ಸೆ.14ರಿಂದ 18 ದಿನ ನಡೆಯಲಿದೆ ಸಂಸತ್ತಿನ ಅಧಿವೇಶನ
ದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು ನಡೆಯಲಿರೋ ಅಧಿವೇಶನ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನ ನಡೆಸಲು ಬೇಕಾಗಿರೋ ಎಲ್ಲ ಸಿದ್ಧತೆಗಳು ಮುಗಿದಿದ್ದು, ಸಂಸತ್ತಿನ ಎರಡು ಸದನಗಳಲ್ಲಿ ಬೆಳಗ್ಗೆ ಒಂದು ಸದನದ ಕಲಾಪ, ಮಧ್ಯಾಹ್ನ ಒಂದು ಸದನದ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ದೇಶದಲ್ಲಿ ಕೊರೊನಾ ಮಹಾಮಾರಿ ಕಾಲಿಟ್ಟಿದ್ದ ದಿನಗಳಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ ನಡೀತಿತ್ತು. ಯಾವಾಗ ಡೆಡ್ಲಿ ವೈರಸ್ ದೇಶಕ್ಕೆ ಎಂಟ್ರಿ ಕೊಟ್ಟಿದೆ ಅಂತಾ ಗೊತ್ತಾಯ್ತೋ ಬಜೆಟ್ ಅಧಿವೇಶನವನ್ನ ಮೊಟಕುಗೊಳಿಸಿ, ಅನಿರ್ದಿಷ್ಟಾವಧಿಗೆ […]
ದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು ನಡೆಯಲಿರೋ ಅಧಿವೇಶನ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನ ನಡೆಸಲು ಬೇಕಾಗಿರೋ ಎಲ್ಲ ಸಿದ್ಧತೆಗಳು ಮುಗಿದಿದ್ದು, ಸಂಸತ್ತಿನ ಎರಡು ಸದನಗಳಲ್ಲಿ ಬೆಳಗ್ಗೆ ಒಂದು ಸದನದ ಕಲಾಪ, ಮಧ್ಯಾಹ್ನ ಒಂದು ಸದನದ ಕಲಾಪ ನಡೆಸಲು ತೀರ್ಮಾನಿಸಲಾಗಿದೆ.
ದೇಶದಲ್ಲಿ ಕೊರೊನಾ ಮಹಾಮಾರಿ ಕಾಲಿಟ್ಟಿದ್ದ ದಿನಗಳಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ ನಡೀತಿತ್ತು. ಯಾವಾಗ ಡೆಡ್ಲಿ ವೈರಸ್ ದೇಶಕ್ಕೆ ಎಂಟ್ರಿ ಕೊಟ್ಟಿದೆ ಅಂತಾ ಗೊತ್ತಾಯ್ತೋ ಬಜೆಟ್ ಅಧಿವೇಶನವನ್ನ ಮೊಟಕುಗೊಳಿಸಿ, ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದ್ರೆ, ಸಂಸತ್ತಿನ ಎರಡು ಅಧಿವೇಶನಗಳ ನಡುವೆ 6 ತಿಂಗಳಿಗಿಂತಾ ಹೆಚ್ಚಿನ ಸಮಯ ಇರುವಂತಿಲ್ಲ. ಹೀಗಾಗಿ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ಸಂಸತ್ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ.
ಕೊರೊನಾ ವೈರಸ್ ಹರಡದಂತೆ ತೆಗೆದುಕೊಂಡಿದ್ದಾರೆ ಕ್ರಮ! ಸೆಪ್ಟೆಂಬರ್ 14ರಿಂದ ಆರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮುಖ್ಯವಾಗಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದ್ದಾರೆ.
ಹೇಗೆ ನಡೆಯುತ್ತೆ ಅಧಿವೇಶನ? ಸಾಮಾನ್ಯವಾಗಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಏಕಕಾಲಕ್ಕೆ ನಡೆಯುತ್ತವೆ. ಆದ್ರೆ, ಈ ಬಾರಿ ಬೆಳಗ್ಗೆ ಒಂದು ಸದನದ ಕಲಾಪ, ಮಧ್ಯಾಹ್ನ ಮತ್ತೊಂದು ಸದನದ ಕಲಾಪ ನಡೆಯಲಿದೆ. ಹೀಗಾಗಿ, ಪ್ರತಿದಿನ ತಲಾ 4 ಗಂಟೆ ಲೋಕಸಭೆ, ರಾಜ್ಯಸಭೆ ಕಲಾಪಗಳು ನಡೆಯಲಿವೆ. ರಾಜ್ಯಸಭೆ ಚೇಂಬರ್ನಲ್ಲಿ ರಾಜ್ಯಸಭೆಯ 60, ಗ್ಯಾಲರಿಯಲ್ಲಿ 51 ಸದಸ್ಯರಿಗೆ ಕೂರಲು ವ್ಯವಸ್ಥೆ ಮಾಡಲಾಗಿದ್ದು, ಉಳಿದ 132 ರಾಜ್ಯಸಭೆ ಸದಸ್ಯರಿಗೆ ಲೋಕಸಭೆಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ನೆರವಿಗೆ ಬೃಹತ್ ಪರದೆಗಳನ್ನ ಏರ್ಪಾಡು ಮಾಡಲಾಗುತ್ತದೆ. ಆದ್ರೆ, ಈ ಬಾರಿ ಎಂದಿನಂತೆ ವಾರಾಂತ್ಯದ ದಿನಗಳಲ್ಲಿ ಸಂಸತ್ ಸದಸ್ಯರಿಗೆ ರಜೆ ಇರಲ್ಲ. ಅಂದು ಸಹ ಕಲಾಪ ನಡೆಯಲಿದೆ. ಇನ್ನು ಕೊರೊನಾ ವೈರಸ್ ಹರಡದಂತೆ ತಡೆಯಲು, ಹವಾನಿಯಂತ್ರಕಗಳಿಗೆ ಸೂಕ್ಷ್ಮಾಣು ಜೀವಿ ಕೊಲ್ಲುವ ಅತಿನೇರಳೆ ಕಿರಣ ವ್ಯವಸ್ಥೆಯನ್ನ ಅಳವಡಿಸಲಿದ್ದಾರೆ. ದೈಹಿಕ ಅಂತರ ಕಾಯ್ದುಕೊಂಡು ಆಸನ ವ್ಯವಸ್ಥೆ ಮಾಡಿದ್ರೂ, ಡೆಡ್ಲಿ ವೈರಸ್ ಹರಡದಂತೆ ತಡೆಯಲು ಪಾಲಿಕಾರ್ಬನೇಟ್ ಪ್ರತ್ಯೇಕಗಳನ್ನ ಬಳಸಲಿದ್ದಾರೆ. ರಾಜ್ಯಸಭೆ ಚೇಂಬರ್ನಲ್ಲಿ ಪ್ರಧಾನಿ, ಸಚಿವರು, ವಿಪಕ್ಷ ನಾಯಕರು, ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್, ದೇವೇಗೌಡಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ ಅಂತಾ ರಾಜ್ಯಸಭೆ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಕೊರೊನಾ ಮಹಾಮಾರಿ ದೇಶದಲ್ಲಿ ಅಬ್ಬರಿಸುತ್ತಿರೋ ನಡುವೆ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಈ ಅಧಿವೇಶನದಲ್ಲಿ ದೇಶ ಎದುರಿಸ್ತಿರೋ ಸಂಕಷ್ಟಗಳ ಸರಮಾಲೆಯ ಕುರಿತು ಚರ್ಚೆ ಆದ್ರೆ, ಇದ್ರಿಂದ ದೇಶದ ಜನರಿಗೆ ಅನುಕೂಲವಾಗಲಿದೆ. ಅದನ್ನ ಬಿಟ್ಟು, ಹಿಂದಿನ ಅಧಿವೇಶನಗಳಂತೆ ಆರೋಪ-ಪ್ರತ್ಯರೋಪಕ್ಕೆ ಕಲಾಪ ಸೀಮಿತವಾದ್ರೆ, ಜನಪ್ರತಿನಿಧಿಗಳು ಜನರೆದುರು ನಗೆಪಾಟಲಿಗೆ ಒಳಗಾಗೋದಂತೂ ಅಕ್ಷರಶಃ ಸತ್ಯ.