ಟಿವಿ9 ಫೆಸ್ಟಿವಲ್ ಆಫ್​ ಇಂಡಿಯಾ, ಕೊನೆಯ ದಿನದ ಉತ್ಸವ, ಏನೆಲ್ಲಾ ವಿಶೇಷತೆಗಳಿವೆ ಇಲ್ಲಿದೆ ಮಾಹಿತಿ

ದಸರಾ ಅಂಗವಾಗಿ ಟಿವಿ9 ನೆಟ್​ವರ್ಕ್​ ದೆಹಲಿಯ ಮೇಜರ್ ಧ್ಯಾನ್​ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಉತ್ಸವಕ್ಕೆ ಇಂದು ತೆರೆ ಬೀಳಲಿದೆ. ಇಂದು ಏನೆಲ್ಲಾ ಕಾರ್ಯಕ್ರಮಗಳು ಜರುಗಲಿವೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಟಿವಿ9 ಫೆಸ್ಟಿವಲ್ ಆಫ್​ ಇಂಡಿಯಾ, ಕೊನೆಯ ದಿನದ ಉತ್ಸವ, ಏನೆಲ್ಲಾ ವಿಶೇಷತೆಗಳಿವೆ ಇಲ್ಲಿದೆ ಮಾಹಿತಿ
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ Image Credit source: Tv9 Hindi
Follow us
|

Updated on: Oct 13, 2024 | 12:43 PM

ದಸರಾ ಅಂಗವಾಗಿ ಟಿವಿ9 ನೆಟ್​ವರ್ಕ್​ ದೆಹಲಿಯ ಮೇಜರ್ ಧ್ಯಾನ್​ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾಗೆ ಇಂದು ತೆರೆ ಬೀಳಲಿದೆ. ಇಂದು ಏನೆಲ್ಲಾ ಕಾರ್ಯಕ್ರಮಗಳು ಜರುಗಲಿವೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಕಳೆದ ನಾಲ್ಕು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದರು. ಹಬ್ಬದ ಕೊನೆಯ ದಿನವಾದ ಇಂದು ಬೆಳಗ್ಗೆ 9 ಗಂಟೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಪ್ರಾರಂಭವಾಯಿತು. ಐದನೇ ದಿನವಾದ ಇಂದು ಸಿಂಧೂರ್​ ಖೇಲಾ ಕಾರ್ಯಕ್ರಮ ನಡೆಯಲಿದೆ ಎಂದು ಹಬ್ಬದ ಅಂತಿಮ ಘಟ್ಟವನ್ನು ಸೂಚಿಸುತ್ತದೆ. ಇದರಲ್ಲಿ ದೇವಿಯ ಆಶೀರ್ವಾದ ಪಡೆದು ಒಬ್ಬರಿಗೊಬ್ಬರು ಕುಂಕುಮವನ್ನು ಇಟ್ಟುಕೊಳ್ಳುತ್ತಾರೆ.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತೆ ದುರ್ಗೆಯ ಆಶೀರ್ವಾದ ಪಡೆದರು. ಶನಿವಾರ ಗರ್ಬಾ ನೃತ್ಯ ಪ್ರಮುಖ ಆಕರ್ಷಣೆಯಾಗಿತ್ತು, ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಲಾಯಿತು.

ಮತ್ತಷ್ಟು ಓದಿ: ಇಂದು ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ನಾಲ್ಕನೇ ದಿನ: ಇಂದಿನ ಕಾರ್ಯಕ್ರಮಗಳ ವಿವರ ಇಲ್ಲಿದೆ

ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ಪತಿ ಆಶಿಶ್ ಪಟೇಲ್ ಅವರೊಂದಿಗೆ ಟಿವಿ9 ಎರಡನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಪವನ್ ಖೇಡಾ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳು ಉತ್ಸವದಲ್ಲಿ ಭಾಗವಹಿಸಿದ್ದರು. ಅತಿಥಿಗಳೊಂದಿಗೆ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುನ್ ದಾಸ್ ಕೂಡ ಉಪಸ್ಥಿತರಿದ್ದರು.

ಬಿಜೆಪಿ ನಾಯಕ ಹಾಗೂ ದೆಹಲಿಯ ಲೋಕಸಭಾ ಸಂಸದ ಮನೋಜ್ ತಿವಾರಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಸಂಸದ ಮನೋಜ್ ಅವರು ದುರ್ಗಾ ಮಾತೆಯ ಆಶೀರ್ವಾದ ಪಡೆದರು. ಅದ್ಭುತವಾದ ಸ್ಮರಣೀಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ಟಿವಿ9 ನೆಟ್‌ವರ್ಕ್‌ಗೆ ಧನ್ಯವಾದ ಅರ್ಪಿಸಿದರು.

ನವರಾತ್ರಿ ಮತ್ತು ದಸರಾವನ್ನು ಆಚರಿಸಲು ಭಾರತೀಯ ಮತ್ತು ವಿದೇಶಿ ತಿನಿಸುಗಳ 250 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಆಯೋಜಿಸಿದ್ದ ಮೇಳದಲ್ಲಿ ಜನರು ಗರ್ಬಾ ನೃತ್ಯದ ಜತೆಗೆ ರುಚಿಕರ ತಿನಿಸುಗಳನ್ನು ಸವಿಯುತ್ತಿರುವುದು ಕಂಡು ಬಂತು.

ಬಿಹಾರದ ಪ್ರಸಿದ್ಧ ಲಿಟ್ಟಿ-ಚೋಖಾ, ರಾಜಸ್ಥಾನಿ ಪಾಕಪದ್ಧತಿಯಿಂದ ಪಂಜಾಬಿ ತಿನಿಸು, ಲಕ್ನೋವಿ ಕಬಾಬ್ ಮತ್ತು ದೆಹಲಿಯ ಪ್ರಸಿದ್ಧ ಚಾಟ್, ಆಹಾರ ಸಂಬಂಧಿತ ಸ್ಟಾಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ವೇದಿಕೆಯಲ್ಲಿ ಹಲವು ಜನಪದ ಕಲಾವಿದರು ಬಂಗಾಳ ಮಾತ್ರವಲ್ಲದೆ ಪಂಜಾಬ್ ಮತ್ತು ಗುಜರಾತ್ ನ ಸಾಂಪ್ರದಾಯಿಕ ನೃತ್ಯಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
"ಇಟ್ಟ ರಾಮನ ಬಾಣ ಹುಸಿಯಿಲ್ಲ" ಆತಂಕ ಮೂಡಿಸಿದ ಮೈಲಾರಲಿಂಗೇಶ್ವರ ಕಾರ್ಣಿಕ
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು