AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ಮೃತಪಟ್ರೆ.. ಪರಿಹಾರಕ್ಕೆ ಮೊದಲ ಹೆಂಡತಿ ಮಾತ್ರ ಅರ್ಹಳು! ಆದ್ರೆ ಮಕ್ಕಳು?

ಮುಂಬೈ: ಕಾನೂನಿನ ಪ್ರಕಾರ, ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರು ಇದ್ದರೆ, ಮತ್ತು ಇಬ್ಬರೂ ಪತ್ನಿಯರು ಪತಿಯ ಹಣ, ಆಸ್ತಿಪಾಸ್ತಿ ಮೇಲೆ ಹಕ್ಕು ಸಾಧಿಸುವಂತಾದರೆ, ಮೊದಲ ಹೆಂಡತಿಗೆ ಮಾತ್ರ ಅದಕ್ಕೆ ಅರ್ಹತೆ ಇರುತ್ತದೆ. ಆದರೆ ಎರಡೂ ಮದುವೆಗಳಿಂದ ಅವರ ಮಕ್ಕಳು ಪರಿಹಾರ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ. ಮೇ 30 ರಂದು COVID-19 ನಿಂದ ನಿಧನರಾದ ಮಹಾರಾಷ್ಟ್ರ ರೈಲ್ವೆ ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುರೇಶ್ ಹತಂಕರ್ ಅವರ ಎರಡನೇ ಪತ್ನಿ […]

ಪತಿ ಮೃತಪಟ್ರೆ.. ಪರಿಹಾರಕ್ಕೆ ಮೊದಲ ಹೆಂಡತಿ ಮಾತ್ರ ಅರ್ಹಳು! ಆದ್ರೆ ಮಕ್ಕಳು?
ಸಾಧು ಶ್ರೀನಾಥ್​
|

Updated on: Aug 26, 2020 | 11:57 AM

Share

ಮುಂಬೈ: ಕಾನೂನಿನ ಪ್ರಕಾರ, ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರು ಇದ್ದರೆ, ಮತ್ತು ಇಬ್ಬರೂ ಪತ್ನಿಯರು ಪತಿಯ ಹಣ, ಆಸ್ತಿಪಾಸ್ತಿ ಮೇಲೆ ಹಕ್ಕು ಸಾಧಿಸುವಂತಾದರೆ, ಮೊದಲ ಹೆಂಡತಿಗೆ ಮಾತ್ರ ಅದಕ್ಕೆ ಅರ್ಹತೆ ಇರುತ್ತದೆ. ಆದರೆ ಎರಡೂ ಮದುವೆಗಳಿಂದ ಅವರ ಮಕ್ಕಳು ಪರಿಹಾರ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.

ಮೇ 30 ರಂದು COVID-19 ನಿಂದ ನಿಧನರಾದ ಮಹಾರಾಷ್ಟ್ರ ರೈಲ್ವೆ ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುರೇಶ್ ಹತಂಕರ್ ಅವರ ಎರಡನೇ ಪತ್ನಿ ಆಸ್ತಿ ಹಂಚಿಕೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕಥವಾಲ್ಲಾ ನೇತೃತ್ವದ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿತು.

ಕರ್ತವ್ಯದಲ್ಲಿದ್ದಾಗ COVID-19 ನಿಂದ ಸಾವನ್ನಪ್ಪುವ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರವು 65 ಲಕ್ಷ ರೂ.ಗಳ ಪರಿಹಾರ ನೀಡುವ ಭರವಸೆ ನೀಡುತ್ತಿದ್ದಂತೆ, ಇಬ್ಬರು ಮಹಿಳೆಯರು ಹತಂಕರ್ ಅವರ ಪತ್ನಿಯರೆಂದು ಹೇಳಿಕೊಳ್ಳುತ್ತಾ, ಪರಿಹಾರ ಮೊತ್ತಕ್ಕೆ ನ್ಯಾಯಲಯದ ಮೊರೆ ಹೋಗಿದ್ದರು.

ದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಎರಡನೇ ಹೆಂಡತಿಗೆ ಏನೂ ಸಿಗದಿರಬಹುದು ಎಂದು ಕಾನೂನು ಹೇಳುತ್ತದೆ. ಆದರೆ ಎರಡನೇ ಹೆಂಡತಿಯ ಮಗಳು ಮತ್ತು ಮದುವೆಯಾದ ಮೊದಲ ಹೆಂಡತಿ ಮತ್ತು ಆಕೆಯ ಮಗಳು ಹಣಕ್ಕೆ ಅರ್ಹರಾಗಿರುತ್ತಾರೆ ಎಂದು ತೀರ್ಪು ನೀಡಿದೆ.