ಮಗು ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆ ದ್ವಾರದ ಬಾಗಿಲು ಪೀಸ್ ಪೀಸ್

|

Updated on: May 14, 2020 | 7:51 AM

ಹೈದರಾಬಾದ್: ಆಸ್ಪತ್ರೆಯಲ್ಲಿ ಶಿಶು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಕ್ಕೆ ಒಳಗಾದ ಸಂಬಂಧಿಕರಿಂದ‌‌ ಆಸ್ಪತ್ರೆಯ ಗಾಜುಗಳು ಪುಡಿಪುಡಿಯಾಗಿರುವ ಘಟನೆ ಹೈದರಾಬಾದ್​​ನ ಹಳೇ ಬಸ್ತಿಯಲ್ಲಿರುವ ಪೆಟ್ಲಬುರ್ಜನ್ ಮಾಡರ್ನ್ ಮೆಟರ್ನಿಟಿ‌‌ ಅಸ್ಪತ್ರೆಯಲ್ಲಿ‌‌ ನಡೆದಿದೆ. ವೈದ್ಯರು ಮಗು ಸಾವಿನ ಸುದ್ದಿ ಹೇಳುತ್ತಿದ್ದಂತೆ ಮಗುವಿನ ಸಂಬಂಧಿಕರು ಆಸ್ಪತ್ರೆಯ ಮುಖ್ಯ ದ್ವಾರದ ಬಾಗಿಲಿನ ಗಾಜುಗಳನ್ನು ಹೊಡೆದು ಪುಡಿಪುಡಿ ಮಾಡಿ ಗಲಾಟೆ ಮಾಡಿದ್ದಾರೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುಸುಫ್ ಖುರೇಶಿ (32), ಮಹ್ಮದ ಆಶ್ರಫ್ […]

ಮಗು ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆ ದ್ವಾರದ ಬಾಗಿಲು ಪೀಸ್ ಪೀಸ್
Follow us on

ಹೈದರಾಬಾದ್: ಆಸ್ಪತ್ರೆಯಲ್ಲಿ ಶಿಶು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಕ್ಕೆ ಒಳಗಾದ ಸಂಬಂಧಿಕರಿಂದ‌‌ ಆಸ್ಪತ್ರೆಯ ಗಾಜುಗಳು ಪುಡಿಪುಡಿಯಾಗಿರುವ ಘಟನೆ ಹೈದರಾಬಾದ್​​ನ ಹಳೇ ಬಸ್ತಿಯಲ್ಲಿರುವ ಪೆಟ್ಲಬುರ್ಜನ್ ಮಾಡರ್ನ್ ಮೆಟರ್ನಿಟಿ‌‌ ಅಸ್ಪತ್ರೆಯಲ್ಲಿ‌‌ ನಡೆದಿದೆ.

ವೈದ್ಯರು ಮಗು ಸಾವಿನ ಸುದ್ದಿ ಹೇಳುತ್ತಿದ್ದಂತೆ ಮಗುವಿನ ಸಂಬಂಧಿಕರು ಆಸ್ಪತ್ರೆಯ ಮುಖ್ಯ ದ್ವಾರದ ಬಾಗಿಲಿನ ಗಾಜುಗಳನ್ನು ಹೊಡೆದು ಪುಡಿಪುಡಿ ಮಾಡಿ ಗಲಾಟೆ ಮಾಡಿದ್ದಾರೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುಸುಫ್ ಖುರೇಶಿ (32), ಮಹ್ಮದ ಆಶ್ರಫ್ ( 22)‌ ಎಂಬುವವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಚಾರ್ಮಿನಾರ್‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Published On - 7:37 am, Thu, 14 May 20