Farmers Protest: ಶಂಭು ಗಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ

|

Updated on: Jan 09, 2025 | 12:57 PM

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೇಶಮ್ ಶಂಭು ಮೋರ್ಚಾದಲ್ಲಿ ವಿಷ ಕುಡಿದಿದ್ದರು. ಇದಾದ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ರಾಜಪುರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣಾಂತ ಉಪವಾಸಕ್ಕೆ ಇಂದು 45ನೇ ದಿನವಾಗಿದೆ.

Farmers Protest: ಶಂಭು ಗಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ
ಪ್ರತಿಭಟನೆ
Image Credit source: India Today
Follow us on

ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆಯೂ ಇದೇ ರೀತಿ ವಿಷ ಸೇವಿಸಿ ರೈತರೊಬ್ಬರು ಸಾವನ್ನಪ್ಪಿದ್ದರು. ಶಂಭು ಗಡಿಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ರೈತರ ಸಂಖ್ಯೆ ಎರಡಕ್ಕೇರಿದೆ. ಮೃತ ರೈತನ ಹೆಸರು ರೇಶಮ್ ಸಿಂಗ್.

ರೇಶಮ್ ಶಂಭು ಮೋರ್ಚಾದಲ್ಲಿ ವಿಷ ಕುಡಿದಿದ್ದರು. ಇದಾದ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ರಾಜಪುರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಸಾವನ್ನಪ್ಪಿದರು. ರೇಶಮ್ ಸಿಂಗ್ ಜಗತಾರ್ ಸಿಂಗ್ ಅವರ ಮಗ. ಅವರು ಟಾರ್ಟರಾನ್ ಜಿಲ್ಲೆಯ ಪಹು ವಿಂಡ್ ನಿವಾಸಿಯಾಗಿದ್ದರು.

ರೈತ ಮುಖಂಡ ತೇಜ್ಬೀರ್ ಸಿಂಗ್ ಮಾತನಾಡಿ, ಶಂಭು ಮತ್ತು ಖಾನೌರಿ ಗಡಿಯಲ್ಲಿ 11 ತಿಂಗಳಿನಿಂದ ಆಂದೋಲನ ನಡೆದರೂ ಪರಿಹಾರ ಕಂಡುಕೊಳ್ಳದ ಸರ್ಕಾರದ ವಿರುದ್ಧ ರೇಶಮ್ ಸಿಂಗ್ ಕೋಪಗೊಂಡಿದ್ದರು.

ಮತ್ತಷ್ಟು ಓದಿ: ಕಾಂಗ್ರೆಸ್​ಗಾಗಿಯೇ ನಡೆದಿತ್ತಾ ರೈತರ ಪ್ರತಿಭಟನೆ, ಆದರೂ ಹರ್ಯಾಣದಲ್ಲಿ ಸೋತಿದ್ಹೇಗೆ, ಕಾರಣ ಬಿಚ್ಚಿಟ್ಟ ರೈತ ಮುಖಂಡ

ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣಾಂತ ಉಪವಾಸಕ್ಕೆ ಇಂದು 45ನೇ ದಿನವಾಗಿದೆ. 328 ದಿನಗಳಿಂದ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಎಂಎಸ್‌ಪಿ ಗ್ಯಾರಂಟಿ ಕಾಯ್ದೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಬೇಡಿಕೆಗಳೇನು?
ಭೂಸ್ವಾಧೀನ ಕಾಯ್ದೆ 2013 ಜಾರಿಗೊಳಿಸಬೇಕು
ಚಳವಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು
ರೈತರ ಸಾಲ ಮನ್ನಾ ಮಾಡಿ ಪಿಂಚಣಿ ನೀಡಬೇಕು
ಫಸಲ್ ಬಿಮಾ ಯೋಜನೆಗೆ ಸರಕಾರವೇ ಪ್ರೀಮಿಯಂ ಪಾವತಿಸಬೇಕು.
ಮೃತ ರೈತರ ಕುಟುಂಬಗಳಿಗೆ ಉದ್ಯೋಗ
ಲಖಿಂಪುರ ಘಟನೆಯ ಅಪರಾಧಿಗಳಿಗೆ ಶಿಕ್ಷೆಯಾಗಬೇಕು
ನಕಲಿ ಬೀಜ ಮತ್ತು ರಸಗೊಬ್ಬರಗಳ ಮೇಲೆ ಕಠಿಣ ಕಾನೂನು
ಭೂರಹಿತ ರೈತರ ಮಕ್ಕಳಿಗೆ ಉದ್ಯೋಗ

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:56 pm, Thu, 9 January 25