AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಸಿನಿಮಾ ಬಜೆಟ್ ಹಾಗೂ ಸ್ಟಾರ್​​ಗಳ ಸಂಭಾವನೆ ವಿವರ

ಆದಿತ್ಯ ಧಾರ್ ನಿರ್ದೇಶನದ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಯುಗಾದಿಗೆ ಬಿಡುಗಡೆಗೆ ಸಜ್ಜಾಗಿದೆ. 275 ಕೋಟಿ ಬಜೆಟ್‌ನ ಈ ಮಲ್ಟಿಸ್ಟಾರರ್ ಚಿತ್ರದಲ್ಲಿ ರಣವೀರ್ ಸಿಂಗ್‌ಗೆ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಅಕ್ಷಯ್ ಖನ್ನಾ ಸೇರಿದಂತೆ ಇತರ ಪ್ರಮುಖ ನಟರ ಸಂಭಾವನೆ ವಿವರಗಳು ಇಲ್ಲಿವೆ.

‘ಧುರಂಧರ್ 2’ ಸಿನಿಮಾ ಬಜೆಟ್ ಹಾಗೂ ಸ್ಟಾರ್​​ಗಳ ಸಂಭಾವನೆ ವಿವರ
ರಣವೀರ್ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 18, 2026 | 8:09 AM

Share

ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ‘ಧುರಂಧರ್ 2’ (Dhurandhar 2) ಬಿಡುಗಡೆ ಸಮೀಪಿಸುತ್ತಿದೆ. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಈ ಚಿತ್ರವು ಮಾರ್ಚ್ 19ರಂದು ಯುಗಾದಿಗೆ ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಮಾರ್ಚ್ 18ರಂದು, ‘ಧುರಂಧರ್ 2’ ಪ್ರೀಮೀಯರ್​ಗಳನ್ನು ಆಯೋಜಿಸಲಾಗಿದೆ. ಮೊದಲ ಭಾಗವು ಬ್ಲಾಕ್ಬಸ್ಟರ್ ಆಗಿದ್ದರಿಂದ, ಈ ಮುಂದುವರಿದ ಭಾಗದ ಮೇಲೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳಿವೆ. ರಣವೀರ್ ಸಿಂಗ್, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಇತರ ತಾರೆಯರು ಈ ಬಹುತಾರಾಗಣದ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಜೆಟ್ 275 ಕೋಟಿ ರೂಪಾಯಿ. ಕಲಾವಿದರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ‘ಧುರಂಧರ್ 2’ ಚಿತ್ರಕ್ಕಾಗಿ ರಣವೀರ್ ಸಿಂಗ್ ಅವರಿಗೆ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಈ ಚಿತ್ರದಲ್ಲಿ ಅವರು ಅತಿ ಹೆಚ್ಚು ಸಂಭಾವನೆ ಪಡೆದಿರೋ ನಟ. ಈ ಚಿತ್ರದಲ್ಲಿ ರಣವೀರ್ ಹಮ್ಜಾ ಮತ್ತು ಜಸ್ಕಿರತ್ ಸಿಂಗ್ ರಂಗಿ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚೌಧರಿ ಅಸ್ಲಾಂ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್ ಗೆ 10 ಕೋಟಿ ರೂ. ಅರ್ಜುನ್ ರಾಂಪಾಲ್ ಈ ಚಿತ್ರದಲ್ಲಿ ಅತ್ಯಂತ ಕ್ರೂರ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ 3 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಸಾರಾ ಅರ್ಜುನ್ ಗೆ 1 ಕೋಟಿ ರೂ. ಹಮ್ಜಾ ಅವರ ಪತ್ನಿ ಯಲಿನಾ ಜಮಾಲಿ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕ್ರಿಕೆಟರ್ ಆಗ ಹೊರಟಿದ್ದ ‘ಧುರಂಧರ್’ ನಿರ್ದೇಶಕ; ರಾಜಕೀಯದಿಂದ ಎಲ್ಲವೂ ಬದಲಾಯ್ತು

ಈ ಚಿತ್ರದಲ್ಲಿ ನಟ ಆರ್. ಮಾಧವನ್ ಅಜಯ್ ಸನ್ಯಾಲ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರು 9 ಕೋಟಿ ರೂ. ಸಂಭಾವನೆ ಪಡೆದರು. ‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರ ಪಾತ್ರವು ಒಂದು ಹೈಲೈಟ್ ಆಗಿತ್ತು. ಮೊದಲ ಭಾಗದಲ್ಲಿ, ಅಕ್ಷಯ್, ರೆಹಮಾನ್ ಡಕಾಯಿತ ಪಾತ್ರ ಸಾಯುತ್ತದೆ. ಆದರೆ ಈಗ ಎರಡನೇ ಭಾಗದಲ್ಲಿ ಅಕ್ಷಯ್ ಫ್ಲ್ಯಾಷ್‌ಬ್ಯಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗವು ಡಿಸೆಂಬರ್ 2025 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 1300 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us