AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿದ ರೈತರ ಆಕ್ರೋಷ

ಹೊಸ ಕೃಷಿ ಕಾನೂನುಗಳನ್ನು ರಾಷ್ಟ್ರಾದ್ಯಂತ ವಿರೋಧಿಸುತ್ತಿರುವ ರೈತರು ಕೇಂದ್ರ ಸರ್ಕಾರ ಸರ್ಕಾರ ಇಂದು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿ ನವದೆಹಲಿಯ ಕೃಷಿ ಭವನದೆದುರು ಪ್ರತಿಭಟನೆ ನಡೆಸಿದರಲ್ಲದೆ, ಕೃಷಿ ಕಾನೂನಿನ ಪ್ರತಿಗಳನ್ನು ಹರಿದು ಹಾಕಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು. ಸುಮಾರು 31 ಕೃಷಿ ಸಂಘಟನೆಗಳನ್ನು ಇಂದು ಮಾತುಕತೆಗೆ ಆಹ್ವಾನಿಸಲಾಗಿತ್ತು. ಒಬ್ಬ ಕೇಂದ್ರ ಸಚಿವನೂ ಸರ್ಕಾರದ ಪರವಾಗಿ ಸಭೆಯಲ್ಲಿ ಭಾಗವಹಿಸಲು ಆಗಮಿಸದೆ ಹೋಗಿದ್ದು ರೈತರ ಕೋಪಕ್ಕೆ ಕಾರಣವಾಗಿತ್ತು. ಮುಷ್ಕರ ನಡೆಸುವಾಗ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಷಯಕ್ಕೆ ಸಂಬಂಧಿಸಿದಂತೆ, ಇಂದಿನ […]

ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿದ ರೈತರ ಆಕ್ರೋಷ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 14, 2020 | 7:39 PM

ಹೊಸ ಕೃಷಿ ಕಾನೂನುಗಳನ್ನು ರಾಷ್ಟ್ರಾದ್ಯಂತ ವಿರೋಧಿಸುತ್ತಿರುವ ರೈತರು ಕೇಂದ್ರ ಸರ್ಕಾರ ಸರ್ಕಾರ ಇಂದು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿ ನವದೆಹಲಿಯ ಕೃಷಿ ಭವನದೆದುರು ಪ್ರತಿಭಟನೆ ನಡೆಸಿದರಲ್ಲದೆ, ಕೃಷಿ ಕಾನೂನಿನ ಪ್ರತಿಗಳನ್ನು ಹರಿದು ಹಾಕಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು. ಸುಮಾರು 31 ಕೃಷಿ ಸಂಘಟನೆಗಳನ್ನು ಇಂದು ಮಾತುಕತೆಗೆ ಆಹ್ವಾನಿಸಲಾಗಿತ್ತು.

ಒಬ್ಬ ಕೇಂದ್ರ ಸಚಿವನೂ ಸರ್ಕಾರದ ಪರವಾಗಿ ಸಭೆಯಲ್ಲಿ ಭಾಗವಹಿಸಲು ಆಗಮಿಸದೆ ಹೋಗಿದ್ದು ರೈತರ ಕೋಪಕ್ಕೆ ಕಾರಣವಾಗಿತ್ತು. ಮುಷ್ಕರ ನಡೆಸುವಾಗ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಷಯಕ್ಕೆ ಸಂಬಂಧಿಸಿದಂತೆ, ಇಂದಿನ ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸರಾಂಗ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈಗಾಗಲೆ ಕೃಷಿ ಸಂಘಟನೆಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆಂದು ಹೇಳಿದರು.

‘‘ರೈತರು ಇನ್ನಷ್ಟು ಚರ್ಚೆ ನಡೆಸುವ ಇರಾದೆ ಇಟ್ಟುಕೊಂಡಿದ್ದರೆ, ಸರ್ಕಾರ ಮಾತುಕತೆಗೆ ಮುಕ್ತವಾಗಿದೆ. ಆದರೆ ತೋಮರ್​ಜೀ ಆವರು ಬೇರೆ ಕೆಲಸದಲ್ಲಿ ವ್ಯಸ್ತರಾಗಿದ್ದರಿಂದ ಇವತ್ತಿನ ಸಭೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅವರಿಗೆ ಬಿಡುವು ಸಿಕ್ಕ ಕೂಡಲೇ ಎಲ್ಲ ರೈತ ಸಂಘಟನೆಗಳನ್ನು ಭೇಟಿ ಮಾಡಲಿದ್ದಾರೆ,’’ ಎಂದು ಜಾವಡೇಕರ್ ಹೇಳಿದರು.

ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್