ಕಾರಿನಲ್ಲಿದ್ದ ಸ್ಯಾನಿಟೈಸರ್ಗೆ ಬೆಂಕಿ: ಜೀವಂತ ಭಸ್ಮಗೊಂಡ NCP ಮುಖಂಡ
ಮುಂಬೈ: ದ್ರಾಕ್ಷಿ ತೋಟಕ್ಕೆ ಕೀಟನಾಶಕ ಕೊಳ್ಳಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಾಹನದಲ್ಲಿದ್ದ ಸ್ಯಾನಿಟೈಸರ್ ಬಾಟಲ್ಗೆ ಬೆಂಕಿ ತಾಗಿ NCP ಪಕ್ಷದ ಮುಖಂಡನೊಬ್ಬ ವಾಹನದಲ್ಲೇ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ಪಿಂಪಲ್ಗಾವ್ ಬಳಿ ನಡೆದಿದೆ. NCP ಮುಖಂಡ ಸಂಜಯ್ ಶಿಂಧೆ ಕಳೆದ ಮಂಗಳವಾರ ನಾಸಿಕ್ನಲ್ಲಿರುವ ತಮ್ಮ ದ್ರಾಕ್ಷಿ ತೋಟಕ್ಕೆ ಕೀಟನಾಶಕ ಕೊಳ್ಳಲು ಪಿಂಪಲ್ಗಾವ್ಗೆ ಕಾರ್ನಲ್ಲಿ ತೆರಳುತ್ತಿದ್ದರು. ವಾಹನ ಕಡ್ವಾ ನದಿ ಬಳಿ ಸಮೀಪಿಸುತ್ತಿರುವಾಗಲೇ ತಾಂತ್ರಕ ದೋಷ ಉಂಟಾಗಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಕಾರ್ನಲ್ಲಿದ್ದ ಹ್ಯಾಂಡ್ ಸ್ಯಾನಿಟೈಸರ್ […]
ಮುಂಬೈ: ದ್ರಾಕ್ಷಿ ತೋಟಕ್ಕೆ ಕೀಟನಾಶಕ ಕೊಳ್ಳಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಾಹನದಲ್ಲಿದ್ದ ಸ್ಯಾನಿಟೈಸರ್ ಬಾಟಲ್ಗೆ ಬೆಂಕಿ ತಾಗಿ NCP ಪಕ್ಷದ ಮುಖಂಡನೊಬ್ಬ ವಾಹನದಲ್ಲೇ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ಪಿಂಪಲ್ಗಾವ್ ಬಳಿ ನಡೆದಿದೆ.
NCP ಮುಖಂಡ ಸಂಜಯ್ ಶಿಂಧೆ ಕಳೆದ ಮಂಗಳವಾರ ನಾಸಿಕ್ನಲ್ಲಿರುವ ತಮ್ಮ ದ್ರಾಕ್ಷಿ ತೋಟಕ್ಕೆ ಕೀಟನಾಶಕ ಕೊಳ್ಳಲು ಪಿಂಪಲ್ಗಾವ್ಗೆ ಕಾರ್ನಲ್ಲಿ ತೆರಳುತ್ತಿದ್ದರು. ವಾಹನ ಕಡ್ವಾ ನದಿ ಬಳಿ ಸಮೀಪಿಸುತ್ತಿರುವಾಗಲೇ ತಾಂತ್ರಕ ದೋಷ ಉಂಟಾಗಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಕಾರ್ನಲ್ಲಿದ್ದ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್ ಸಹ ಬೆಂಕಿ ಹೊತ್ತಿಕೊಂಡು ಇಡೀ ಕಾರ್ ಸಂಪೂರ್ಣವಾಗಿ ಭಸ್ಮವಾಗಿದೆ.
ಕೂಡಲೇ ಸಂಜಯ್ ಶಿಂಧೆ ಕಾರ್ನ ಬಾಗಿಲು ತೆರೆದು ಹೊರಬರಲು ಸಾಕಷ್ಟು ಪ್ರಯತ್ನಪಟ್ಟರೂ ಬೆಂಕಿಯಿಂದ ಗಾಡಿಯ ಸೆಂಟ್ರಲ್ ಲಾಕಿಂಗ್ ಸಿಸ್ಟಂ ಬಂದ್ ಆಗಿಹೋದ ಕಾರಣ ಒಳಗೇ ಸಿಲುಕಿಕೊಂಡರು. ಕಾರಿನ ಗಾಜನ್ನು ಒಡೆದು ಹೊರಬರಲು ಯತ್ನಿಸುವಷ್ಟರಲ್ಲೇ ಸಜೀವ ದಹನವಾಗಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಗ್ರಾಮಸ್ಥರು ಶಿಂಧೆ ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನಪಟ್ಟರೂ ಸಫಲರಾಗಲಿಲ್ಲ ಎಂದು ತಿಳಿದುಬಂದಿದೆ.
Published On - 1:58 pm, Thu, 15 October 20