AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

42 ಸಿಕ್ಸ್, 30 ಫೋರ್: ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ ಸ್ಯಾಮ್ ಚೀಕ್

Sam Cheek: ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಯಾಮ್ ಚೀಕ್  ಕ್ಲಬ್ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಕೇವಲ 137 ಎಸೆತಗಳಲ್ಲಿ. ಈ 137 ಎಸೆತಗಳಲ್ಲಿ ಸ್ಯಾಮ್ ಸಿಡಿಸಿದ್ದು ಬರೋಬ್ಬರಿ 42 ಸಿಕ್ಸರ್​ಗಳು. ಹಾಗೆಯೇ ಅವರ ಬ್ಯಾಟ್​ನಿಂದ 30 ಫೋರ್​ಗಳು ಮೂಡಿಬಂದಿದ್ದವು. ಅಂದರೆ ಸಿಕ್ಸ್​-ಫೋರ್​ಗಳ ಮೂಲಕವೇ 372 ರನ್​ (252+120) ಕಲೆಹಾಕಿದ್ದಾರೆ.

42 ಸಿಕ್ಸ್, 30 ಫೋರ್: ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ ಸ್ಯಾಮ್ ಚೀಕ್
Sam
ಝಾಹಿರ್ ಯೂಸುಫ್
|

Updated on: Mar 18, 2026 | 9:23 AM

Share

ಅಡಿಲೇಡ್ ಮತ್ತು ಸಬರ್ಬನ್ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ ಗ್ರೇಡ್ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಯಾಮ್ ಚೀಕ್ ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ್ದಾರೆ. ಅದು ಸಹ ಕೇವಲ 137 ಎಸೆತಗಳಲ್ಲಿ ಎಂಬುದು ವಿಶೇಷ. ಮಾರ್ಫೆಟ್‌ವಿಲ್ಲೆ ಪಾರ್ಕ್ ವಿರುದ್ಧದ ಈ ಪಂದ್ಯದಲ್ಲಿ ಕೊರೊಮ್ಯಾಂಡಲ್ ಕ್ರಿಕೆಟ್ ಕ್ಲಬ್ ಕಣಕ್ಕಿಳಿದ ಸ್ಯಾಮ್ ಚೀಕ್ ತಂದೆಯೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಅಂದರೆ ತಂದೆ ಮತ್ತು ಮಗ ಜೊತೆಯಾಗಿ ಕಣಕ್ಕಿಳಿದಿದ್ದರು.

ಇತ್ತ ತಂದೆ ಡ್ಯಾರೆನ್ ಚೀಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ, ಇತ್ತ ಮಗ ಸ್ಯಾಮ್ ಚೀಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ ವಿಕೆಟ್​ಗೆ ಈ ಜೋಡಿಯು ಬರೋಬ್ಬರಿ 590 ರನ್​ಗಳ ಜೊತೆಯಾಟವಾಡಿದ್ದರು. ಇದರ ನಡುವೆ 137 ಎಸೆತಗಳನ್ನು ಎದುರಿಸಿದ ಸ್ಯಾಮ್ ಚೀಕ್ 42 ಸಿಕ್ಸ್ ಹಾಗೂ 30 ಫೋರ್​ಗಳೊಂದಿಗೆ ಅಜೇಯ 402 ರನ್​ ಬಾರಿಸಿದರು.

ಇನ್ನು ಡ್ಯಾರೆನ್ ಚೀಕ್ 108 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 20 ಫೋರ್​ಗಳೊಂದಿಗೆ ಅಜೇಯ 175 ರನ್ ಸಿಡಿಸಿದರು. ಈ ಮೂಲಕ ಕೊರೊಮ್ಯಾಂಡಲ್ ತಂಡವು ವಿಕೆಟ್ ನಷ್ಟವಿಲ್ಲದೆ 40 ಓವರ್‌ಗಳಲ್ಲಿ ಬರೋಬ್ಬರಿ 590 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಮಾರ್ಫೆಟ್‌ವಿಲ್ಲೆ ಪಾರ್ಕ್ ತಂಡವು 40 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 146 ರನ್ ಮಾತ್ರ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೊರೊಮ್ಯಾಂಡಲ್ ಕ್ರಿಕೆಟ್ ಕ್ಲಬ್ ತಂಡವು ಬರೋಬ್ಬರಿ 444 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ.

Sam Cheek Daren Cheek

ಸ್ಯಾಮ್ ಚೀಕ್ – ಡ್ಯಾರೆನ್ ಚೀಕ್

ಅಂದಹಾಗೆ ಡ್ಯಾರೆನ್ ಚೀಕ್ ಅವರು 1983 ರಿಂದ ಇದೇ ಕ್ಲಬ್ ಪರ ಆಡುತ್ತಿದ್ದಾರೆ. ಈವರೆಗೆ 11,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಇದೇ ಕ್ಲಬ್ ಪರ ಮಗ ಸ್ಯಾಮ್ ಚೀಕ್ ಕೂಡ ಇನಿಂಗ್ಸ್ ಆರಂಭಿಸಿದ್ದಾರೆ. ಈ ಇನಿಂಗ್ಸ್​ನೊಂದಿಗೆ ತಂದೆಯ ಜೊತೆಗೂಡಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

ಇದನ್ನೂ ಓದಿ: ‘ಸನ್​ರೈಸರ್ಸ್’ ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!

ಇನ್ನು ಈ ಪಂದ್ಯದಲ್ಲಿ ಸಾಧಿಸಿದ ಅಮೋಘ ಗೆಲುವಿನೊಂದಿಗೆ  ಕೊರೊಮ್ಯಾಂಡಲ್ ಕ್ರಿಕೆಟ್ ಕ್ಬಲ್ ತಂಡವು ಅಡಿಲೇಡ್ ಮತ್ತು ಸಬರ್ಬನ್ ಕ್ರಿಕೆಟ್ ಅಸೋಸಿಯೇಷನ್ ಟೂರ್ನಿಯ ಫೈನಲ್​ಗೆ ಪ್ರವೇಶಿಸಿದೆ.

ವಿಶ್ವ ದಾಖಲೆಗಳು:

ಡ್ಯಾರೆನ್ ಮತ್ತು ಸ್ಯಾಮ್ ಚೀಕ್ ಅವರ ಸಿಡಿಲಬ್ಬರದಿಂದ ಹವ್ಯಾಸಿ ಮತ್ತು ಕ್ಲಬ್ ಕ್ರಿಕೆಟ್ ಮಟ್ಟದಲ್ಲಿ ಹಲವಾರು ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಆ ದಾಖಲೆಗಳಾವುವು ಯಾವುದೆಂದರೆ…

  • ಗರಿಷ್ಠ ಜೊತೆಯಾಟ: 40 ಓವರ್‌ಗಳ ಸೀಮಿತ ಓವರ್‌ಗಳ ಪಂದ್ಯದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ದಾಖಲಾದ 590 ರನ್‌ಗಳ ಆರಂಭಿಕ ಜೊತೆಯಾಟವು ವಿಶ್ವ ದಾಖಲೆ ಎಂದು ಪರಿಗಣಿಸಲಾಗಿದೆ.
  • ವೈಯಕ್ತಿಕ ಗರಿಷ್ಠ ಸ್ಕೋರ್: ಸ್ಯಾಮ್ ಚೀಕ್ ಅವರು ಗಳಿಸಿದ 402 ರನ್*, 40 ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ ಆಗಿದೆ. ಇದು ಬ್ರಿಯಾನ್ ಲಾರಾ ಅವರ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ಸ್ಕೋರ್ (400*) ಗಿಂತಲೂ ಹೆಚ್ಚು ಎಂಬುದು ವಿಶೇಷ.
  • ಸಿಕ್ಸರ್‌ಗಳ ಸುರಿಮಳೆ: ಸ್ಯಾಮ್ ಚೀಕ್ ಒಂದೇ ಇನ್ನಿಂಗ್ಸ್‌ನಲ್ಲಿ 42 ಸಿಕ್ಸರ್‌ಗಳನ್ನು ಬಾರಿಸಿದ್ದು ಕೂಡ ಒಂದು ಅಸಾಧಾರಣ ದಾಖಲೆಯಾಗಿದೆ.
  • ಅಪರೂಪದ ತಂದೆ-ಮಗನ ಜೋಡಿ: ಕ್ಲಬ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ ಮತ್ತು ಮಗ ಇಬ್ಬರೂ ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ, ಇಡೀ ಇನ್ನಿಂಗ್ಸ್ ಪೂರ್ತಿ ಬ್ಯಾಟಿಂಗ್ ಮಾಡಿದ್ದು ಇದೇ ಮೊದಲ ಬಾರಿಗೆ ಎಂಬುದು ವಿಶೇಷ.
Follow Us