ಕಾಂಗ್ರೆಸ್​ಗಾಗಿಯೇ ನಡೆದಿತ್ತಾ ರೈತರ ಪ್ರತಿಭಟನೆ, ಆದರೂ ಹರ್ಯಾಣದಲ್ಲಿ ಸೋತಿದ್ಹೇಗೆ, ಕಾರಣ ಬಿಚ್ಚಿಟ್ಟ ರೈತ ಮುಖಂಡ

ವರ್ಷಗಟ್ಟಲೆ ಹರ್ಯಾಣ-ಪಂಜಾಬ್ ಶಂಭು ಗಡಿಯಲ್ಲಿ ನಡೆದಿದ್ದ ರೈತರ ಪ್ರತಿಭಟನೆ ಕಾಂಗ್ರೆಸ್​ಗಾಗಿಯೇ ನಡೆದಿತ್ತೇ ಎನ್ನುವ ಅನುಮಾನ ಹುಟ್ಟಿದೆ. ಏಕೆಂದರೆ ರೈತ ಮುಖಂಡ ಗುರ್ನಾಮ್​ ಸಿಂಗ್ ಚದುನಿ ಅವರ ಹೇಳಿಕೆಯು ಈ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್​ಗಾಗಿಯೇ ನಡೆದಿತ್ತಾ ರೈತರ ಪ್ರತಿಭಟನೆ, ಆದರೂ ಹರ್ಯಾಣದಲ್ಲಿ ಸೋತಿದ್ಹೇಗೆ, ಕಾರಣ ಬಿಚ್ಚಿಟ್ಟ ರೈತ ಮುಖಂಡ
ಗುರ್ನಾಮ್ ಸಿಂಗ್ Image Credit source: Hindustan Times
Follow us
ನಯನಾ ರಾಜೀವ್
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Oct 13, 2024 | 5:42 PM

ವರ್ಷಗಟ್ಟಲೆ ಹರ್ಯಾಣ-ಪಂಜಾಬ್ ಶಂಭು ಗಡಿಯಲ್ಲಿ ನಡೆದಿದ್ದ ರೈತರ ಪ್ರತಿಭಟನೆ ಕಾಂಗ್ರೆಸ್​ಗಾಗಿಯೇ ನಡೆದಿತ್ತೇ ಎನ್ನುವ ಅನುಮಾನ ಹುಟ್ಟಿದೆ. ಏಕೆಂದರೆ ರೈತ ಮುಖಂಡ ಗುರ್ನಾಮ್​ ಸಿಂಗ್ ಚದುನಿ ಅವರ ಹೇಳಿಕೆಯು ಈ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಹರ್ಯಾಣದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗಿದ್ದು ನಮ್ಮಿಂದಲೇ, ಕಾಂಗ್ರೆಸ್​ ಸೋಲಿಗೆ ಬಹುದೊಡ್ಡ ಕಾರಣವೆಂದರೆ ಅವರು ಯಾವುದೇ ಹೊಂದಾಣಿಕೆಯನ್ನು ಮಾಡಿಕೊಳ್ಳದಿರುವುದು ಅಷ್ಟೇ ಅಲ್ಲದೆ ಕಾಂಗ್ರೆಸ್​ ಎಲ್ಲವನ್ನೂ ಭೂಪೇಂದ್ರ ಹೂಡಾಗೆ ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರೈತ ಮುಖಂಡ ಭೂಪೇಂದ್ರ ಸಿಂಗ್ ಹೂಡಾ ಹೊಣೆಗಾರರಾಗಿದ್ದಾರೆ ಎಂದಿದ್ದಾರೆ. ಚುನಾವಣೆಗೂ ಮುನ್ನವೇ ಭೂಪೇಂದ್ರ ಸಿಂಗ್ ಹೂಡಾ ಕಾಂಗ್ರೆಸ್ ಅನ್ನು ನಾಶ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದು, ಈಗ ಅದು ನಿಜವಾಗಿದೆ ಎಂದು ಅವರು ಹೇಳಿದರು.

ಟಿಕೆಟ್ ಭರವಸೆ ನೀಡಲಾಗಿತ್ತು

ಲೋಕಸಭೆ ಚುನಾವಣೆಯಲ್ಲಿ ನಮಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು, ಆದರೆ ನಂತರ ಭೂಪೇಂದ್ರ ಸಿಂಗ್ ನಿರಾಕರಿಸಿದರು ಎಂದು ಚದುನಿ ಹೇಳಿದರು. ಅಭಯ್ ಚೌಟಾಲಾ ಜತೆ ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ನೀಡಿದ್ದರೆ ಹರ್ಯಾಣದಲ್ಲಿ ಅವರ ಪಕ್ಷಕ್ಕೆ 9 ಸ್ಥಾನ ಸಿಗಬಹುದಿತ್ತು.

ಮತ್ತಷ್ಟು ಓದಿ: ಹರ್ಯಾಣ ಚುನಾವಣೆ: ಕಾಂಗ್ರೆಸ್ ಕೈಯಿಂದ ಜಾರಿದ ಜಾಟ್, ಜಿಲೇಬಿ

ಗುರ್ನಾಮ್ ಸಿಂಗ್ ಚದುನಿ ಪ್ರಕಾರ, ವಿಧಾನಸಭೆ ಸದಸ್ಯ ಭೂಪೇಂದ್ರ ಸಿಂಗ್ ಅವರಿಗೆ ದ್ರೋಹ ಬಗೆದಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನವೇ ಅವರು ನನಗೆ ಕರೆ ಮಾಡಿ ರೋಹ್ಟಕ್ ಸೀಟಿನಲ್ಲಿ ಬೆಂಬಲಿಸುವಂತೆ ಕೇಳಿಕೊಂಡಿದ್ದರು. ಹೂಡಾ ಅನೇಕ ದೊಡ್ಡ ನಾಯಕರನ್ನು ಬದಿಗೊತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡರಿಂದಲೂ ದೂರ ಉಳಿದಿದ್ದರು. ಇದರಲ್ಲಿ ರಮೇಶ್ ದಲಾಲ್, ಹರ್ಷ ಚಿಕಾರಾ, ಬಾಲರಾಜ್ ಕುಂದು, ಕುಮಾರಿ ಶೈಲ್ಜಾ, ಕಿರಣ್ ಚೌಧರಿ, ರಣದೀಪ್ ಸುರ್ಜೆವಾಲಾ ಅವರ ಹೆಸರುಗಳು ಸೇರಿವೆ.

ಐಎಎನ್​ಎಸ್​ನಲ್ಲಿ ಗುರ್ನಾಮ್ ಮಾತನಾಡಿದ ವಿಡಿಯೋ

ಚುನಾವಣೆಯಲ್ಲಿ ರೈತ ನಾಯಕರಿಗೆ ಪ್ರಾಮುಖ್ಯತೆ ನೀಡುವ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ನಂಬಿದ್ದೆ. ಪ್ರಿಯಂಕಾ ಗಾಂಧಿ ಕೂಡ ರೈತ ಮುಖಂಡರನ್ನು ಜೊತೆಯಲ್ಲಿಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದ್ದರು, ಆದರೆ ಭೂಪೇಂದ್ರ ಸಿಂಗ್ ಹಾಗೆ ಮಾಡಲಿಲ್ಲ. ಭೂಪೇಂದ್ರ ಸಿಂಗ್ ಹೂಡಾ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಡಿ ಎಂದು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭೂಪೇಂದ್ರ ಸಿಂಗ್ ಅವರು ಪ್ರತಿಪಕ್ಷದ ಪಾತ್ರವನ್ನು ನಿರ್ವಹಿಸಲಿಲ್ಲ, ಆದರೆ ಕಿಸಾನ್ ಯೂನಿಯನ್ ಈ ಪಾತ್ರವನ್ನು ವಹಿಸಿದೆ ಎಂದು ಅವರು ಹೇಳಿದರು. ಇದೇ ವೇಳೆ ರೈತರ ಆಂದೋಲನದ ಬಗ್ಗೆ ಹೇಳುವುದಾದರೆ ಅದು ಕೈ ತಪ್ಪಿದೆ ಎಂದರು. ಈಗ ನನ್ನ ಸಿದ್ಧಾಂತ ಏನೆಂದರೆ ನಾವು ಸಂಸತ್ತಿಗೆ ಅಥವಾ ಅಸೆಂಬ್ಲಿಗೆ ತಲುಪಬೇಕು, ಇದರಿಂದ ನಾವು ಧ್ವನಿ ಎತ್ತಬಹುದು. ಇಂದು ಅನೇಕ ರೈತ ಮುಖಂಡರು ಬಿಜೆಪಿ ಜೊತೆ ನಿಂತಿದ್ದಾರೆ.

ದುರಹಂಕಾರದಿಂದ ಪಕ್ಷಕ್ಕೆ ಹಾನಿ

ರಾಜಕೀಯದಲ್ಲಿ ಹಣದ ಆಟ ಸಾಮಾನ್ಯ, ಆದರೆ  ದುರಹಂಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಿದೆ. ಇದರೊಂದಿಗೆ ಚದುನಿ ಕಾಂಗ್ರೆಸ್ ಉಳಿಸುವ ಮಾರ್ಗವನ್ನೂ ಸೂಚಿಸಿದ್ದಾರೆ.

ಪ್ರಿಯಾಂಕಾ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು

ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಜವಾಬ್ದಾರಿ ವಹಿಸಿಕೊಂಡರೆ ಕಾಂಗ್ರೆಸ್ ಉಳಿಯಬಹುದು ಎಂದರು. ಇಲ್ಲದಿದ್ದರೆ ಇಲ್ಲಿಂದ ಬಿಜೆಪಿ ಆಡಳಿತ ಹೋಗುವುದಿಲ್ಲ. ಕಾಂಗ್ರೆಸ್ ನಾಯಕ ಭೂಪೇಂದ್ರ ಸಿಂಗ್ ಹೂಡಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:11 pm, Sun, 13 October 24