿ ಎರಡು ತಾಸುಗಳ ಕಾಲ ರೈಲನ್ನು ಪರಿಶೀಲನೆ ನಡೆಸಿ, ನಂತರ ಅಲ್ಲಿಂದ ಮುಂದಕ್ಕೆ ಚಲಿಸಿದೆ.  ರೈಲಿನ ಎಸಿ ಕೋಚ್​​ಗಳು ಇರುವ ಕಂಪಾರ್ಟ್​ಮೆಂಟ್​​ನಲ್ಲಿ ಉಮಾ ಭಾರತಿ ಗುರುವಾರ ರಾತ್ರಿ ಪ್ರಯಾಣ ಮಾಡುತ್ತಿದ್ದರು. ಉತ್ತರಪ್ರದೇಶದ ಲಲಿತ್​ ಪುರದ ಹೊರವಲಯಕ್ಕೆ ಬರುತ್ತಿದ್ದಂತೆ ಉಮಾ ಭಾರತಿ, ರೈಲಿನಲ್ಲಿ ಬಾಂಬ್​ ಇರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ರೈಲ್ವೆ ಸಿಬ್ಬಂದಿಗೆ ಹೇಳಿದರು. 

ಅದಾದ ಬಳಿಕ ಲಲಿತ್​ಪುರ ರೈಲ್ವೆ ಸ್ಟೇಶನ್​​ನಲ್ಲಿ 9.40ರ ಹೊತ್ತಿಗೆ ರೈಲನ್ನು ನಿಲ್ಲಿಸಲಾಯಿತು. ಸುಮಾರು 11.30ರವರೆಗೆ ರೈಲ್ವೆ ಪೊಲೀಸ್​ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಇಡೀ ರೈಲನ್ನು ಪರಿಶೀಲಿಸಿದರು. ಆದರೆ ಯಾವುದೇ ಬಾಂಬ್​ ಆಗಲಿ, ಸ್ಫೋಟಕವಾಗಲಿ ಪತ್ತೆಯಾಗಿಲ್ಲ.  ಲಲಿತ್​ಪುರದಿಂದ 11.30ಕ್ಕೆ ರೈಲು ಹೊರಟು, ನಂತರ ಝಾನ್ಸಿಯಲ್ಲಿ ಮತ್ತೊಮ್ಮೆ ರೈಲನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಆದರೆ ಉಮಾ ಭಾರತಿ ಯಾಕೆ ಬಾಂಬ್​ ಇದೆ ಎಂದು ಹೇಳಿದರು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಕಳೆದವಾದ ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ಬಗ್ಗೆ ಉಮಾ ಭಾರತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇಲ್ಲಿ ಅವರದ್ದೇ ಪಕ್ಷ ಬಿಜೆಪಿ ಆಡಳಿತವಿದೆ. ಆದರೆ ಈ ಬಾರಿ ನಡೆದ ಪಂಚಾಯತ್​ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗ (OBC)ದವರಿಗೆ ಮೀಸಲಾತಿ ನೀಡಲಾಗಿಲ್ಲ. ಇದರಿಂದಾಗಿ ರಾಜ್ಯದ ಶೇ.70ರಷ್ಟು ಜನರಿಗೆ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.  ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಯಲ್ಲಿ  ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಿಟ್ಟಿರುವ ಸ್ಥಾನಗಳ ಚುನಾವಣಾ ಪ್ರಕ್ರಿಯೆಯನ್ನು ತಡೆಹಿಡಿಯಬೇಕು  ಎಂದು ಸುಪ್ರೀಂಕೋರ್ಟ್ ಕೂಡ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: ಜನವರಿಯಲ್ಲಿ ವಿಧೇಯಕ ಮಂಡನೆ; ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಸವಲತ್ತು ನಿಲ್ಲಿಸುತ್ತೇವೆ- ಸಚಿವ ಮಾಧುಸ್ವಾಮಿ ಹೇಳಿಕೆ