ಒಬ್ಬ ಕೇಂದ್ರ ಸಚಿವನೂ ಸರ್ಕಾರದ ಪರವಾಗಿ ಸಭೆಯಲ್ಲಿ ಭಾಗವಹಿಸಲು ಆಗಮಿಸದೆ ಹೋಗಿದ್ದು ರೈತರ ಕೋಪಕ್ಕೆ ಕಾರಣವಾಗಿತ್ತು. ಮುಷ್ಕರ ನಡೆಸುವಾಗ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಿಷಯಕ್ಕೆ ಸಂಬಂಧಿಸಿದಂತೆ, ಇಂದಿನ ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸರಾಂಗ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈಗಾಗಲೆ ಕೃಷಿ ಸಂಘಟನೆಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆಂದು ಹೇಳಿದರು.
‘‘ರೈತರು ಇನ್ನಷ್ಟು ಚರ್ಚೆ ನಡೆಸುವ ಇರಾದೆ ಇಟ್ಟುಕೊಂಡಿದ್ದರೆ, ಸರ್ಕಾರ ಮಾತುಕತೆಗೆ ಮುಕ್ತವಾಗಿದೆ. ಆದರೆ ತೋಮರ್ಜೀ ಆವರು ಬೇರೆ ಕೆಲಸದಲ್ಲಿ ವ್ಯಸ್ತರಾಗಿದ್ದರಿಂದ ಇವತ್ತಿನ ಸಭೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅವರಿಗೆ ಬಿಡುವು ಸಿಕ್ಕ ಕೂಡಲೇ ಎಲ್ಲ ರೈತ ಸಂಘಟನೆಗಳನ್ನು ಭೇಟಿ ಮಾಡಲಿದ್ದಾರೆ,’’ ಎಂದು ಜಾವಡೇಕರ್ ಹೇಳಿದರು.