Sign In

By signing in or creating an account, you agree with Associated Broadcasting Company's Terms & Conditions and Privacy Policy.

75 ರೂಪಾಯಿಗೆ ಸಿಗಲಿದೆಯಾ ಕೊರೊನಾ ಲಸಿಕೆ?

ರಷ್ಯಾ ಹೊರತುಪಡಿಸಿದರೆ ಜಗತ್ತಿನ ಬೇರೆ ಯಾವ ದೇಶದಲ್ಲೂ ಕೊರೊನಾಗೆ ಸೂಕ್ತ ಲಸಿಕೆ ಸಿಕ್ಕಿಲ್ಲ. ಭಾರತದಲ್ಲೂ 3 ಪ್ರಮುಖ ಕಂಪನಿಗಳು ಕೊರೊನಾ ಲಸಿಕೆಗೆ ಸಂಶೋಧನೆ ನಡೆಸುತ್ತಿವೆ. ಆದ್ರೆ ಭಾರತದಲ್ಲಿ ಲಸಿಕೆಗೆ ಸಾಮಾನ್ಯ ಜನರು ಎಷ್ಟು ಹಣ ತೆರಬೇಕಾಗುತ್ತೆ, ಲಸಿಕೆ ದುಬಾರಿಯಾಗುತ್ತಾ, ಇಲ್ಲ ಅಗ್ಗವಾಗುತ್ತಾ, ಸರ್ಕಾರವೇ ಖರೀದಿಸಿ ಉಚಿತ ಲಸಿಕೆ ನೀಡುತ್ತಾ ಎನ್ನುವ ಕುತೂಹಲ ಇದ್ದು, ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಇನ್ನೂ ಕನ್ಫರ್ಮ್ ಆಗಿಲ್ಲ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಕ್ಯಾಡಿಲಾ ಹೆಲ್ತ್ ಕೇರ್, […]

75 ರೂಪಾಯಿಗೆ ಸಿಗಲಿದೆಯಾ ಕೊರೊನಾ ಲಸಿಕೆ?
ಕೊರೊನಾ ವ್ಯಾಕ್ಸಿನ್
Follow us
ಆಯೇಷಾ ಬಾನು
|

Updated on: Oct 15, 2020 | 8:34 AM

ರಷ್ಯಾ ಹೊರತುಪಡಿಸಿದರೆ ಜಗತ್ತಿನ ಬೇರೆ ಯಾವ ದೇಶದಲ್ಲೂ ಕೊರೊನಾಗೆ ಸೂಕ್ತ ಲಸಿಕೆ ಸಿಕ್ಕಿಲ್ಲ. ಭಾರತದಲ್ಲೂ 3 ಪ್ರಮುಖ ಕಂಪನಿಗಳು ಕೊರೊನಾ ಲಸಿಕೆಗೆ ಸಂಶೋಧನೆ ನಡೆಸುತ್ತಿವೆ. ಆದ್ರೆ ಭಾರತದಲ್ಲಿ ಲಸಿಕೆಗೆ ಸಾಮಾನ್ಯ ಜನರು ಎಷ್ಟು ಹಣ ತೆರಬೇಕಾಗುತ್ತೆ, ಲಸಿಕೆ ದುಬಾರಿಯಾಗುತ್ತಾ, ಇಲ್ಲ ಅಗ್ಗವಾಗುತ್ತಾ, ಸರ್ಕಾರವೇ ಖರೀದಿಸಿ ಉಚಿತ ಲಸಿಕೆ ನೀಡುತ್ತಾ ಎನ್ನುವ ಕುತೂಹಲ ಇದ್ದು, ಇದಕ್ಕೆಲ್ಲಾ ಉತ್ತರ ಇಲ್ಲಿದೆ.

ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಇನ್ನೂ ಕನ್ಫರ್ಮ್ ಆಗಿಲ್ಲ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಕ್ಯಾಡಿಲಾ ಹೆಲ್ತ್ ಕೇರ್, ಭಾರತ್ ಬಯೋಟೆಕ್‌ ಕಂಪನಿಗಳು ಕೊರೊನಾ ಲಸಿಕೆ ಪ್ರಯೋಗದಲ್ಲಿ ತೊಡಗಿವೆ. ನವೆಂಬರ್ ಅಂತ್ಯ ಇಲ್ಲವೇ, ಡಿಸೆಂಬರ್ ಮೊದಲ ವಾರದಲ್ಲಿ ಆಕ್ಸ್​ಫರ್ಡ್ ವಿವಿ ಲಸಿಕೆ ಪ್ರಯೋಗದಲ್ಲಿ ತೊಡಗಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ 3ನೇ ಹಂತದ ಪ್ರಯೋಗದ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಇಷ್ಟೆಲ್ಲದರ ಮಧ್ಯೆ ಲಸಿಕೆಗೆ ಎಷ್ಟು ವೆಚ್ಚವಾಗಬಹುದು ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.

ತೀವ್ರ ಕುತೂಹಲ ಕೆರಳಿಸಿದೆ ಸರ್ಕಾರದ ನಡೆ! ಈಗ ದೇಶದಲ್ಲಿ ಮೂರು ಪ್ರಮುಖ ಕಂಪನಿಗಳು 2 ಹಾಗೂ ಮೂರನೇ ಹಂತದಲ್ಲಿ ಲಸಿಕೆಯ ಪ್ರಯೋಗದಲ್ಲಿ ತೊಡಗಿವೆ. ಹೆಚ್ಚು ಕಂಪನಿಗಳು ಲಸಿಕೆಯ ಸಂಶೋಧನೆಯಲ್ಲಿ ಯಶಸ್ಸು ಪಡೆದರೇ, ಆಗ ಔಷಧಿ ಕಂಪನಿಗಳ ನಡುವೆ ಲಸಿಕೆಯ ದರ ಸಮರ ನಡೆಯುತ್ತೆ. ಪರಿಣಾಮವಾಗಿ ಕಡಿಮೆ ಬೆಲೆಗೆ ಲಸಿಕೆ ಸಿಗಬಹುದು. 1 ಡೋಸ್ ಲಸಿಕೆಗೆ ಕನಿಷ್ಠ 75 ರೂಪಾಯಿ ಆಗಬಹುದು ಎಂದು ಕೇಂದ್ರದ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ರೆಮ್ಡಿಸಿವರ್ ಲಸಿಕೆ ಹೆಚ್ಚು ಹೆಚ್ಚು ಕಂಪನಿಗಳು ಉತ್ಪಾದಿಸಿದ ಮೇಲೆ ಅದರ ಬೆಲೆ ಕುಸಿಯಿತು. ಕೊರೊನಾ ಲಸಿಕೆಯು ಕೂಡ ಅದೇ ರೀತಿ ಹೆಚ್ಚು ಹೆಚ್ಚು ಔಷಧಿ ಕಂಪನಿಗಳು ಉತ್ಪಾದಿಸಿದರೇ, ಬೆಲೆ ಸಹಜವಾಗಿ ಕುಸಿಯುತ್ತೆ. ಅಂಥ ಸ್ಥಿತಿಯಲ್ಲಿ 1 ಡೋಸ್‌ 1 ಡಾಲರ್‌ಗೆ ಕುಸಿಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಇನ್ನು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲಾ ಒಂದೆರೆಡು ತಿಂಗಳ ಹಿಂದೆ, ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಖರೀದಿ, ಪೂರೈಕೆಗೆ ಕೇಂದ್ರಸರ್ಕಾರಕ್ಕೆ 80 ಸಾವಿರ ಕೋಟಿ ಹಣ ಬೇಕು ಎಂದಿದ್ದರು. ಅಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಹಣ ಕೇಂದ್ರದ ಬಳಿ ಇದೆ, ಇದು ನಮ್ಮ ಮುಂದಿನ ಸವಾಲಾಗಿದ್ದು, ನಿಭಾಯಿಸಬೇಕಾಗಿದೆ ಎಂದು ಕೂಡ ಹೇಳಿದ್ದರು. ಇಷ್ಟೆಲ್ಲದರ ಮಧ್ಯೆ ಅತ್ಯಂತ ಕಡಿಮೆ ಬೆಲೆಗೆ ಡೆಡ್ಲಿ ಕೊರೊನಾಗೆ ಲಸಿಕೆ ಸಿಗುವ ಭರವಸೆ ಸಿಕ್ಕಿದೆ. 2021ರ ಜುಲೈ ವೇಳೆಗೆ ದೇಶದಲ್ಲಿ 25 ಕೋಟಿ ಜನರಿಗೆ ‘ಕೊರೊನಾ’ ಲಸಿಕೆ ನೀಡುವ ಭರವಸೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾಕ್ಟರ್ ಹರ್ಷವರ್ದನ್ ಹೇಳಿದ್ದಾರೆ. ಆದರೆ ಈ ಎಲ್ಲಾ ಪ್ಲ್ಯಾನ್​ಗಳು ಅದೆಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೊದನ್ನ ಕಾದು ನೋಡಬೇಕಿದೆ.