Explained: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್​ನ ಅಸಲಿಯತ್ತೇನು?

Gangster Lawrence Bishnoi story explained: ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಕೈವಾಡ ಇದೆ ಎಂದು ಅನುಮಾನಿಸಲಾಗಿರುವ ಲಾರೆನ್ಸ್ ಬಿಷ್ಣೋಯ್ ಎಂಬ ಪಾತಕಿ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತವೆ. 2014ರಿಂದಲೂ ಜೈಲಿನಲ್ಲಿರುವ ಲಾರೆನ್ಸ್, ಅಲ್ಲಿಂದಲೇ ಕೂತ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವುದು ನಿಜಕ್ಕೂ ಆಘಾತಕಾರಿ ಎನಿಸುತ್ತದೆ. ಸಿಧು ಮೂಸೆವಾಲ ಸೇರಿದಂತೆ ಹಲವರ ಕೊಲೆಯ ಹಿಂದೆ ಲಾರೆನ್ಸ್ ಕೈ ಇದೆ ಎನ್ನಲಾಗುತ್ತಿದೆ.

Explained: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್​ನ ಅಸಲಿಯತ್ತೇನು?
ಲಾರೆನ್ಸ್ ಬಿಷ್ಣೋಯ್
Follow us
|

Updated on: Oct 13, 2024 | 4:46 PM

ಅಜಿತ್ ಪವಾರ್ ಬಣದ ಎನ್​ಸಿಪಿ ಪಕ್ಷದ ಹೆಸರಾಂತ ನಾಯಕರೆನಿಸಿದ್ದ ಬಾಬಾ ಸಿದ್ದಿಕಿ ಅವರ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಎಂಬ ಗ್ಯಾಂಗ್​ಸ್ಟರ್​ನ ಹೆಸರು ಕೇಳಿಬಂದಿದೆ. ಪೊಲೀಸರೂ ಕೂಡ ಇದೇ ಅನುಮಾನ ಇಟ್ಟುಕೊಂಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬಹುಶಃ ಸಲ್ಮಾನ್ ಖಾನ್ ವಿಚಾರದಲ್ಲಿ ಹೆಚ್ಚಿನ ಜನರು ಕೇಳಿರಬಹುದು. ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ನಡೆದಿರುವ ಬಹುತೇಕ ಯತ್ನಗಳ ಹಿಂದೆ ಇದೇ ಲಾರೆನ್ಸ್ ಬಿಷ್ಣೋಯ್ ಮತ್ತವರ ಗ್ಯಾಂಗ್​ನ ಕೈವಾಡ ಇದೆ. ಅದನ್ನು ಬಿಷ್ಣೋಯ್ ಬಹಿರಂಗವಾಗಿಯೂ ಹೇಳಿಕೊಂಡಿದ್ದಿದೆ.

1998ರಲ್ಲಿ ರಾಜಸ್ಥಾನದಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಲ್ಮಾನ್ ಖಾನ್ ಅವರನ್ನು ಅದೇ ಕಾರಣಕ್ಕೆ ಕೊಲ್ಲಲು ಹೊರಟಿರುವುದಾಗಿ ಲಾರೆನ್ಸ್ ಹಿಂದೆಲ್ಲಾ ಹೇಳಿದ್ದಿದೆ. ಶನಿವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ಹತರಾದ ಬಾಬಾ ಸಿದ್ದಿಕಿ ಅವರು ಸಲ್ಮಾನ್ ಖಾನ್​ಗೆ ಆಪ್ತರಾಗಿದ್ದರು. ಸಲ್ಮಾನ್ ಮಾತ್ರವಲ್ಲ ಬಾಲಿವುಡ್​ನ ಬಹಳಷ್ಟು ಸೆಲಬ್ರಿಟಿಗಳಿಗೆ ಬಾಬಾ ಆಪ್ತರಾಗಿದ್ದರು. ಸಲ್ಮಾನ್ ಖಾನ್ ಅವರನ್ನು ಮುಗಿಸಲು ಪಣತೊಟ್ಟಿರುವ ಲಾರೆನ್ಸ್, ಆ ಕಾರಣಕ್ಕೆ ಸಿದ್ದಿಕಿಯನ್ನು ಕೊಲ್ಲಿಸಿದನಾ ಎಂಬ ಅನುಮಾನ ಬರಬಹುದು. ಅಷ್ಟಕ್ಕೂ 10 ವರ್ಷಗಳಿಂದಲೂ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಆತನಿಂದ ‘ಬೇಟೆ’ ಆಗುತ್ತಿದೆ.

ಕೃಷ್ಣಮೃಗ ಬೇಟೆ ವಿಚಾರದಲ್ಲಿ ಬಿಷ್ಣೋಯ್​ಗೆ ಯಾಕೆ ಈ ಹಗೆತನ?

ಲಾರೆನ್ಸ್ ಬಿಷ್ಣೋಯ್ ಅವರು ಕೃಷ್ಣಮೃಗವನ್ನು ದೇವರೆಂದು ಪೂಜಿಸುವ ಬುಡಕಟ್ಟು ಸಮುದಾಯಕ್ಕೆ ಸೇರಿದವರೆನ್ನಲಾಗಿದೆ. 1998ರಲ್ಲಿ ಸಲ್ಮಾನ್ ಖಾನ್ ಹಾಗೂ ಬಾಲಿವುಡ್​ನ ಇತರ ನಟರು ಸಿನಿಮಾ ಚಿತ್ರೀಕರಣಕ್ಕೆ ರಾಜಸ್ಥಾನಕ್ಕೆ ಹೋದಾಗ ಅಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿ ಕೊಂದಿದ್ದರು. ಕೃಷ್ಣಮೃಗ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಪಟ್ಟಿಯಲ್ಲಿದ್ದು, ಅದನ್ನು ಬೇಟೆಯಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ನ್ಯಾಯಾಲಯವು ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಸದ್ಯ ಖಾನ್​ಗೆ ಜಾಮೀನೇನೋ ಸಿಕ್ಕಿದೆ. ಆದರೆ, ಲಾರೆನ್ಸ್ ಬಿಷ್ಣೋಯ್ ತಾನು ಸಲ್ಮಾನ್​ರನ್ನು ಬಿಡೋದಿಲ್ಲ ಎಂದು ಶಪಥ ತೊಟ್ಟಿದ್ದಾನೆ. ಜೋಧಪುರದಲ್ಲೇ ಸಲ್ಮಾನ್​ರನ್ನು ಸಂಹರಿಸುವುದಾಗಿ ಹೇಳುತ್ತಾನೆ.

ಇದನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಕೊಲೆ ಹಿಂದಿದೆಯಾ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್ ಕೈವಾಡ?

ಯಾರು ಈ ಲಾರೆನ್ಸ್ ಬಿಷ್ಣೋಯ್?

ಲಾರೆನ್ಸ್ ಬಿಷ್ಣೋಯ್ 1993ರಲ್ಲಿ ಪಂಜಾಬ್​ನ ಫಿರೋಜ್​ಪುರ್​ನ ಊರೊಂದರಲ್ಲಿ ಜನಿಸಿದ ವ್ಯಕ್ತಿ. ಈತನ ತಂದೆ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೆಬಲ್ ಆಗಿ, ನಂತರ ಕೃಷಿಗಾರಿಕೆ ಆರಂಭಿಸಿದರು. ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ಗಡಿಭಾಗದಲ್ಲಿರುವ ಅಬುಹರ್​ನಲ್ಲಿ 12ನೇ ತರಗತಿಯವರೆಗೂ ಓದಿದ ಲಾರೆನ್ಸ್, ಬಳಿಕ ಚಂಡೀಗಡದ ಡಿಎವಿ ಕಾಲೇಜಿಗೆ ಸೇರುತ್ತಾನೆ.

ಲಾರೆನ್ಸ್​ಗೆ ಕ್ರಿಮಿನಲ್ ಟಚ್ ಕೊಟ್ಟ ಡಿಎವಿ ಕಾಲೇಜು

ಲಾರೆನ್ಸ್ ಬಿಷ್ಣೋಯ್ ಚಂಡೀಗಡದ ಡಿಎವಿ ಕಾಲೇಜು ಸೇರುವವರೆಗೂ ಯಾವ ಕ್ರಿಮಿನಲ್ ಚಟುವಟಿಕೆ ದಾಖಲಾದ ಮಾಹಿತಿ ಇಲ್ಲ. ಆದರೆ, ಪಂಜಾಬ್ ಯೂನಿವರ್ಸಿಟಿ ಕ್ಯಾಂಪಸ್ ವಿದ್ಯಾರ್ಥಿಗಳ ಮಂಡಳಿಗೆ ಸೇರಿದ ಬಳಿಕ ಗೋಲ್ಡಿ ಬ್ರಾರ್ ಪರಿಚಯವಾಯಿತು. ಆಗಲೇ ಗ್ಯಾಂಗ್​ಸ್ಟರ್ ಆಗಿದ್ದ ಗೋಲ್ಡಿ ಬ್ರಾರ್ ಸಂಗದಿಂದ ಲಾರೆನ್ಸ್ ಕ್ರೈಮ್ ಲೋಕಕ್ಕೆ ಪದಾರ್ಪಣೆ ಮಾಡಿರಬಹುದು. ಪಂಜಾಬ್ ಯೂನಿವರ್ಸಿಟಿಯಲ್ಲಿ ಎಲ್​ಎಲ್​ಬಿ ಓದುತ್ತಿರುವ ಹೊತ್ತಲ್ಲೇ ಅಲ್ಲಿಯ ಪೊಲಿಟಿಕ್ಸ್ ಮತ್ತು ಕ್ರೈಮ್​ಗಳಲ್ಲಿ ಲಾರೆನ್ಸ್ ಮತ್ತು ಗೋಲ್ಡಿ ಸಾಕಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

2012ರಿಂದಲೂ ಜೈಲಲ್ಲೇ ಇರುವ ಲಾರೆನ್ಸ್

2010ರಿಂದ 2012ರವರೆಗೆ ಲಾರೆನ್ಸ್ ಬಿಷ್ಣೋಯ್ ಹಲವು ಅಪರಾಧ ಪ್ರಕರಣಗಳಲ್ಲಿ ಮಸಿ ಮೆತ್ತಿಕೊಂಡಿದ್ದ. ಕೊಲೆ, ಹಲ್ಲೆ, ದರೋಡೆ, ಅತಿಕ್ರಮ ಇತ್ಯಾದಿ ಅಪರಾಧಗಳನ್ನು ಎಸಗಿದ ಆರೋಪ ಆತನ ಮೇಲಿದೆ. ಹತ್ತಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ಆದರೆ ತಾನ್ಯಾವ ಅಪರಾಧ ಮಾಡಿಲ್ಲ ಎಂಬುದು ಬಿಷ್ಣೋಯ್ ವಾದ.

ಇದನ್ನೂ ಓದಿ: ಕಾಂಗ್ರೆಸ್​ಗಾಗಿಯೇ ನಡೆದಿತ್ತಾ ರೈತರ ಪ್ರತಿಭಟನೆ, ಆದರೂ ಹರ್ಯಾಣದಲ್ಲಿ ಸೋತಿದ್ಹೇಗೆ, ಕಾರಣ ಬಿಚ್ಚಿಟ್ಟ ರೈತ ಮುಖಂಡ

2012ರಿಂದ ಬಹುತೇಕ ಹೆಚ್ಚಿನ ಅವಧಿ ಈತ ಜೈಲಿನಲ್ಲಿದ್ದಾನೆ. ಜೈಲಿಂದ ಹೊರಬಂದಾಗೆಲ್ಲಾ ಈತ ಪೈಶಾಚಿಕ ಕೃತ್ಯ ಎಸಗುತ್ತಲೇ ಇದ್ದ. 2013ರಲ್ಲಿ ಮುಖ್ತಸರ್​ನಲ್ಲಿ ಗವರ್ನ್ಮೆಂಟ್ ಕಾಲೇಜು ಚುನಾವಣೆಯ ವಿಜೇತ ಅಭ್ಯರ್ಥಿಯನ್ನು ಗುಂಡಿಟ್ಟು ಕೊಂದಿದ್ದ. ಲೂಧಿಯಾನ ನಗರಸಭೆ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿಯನ್ನು ಮುಗಿಸಿದ ಆರೋಪ ಈತನ ಮೇಲಿದೆ. ಹಲವು ಭೂಗತ ಪಾತಕಿಗಳ ನೆಟ್ವರ್ಕ್ ಸಂಪಾದಿಸಿದ್ದ.

2014ರಲ್ಲಿ ರಾಜಸ್ಥಾನದ ಪೊಲೀಸರ ಮೇಲೆಯೇ ಈತನ ಗ್ಯಾಂಗ್ ಗುಂಡಿನ ಕಾಳಗ ನಡೆಸಿತ್ತು. ಇದಾದ ಬಳಿಕ ಈತನನ್ನು ಬಂಧಿಸಲಾಯಿತು. ಆಗಿನಿಂದ ಬಹುತೇಕ ಈತ ಜೈಲುವಾಸದಲ್ಲೇ ಇದ್ದಾನೆ. ಜೈಲಿಂದಲೇ ಎಲ್ಲಾ ಕ್ರಿಮಿನಲ್ ಚಟುವಟಿಕೆ ನಡೆಸುತ್ತಾ ಬರುತ್ತಿದ್ದಾನೆ ಎನ್ನಲಾಗಿದೆ.

ಪ್ರತೀಕಾರದ ಪ್ರತಿಮೂರ್ತಿ ಲಾರೆನ್ಸ್

ಒಂದು ಅಂದಾಜು ಪ್ರಕಾರ ಲಾರೆನ್ಸ್ ಬಿಷ್ಣೋಯ್​ನ ಗ್ಯಾಂಗ್​ನಲ್ಲಿ 700 ಮಂದಿ ಸದಸ್ಯರು ಇದ್ದಾರೆನ್ನಲಾಗಿದೆ. ಇವರಲ್ಲಿ ಯಾರಿಗೆ ಏನೇ ಆದರೂ ಅದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡೋದಿಲ್ಲ ಎಂಬುದು ಈತನ ಶಪಥ.

ಇದನ್ನೂ ಓದಿ: ಮೈಸೂರು-ದರ್ಭಾಂಗ ರೈಲು ಅಪಘಾತ: ತನಿಖೆ ಆರಂಭಿಸಿದ ಎನ್​ಐಎ

ಪಂಜಾಬೀ ಗಾಯಕ ಸಿಧು ಮೂಸೆವಾಲ, ಕೆನಡಾದ ಗ್ಯಾಂಗ್​ಸ್ಟರ್ ಸುಖದೂಲ್ ಸಿಂಗ್ ಅಲಿಯಾಸ ಸುಖ ದುನೆಕೆ ಮೊದಲಾದವರ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಕೈವಾಡ ಇರುವುದು ಗೊತ್ತಾಗಿದೆ. ಗುರ್ಲಾಲ್ ಬ್ರಾರ್ ಮತ್ತು ವಿಕಿ ಮಿದ್ದುಖೇಡ್ ಎಂಬ ಲಾರೆನ್ಸ್ ಗ್ಯಾಂಗ್ ಸದಸ್ಯರ ಹತ್ಯೆ ಹಿಂದೆ ಸುಖದೂಲ್ ಸಿಂಗ್ ಕೈವಾಡ ಇದ್ದರಿಂದ ಆತನನ್ನು ತಾನು ಮುಗಿಸಿದೆ ಎಂದು ಲಾರೆನ್ಸ್ ಹೇಳಿಕೊಂಡಿದ್ದಿದೆ.

ಖಲಿಸ್ತಾನೀ ಲಿಂಕ್, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ…

ಲಾರೆನ್ಸ್ ಬಿಷ್ಣೋಯ್ ರೌಡಿಸಂ ಮಾತ್ರವಲ್ಲ, ಮದ್ಯ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಇತ್ಯಾದಿ ಆದಾಯ ತರುವ ಅಪರಾಧ ಕೃತ್ಯಗಳಿಗೆ ತನ್ನ ಚಟುವಟಿಕೆಯನ್ನು ವಿಸ್ತರಿಸಿದ್ದ. ಇತರ ಕ್ರಿಮಿನಲ್​ಗಳಿಗೆ ರಕ್ಷಣೆ ಕೊಡುತ್ತಿದ್ದ. ಖಲಿಸ್ತಾನೀ ಉಗ್ರರರೊಂದಿಗೆ ನಂಟು ಇಟ್ಟುಕೊಂಡಿದ್ದ. ಈ ಎಲ್ಲಾ ವಿಚಾರಗಳನ್ನು ಎನ್​ಐಎ ತನ್ನ ತನಿಖೆಯಲ್ಲಿ ಪತ್ತೆ ಮಾಡಿದೆ.

ಜೈಲಿಂದ ಹೇಗೆ ಈತ ನಿಭಾಯಿಸುತ್ತಾನೆ?

ಲಾರೆನ್ಸ್ ಬಿಷ್ಣೋಯ್​ನನ್ನು ಭದ್ರತಾ ದೃಷ್ಟಿಯಿಂದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಭರತ್​ಪುರ್ ಜೈಲು, ತಿಹಾರ್ ಜೈಲಿನಲ್ಲಿ ಈತನನ್ನು ಇಡಲಾಗಿತ್ತು. ಈಗ ಸಬರಮತಿ ಜೈಲಿನಲ್ಲಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ ಈತ ವಿಒಐಪಿ ಮೂಲಕ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಮಾತನಾಡುತ್ತಾನೆ. ಜೈಲಿನಲ್ಲೇ ಇದ್ದುಕೊಂಡು ಟಿವಿ ನ್ಯೂಸ್ ಚಾನಲ್​ಗಳಿಗೆ ಈತ ಸಂದರ್ಶನ ನೀಡಿದ್ದಿದೆ. ಜೈಲಿನ ಅಧಿಕಾರಿಗಳ ಬೆಂಬಲ ಇಲ್ಲದೇ ಇದು ನಡೆಯುವಂಥದ್ದಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
"ಇಟ್ಟ ರಾಮನ ಬಾಣ ಹುಸಿಯಿಲ್ಲ" ಆತಂಕ ಮೂಡಿಸಿದ ಮೈಲಾರಲಿಂಗೇಶ್ವರ ಕಾರ್ಣಿಕ
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ