ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ, ಸೋಂಕಿತರು ಬೇರೆಡೆ ಶಿಫ್ಟ್

|

Updated on: Aug 26, 2020 | 8:34 AM

ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರಂ‌ ಜಿಲ್ಲೆಯ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಕೋವಿಡ್ ವಾರ್ಡ್​ನ ರಿಕಾರ್ಡ್​ ರೂಮನಲ್ಲಿ ಶಾರ್ಟ ಸರ್ಕ್ಯೂಟ್ ಕಾರಣದಿಂದಾಗಿ ಬೆಂಕಿ ಕಾಣಿಸಿಕೊಂಡಿದದೆ. ಧಿಡೀರ್‌ ಕಾಣಿಸಿಕೊಂಡ ಬೆಂಕಿಗೆ ಕೋವಿಡ್ ರೋಗಿಗಳು ಗಾಬರಿಯಾದ್ರು. ಕೂಡಲೇ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. 24ಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಯಲ್ಲಿದ್ದಾಗ ಘಟನೆ ಸಂಭವಿಸಿದ್ದು, ಕೂಡಲೇ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ‌ ಜಿಲ್ಲಾಧಿಕಾರಿ, ಎಸ್.ಪಿ […]

ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ, ಸೋಂಕಿತರು ಬೇರೆಡೆ ಶಿಫ್ಟ್
Follow us on

ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರಂ‌ ಜಿಲ್ಲೆಯ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ.

ಕೋವಿಡ್ ವಾರ್ಡ್​ನ ರಿಕಾರ್ಡ್​ ರೂಮನಲ್ಲಿ ಶಾರ್ಟ ಸರ್ಕ್ಯೂಟ್ ಕಾರಣದಿಂದಾಗಿ ಬೆಂಕಿ ಕಾಣಿಸಿಕೊಂಡಿದದೆ. ಧಿಡೀರ್‌ ಕಾಣಿಸಿಕೊಂಡ ಬೆಂಕಿಗೆ ಕೋವಿಡ್ ರೋಗಿಗಳು ಗಾಬರಿಯಾದ್ರು. ಕೂಡಲೇ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

24ಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಯಲ್ಲಿದ್ದಾಗ ಘಟನೆ ಸಂಭವಿಸಿದ್ದು, ಕೂಡಲೇ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ‌ ಜಿಲ್ಲಾಧಿಕಾರಿ, ಎಸ್.ಪಿ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.