AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಲಿವುಡ್​​ಗೂ ಮಾದರಿ ಆಯ್ತು ವಿಜಯಲಕ್ಷ್ಮೀ, ರಮ್ಯಾ ನಿರ್ಧಾರ

ನಟಿಯರಾದ ರಮ್ಯಾ ಮತ್ತು ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ದೂರು ನೀಡಿ, ಹಲವರ ಬಂಧನಕ್ಕೆ ಕಾರಣರಾದರು. ಈ ದಿಟ್ಟ ನಿರ್ಧಾರ ಕರ್ನಾಟಕದ ನಟಿಯರಿಗೆ ಮಾತ್ರವಲ್ಲದೆ, ರೇಣು ದೇಸಾಯಿ, ಅನಸೂಯಾ ಅವರಂತಹ ಟಾಲಿವುಡ್ ನಟಿಯರಿಗೂ ಸ್ಫೂರ್ತಿ ನೀಡಿದೆ. ಇದು ಸೈಬರ್ ಕಿರುಕುಳ ಮಾಡುವವರಿಗೆ ಎಚ್ಚರಿಕೆ ಆಗಿದೆ. 

ಟಾಲಿವುಡ್​​ಗೂ ಮಾದರಿ ಆಯ್ತು ವಿಜಯಲಕ್ಷ್ಮೀ, ರಮ್ಯಾ ನಿರ್ಧಾರ
ರಮ್ಯಾ-ದರ್ಶನ್, ವಿಜಯಲಕ್ಷ್ಮಿ
ರಾಜೇಶ್ ದುಗ್ಗುಮನೆ
|

Updated on: Mar 18, 2026 | 9:02 AM

Share

ನಟಿ ರಮ್ಯಾ (Ramya) ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಅಶ್ಲೀಲ ಕಮೆಂಟ್ ಹಾಕಿದವರ ವಿರುದ್ಧ ದೂರು ನೀಡಿದ್ದರು. ಈ ಮೂಲಕ ಇಂಥವರ ವಿರುದ್ಧ ಸುಮ್ಮನೆ ಇರಬಾರದು ಎಂಬ ಸಂದೇಶ ರವಾನಿಸಿದ್ದಾರೆ. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಅಶ್ಲೀಲ ಕಮೆಂಟ್​​ಗಲಿಂದ ಕಂಗೆಟ್ಟಿದ್ದ ಎಲ್ಲರಿಗೂ ಇದೊಂದು ಮಾದರಿ ಆಯಿತು. ಈಗ ಪರಭಾಷೆಯಲ್ಲೂ ನಟಿಯರು ಈ ರೀತಿ ನಿರ್ಧಾರ ಮಾಡುತ್ತಿದ್ದಾರೆ. ನಟಿಯರು ಮುಂದೆ ಬಂದು ಕೇಸ್ ದಾಖಲಿಸುತ್ತಿದ್ದಾರೆ.

ಟಾಲಿವುಡ್ ನಟಿ ರೇಣು ದೇಸಾಯಿಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದರು. ಇದನ್ನು ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ತೆಲಂಗಾಣ ಪೊಲೀಸರು ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಆತ ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾನೆ.

ನಟಿ ಅನಸುಯಾ ಅವರ ಮೇಲೆ ಕೆಟ್ಟದಾಗಿ ಕಮೆಂಟ್ ಹಾಕಿದ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಮೂಲ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅನೇಕ ನಟಿಯರು ಈ ರೀತಿ ಮುಂದೆ ಬಂದ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಕಮೆಂಟ್ ಮಾಡುವವರು ತಮ್ಮ ಗುರುತು ಯಾರಿಗೂ ಸಿಗೋದಿಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ, ಅಸಲಿಗೆ ಹಾಗಿರೋದಿಲ್ಲ ಎಂಬುದನ್ನು ಪೊಲೀಸರು ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ ಹೇಳಿದ ರಮ್ಯಾ ಕರ್ನಾಟಕದಲ್ಲಿ ಅನೇಕ ನಟಿಯರು ಇದೇ ರೀತಿಯ ದಿಟ್ಟ ಕ್ರಮ ಕೈಗೊಂಡಿದ್ದರು. ರಮ್ಯಾ ಅವರು ಈ ವಿಷಯದಲ್ಲಿ ಮೊದಲು ಹೆಜ್ಜೆ ಇಟ್ಟರು. ಅವರು ನೀಡಿದ ದೂರು ಆಧರಿಸಿ ಅನೇಕರನ್ನು ಬಂಧಿಸಲಾಗಿದೆ. ಇತ್ತೀಚೆಗೆ ವಿಜಯಲಕ್ಷ್ಮೀ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಹಾಕಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಈಗ ಟಾಲಿವುಡ್ ನಟಿಯರು ಸಿಡಿದೆದ್ದಿದ್ದಾರೆ. ಇದು ಎಲ್ಲಾ ಚಿತ್ರರಂಗಕ್ಕೂ ಹಬ್ಬಬೇಕು ಎಂಬುದು ಅನೇಕರ ಆಸೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್
ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್