ಕಾಸರಗೋಡು: ಕೇರಳದ ಕಾಸರಗೋಡಿನ ವೈದ್ಯನ ಸಾವಿನ ಹಿಂದೆ ಲ್ಯಾಂಡ್ ಜಿಹಾದ್, ಬ್ಲ್ಯಾಕ್ ಮೇಲ್ ಸದ್ದು ಕೇಳಿ ಬರುತ್ತಿದೆ. ಹೀಗಾಗಿ ಮುಸ್ಲಿಂ ಲ್ಯಾಂಡ್ ಜಿಹಾದ್ಗೆ ಗಡಿನಾಡ ದಂತ ವೈದ್ಯ ಬಲಿಯಾದ್ರಾ ಎಂಬ ಪ್ರಶ್ನೆ ಎಂದ್ದಿದೆ. ಪ್ರಖ್ಯಾತ ದಂತ ವೈದ್ಯನ ಸಾವಿನ ಬಗ್ಗೆ ವಿಹೆಚ್ಪಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕೇಸ್ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿದ್ದ ಡಾ.ಕೃಷ್ಣಮೂರ್ತಿ ಅವರು ನವೆಂಬರ್ 8 ರಂದು ನಾಪತ್ತೆಯಾಗಿದ್ದರು. ಬಳಿಕ ನ.10ರಂದು ಉಡುಪಿ ಜಿಲ್ಲೆ ಕುಂದಾಪುರದ ಹಟ್ಟಿಯಂಗಡಿ ಬಳಿಯ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ರು. ಕಳೆದ ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಡಾ.ಕೃಷ್ಣಮೂರ್ತಿ ಅವರು ಲ್ಯಾಂಡ್ ಮಾಫಿಯಾದಲ್ಲಿ ಸಿಲುಕಿಕೊಂಡಿದ್ದರು. ಜಾಗ ಖರೀದಿ ವಿಚಾರದಲ್ಲಿ ಡಾ.ಕೃಷ್ಣಮೂರ್ತಿಗೆ ಸ್ಥಳೀಯ ಕೆಲ ಮುಸ್ಲಿಮರು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಡಾ.ಕೃಷ್ಣಮೂರ್ತಿ, ನ.8ರಂದು ಬದಿಯಡ್ಕದ ಕ್ಲಿನಿಕ್ ಗೆ ಬಂದಿದ್ದರು. ಈ ವೇಳೆ ಕ್ಲಿನಿಕ್ ಗೆ ಬಂದಿದ್ದ ಮುಸ್ಲಿಂ ಯುವತಿ ಜೊತೆ ಅನುಚಿತ ವರ್ತನೆ ಮಾಡಿರುವ ಆರೋಪ ಕೇಳಿ ಬಂದಿದ್ದು ತಂಡವೊಂದು ಕೃಷ್ಣಮೂರ್ತಿಗೆ ಬೆದರಿಕೆ ಒಡ್ಡಿ ಹಲ್ಲೆಗೆ ಮುಂದಾಗಿದೆ. ಆ ಘಟನೆ ಬಳಿಕ ಡಾ.ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಸದ್ಯ ಈಗ ಮುಸ್ಲಿಂ ಯುವತಿ ಮೂಲಕ ವೈದ್ಯರನ್ನ ಬ್ಲಾಕ್ ಮೇಲ್ ಮಾಡಿದ್ರಾ? ಬ್ಲ್ಯಾಕ್ ಮೇಲ್ ಗೆ ಬೆದರಿ ಡಾ.ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡರಾ? ಎಂಬ ಮಾತು ಕೇಳಿ ಬಂದಿದೆ. ಯುವತಿ ಮುಂದಿಟ್ಟು ಲಕ್ಷ ಲಕ್ಷ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಲ್ಯಾಂಡ್ ಜಿಹಾದ್ ಗೆ ಬಗ್ಗದ ದಂತ ವೈದ್ಯನಿಗೆ ಯುವತಿ ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಮುಸ್ಲಿಂ ಲೀಗ್ ಮುಖಂಡ ಸೇರಿ ಐವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತ್ ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ನಿವಾಸಿ ಉಮರುಲ್ ಫಾರೂಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.