ಜೈಪುರ್: ಖಾಲಿ ಹೊಟ್ಟೆ, ಒಣಗಿದ ಗಂಟಲು, ಒಂಟಿಯಾದ ಮರುಭೂಮಿ, ಮಹಿಳೆ ಮತ್ತು ಮಗು 32 ಗಂಟೆಗಳ ನಡಿಗೆ. ಬೇಸಿಗೆಯ ಹೊತ್ತಲ್ಲಿ 9 ಕಿ.ಮೀ, ದೂರ ಚಲಿಸುತ್ತಿದ್ದಾಗ ಅರ್ಧದಾರಿಯಲ್ಲೇ ಐದು ವರ್ಷದ ಮಗು ಸತ್ತುಹೋಯಿತು. ಇದಕ್ಕೆ ಕಾರಣ ಬಾಯಾರಿಕೆ. ರಾಜಸ್ಥಾನದಲ್ಲಿ ಕುಡಿಯಲು ನೀರಿಲ್ಲದೆ 5 ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ.
“ತೀವ್ರ ನಿರ್ಜಲೀಕರಣ” ದಿಂದ ಅಂಜಲಿ ನಿಧನಳಾಗಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಿದೆ. ಅಂಜಲಿಯ ಅಜ್ಜಿ, 60 ವರ್ಷದ ಸುಖಿ ದೇವಿ ಸುಮಾರು ಒಂದು ವಾರ ವಿವಿಧ ಆಸ್ಪತ್ರೆಗಳಲ್ಲಿ ಕಳೆದರು. ನಾವು ಈ ದಾರಿಯಾಗಿಯೇ ಸಾಗಿಬರುತ್ತಿರುತ್ತೇವೆ. ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಈ ಬಾರಿ ಅಂಜಲಿ ತನ್ನ ನೀರಿನ ಬಾಟಲಿಯನ್ನು ಮರೆತಿದ್ದಳು.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಂಜಲಿ ಸಾವಿನ ಕಾರಣ ಬೇರೆಯೇ ಆಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪ್ರಶ್ನಿಸಿದ ಶೇಖಾವತ್ , “ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಪ್ ಸಂಪರ್ಕವನ್ನು ನೀಡುವ ವಿಷಯದಲ್ಲಿ ರಾಜಸ್ಥಾನವು 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 29 ನೇ ಸ್ಥಾನದಲ್ಲಿದೆ” ಎಂದಿದ್ದಾರೆ.
ಸಿರೋಹಿ-ಜಲೋರ್ ಪ್ರದೇಶದಲ್ಲಿ ನೀರಿನ ಕೊರತೆಯಿಲ್ಲ ಎಂದು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ (ಪಿಎಚ್‌ಇಡಿ) ಮುಖ್ಯ ಎಂಜಿನಿಯರ್ (ಪ್ರಾಜೆಕ್ಟ್) ನೀರಜ್ ಮಾಥುರ್ ಹೇಳುತ್ತಾರೆ. ಅಂಜಲಿ ಸಾವಿಗೀಡಾಗಿದ್ದು ಅವರ ಮನೆಯಿಂದ 1.5 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಅಂತಾರೆ ಮಾಥುರ್.
ಪಕ್ಕದ ಜಲೋರ್‌ನ ಧುಲಿಯಾದಲ್ಲಿ ವಾಸಿಸುತ್ತಿರುವ ಸುಖಿಯ ಕಿರಿಯ ಮಗಳು ಪೂಜಾಳನ್ನು ಭೇಟಿಯಾಗಲು ಸುಖಿ ಮತ್ತು ಅಂಜಲಿ ಜೂನ್ 5 ರ ಬೆಳಿಗ್ಗೆ ಕಾಲ್ನಡಿಗೆಯಲ್ಲಿ ಸಿರೋಹಿಯ ರಾಯ್‌ಪುರದ ಮನೆಯಿಂದ ಹೊರಟಿದ್ದರು. ರಸ್ತೆ ಮೂಲಕ, ಇದು 19 ಕಿ.ಮೀ ದೂರದಲ್ಲಿದೆ. ಆದರೆ ಸುಖಿ ಅಂಜಲಿಯನ್ನು 9 ಕಿ.ಮೀ ದೂರವಿರುವ ನೇರ ಮಾರ್ಗದಲ್ಲಿ ಕರೆದೊಯ್ದಿದ್ದಳು.
ಜೂನ್ 6 ರಂದು ಸಂಜೆ 4 ಗಂಟೆಗೆ ಕುರುಬ ನಾಗ್ಜಿ ರಾಮ್ ಜಲೋರ್‌ನ ರೋಡಾ ಗ್ರಾಮದ ಬಳಿ ಇಬ್ಬರು ಕುಸಿದು ಬಿದ್ದಿದ್ದನ್ನು ಕಂಡರು. ಅಷ್ಟೊತ್ತಿಗೆ ಅಂಜಲಿ ಮೃತಪಟ್ಟಿದ್ದಳು.
ನಾಗ್ಜಿ ರಾಮ್ ತಮ್ಮ ಮಗ ರಾಯ್ ಚಂದ್ ಭಿಲ್ ಅವರಿಗೆ ಹೇಳಿದಗ ರು ಸೂರಜ್ವಾಡ್ನ ಸರ್ಪಂಚ್ ಕ್ರಿಶನ್ ರಾಜ್ಪುರೋಹಿತ್ ಅವರನ್ನು ಕರೆದರು. ಅದೇ ಮಾರ್ಗವಾಗಿ ನಾವು ಎಂದಿನಂತೆ ನಡೆದೆವು. ಮರುದಿನ ಕುಸಿಯುವ ಮೊದಲು ರಾತ್ರಿ ಬೆಟ್ಟದ ಮೇಲೆ ಕಳೆದಿದ್ದೆವು.ಅಂದು ತುಂಬಾ ಬಿಸಿಲಿತ್ತು, ಸೂರ್ಯ ಪ್ರಖರವಾಗಿ ಉರಿಯುತ್ತಿದ್ದ” ಎಂದು ಅವರು ಹೇಳುತ್ತಾರೆ. ಆ ದಿನ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇತ್ತು.
ಸುಖಿಗೆ ದೂರವನ್ನು ಕ್ರಮಿಸಲು ತೆಗೆದುಕೊಂಡ ಸಮಯ ಎರಡು ದಿನಗಳು ಮತ್ತು ಒಂದು ರಾತ್ರಿ ಎಂದು ಕುಟುಂಬ ಹೇಳುತ್ತದೆ. “ರೋಜ್ ಕಾ ಆನಾ ಜನ ಥಾ (ನಾವು ಪ್ರತಿದಿನ ಪ್ರಯಾಣಿಸುತ್ತೇವೆ)” ಎಂದು ಸುಖಿಯ ಮಗ ಮಹೇಂದ್ರ ಹೇಳಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ, ಸುಖಿ ತನ್ನ ಹಿರಿಯ ಮಗಳು ರಮಿಲಾಳ ಮಗು ಅಂಜಲಿಯನ್ನು ಜತೆಗಿಟ್ಟು ಸಾಕುತ್ತಿದ್ದಳು.
ಮೊದಲ ದಿನ ಇಬ್ಬರು 4-5 ಕಿ.ಮೀ ನಡೆದು ಹೋಗಿದ್ದಾರೆ ಎಂದು ಕ್ರಿಶನ್ ಅಂದಾಜಿಸಿದ್ದಾರೆ, ಮತ್ತು ಅವರು ರೋಡಾ ಗುಡ್ಡವನ್ನು ತಲುಪಿದಾಗ, ಅಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. “ಯಾರೂ ಅಲ್ಲಿ ವಾಸಿಸುವುದಿಲ್ಲ. ಈ ಪ್ರದೇಶವು ಕೇವಲ ಧೋರೆ (ದಿಬ್ಬಗಳು) ಮತ್ತು ಗುಡ್ಡಗಾಡುಗಳನ್ನು ಹೊಂದಿದೆ. ಒಬ್ಬರು ಎರಡು ದಿನಗಳವರೆಗೆ, ವಿಶೇಷವಾಗಿ ಮಗುವಿಗೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ”
ಅವರು ಸುಖಿಗೆ ಸ್ವಲ್ಪ ನೀರು ನೀಡಿ ಆಮೇವೆ ಸ್ವಸ್ಥ ಮಿತ್ರ (ಆರೋಗ್ಯ ಕಾರ್ಯಕರ್ತೆ)ಯರನ್ನು ಕರೆದರು, ಅವರು ಪ್ರಥಮ ಚಿಕಿತ್ಸೆ ನೀಡಿದರು. ಹೆಚ್ಚಿನ ವಾಹನಗಳು ಇಲ್ಲಿ ಓಡಾಟ ನಡೆಸದೇ ಇರುವ ಕಾರಣ, ಸುಖಿ ಮತ್ತು ಅಂಜಲಿಯನ್ನು ಸ್ಪಲ್ಪ ದೂರ ಕೊಂಡೊಯ್ಯಲಾಯಿತು.ಅಲ್ಲಿಗೆ ಪೊಲೀಸರು ಬಂದರು.
ಇಬ್ಬರನ್ನು ರಾಣಿವಾರ ಸಿಎಚ್‌ಸಿಗೆ ಕರೆದೊಯ್ಯಲಾಯಿತು. ನಂತರ ಸುಖಿಯನ್ನು ಜಲೋರ್ ಜಿಲ್ಲಾ ಆಸ್ಪತ್ರೆಗೆ, ನಂತರ ಜೋಧಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಎಂದು ರಾಣಿವಾರಾದ ಬ್ಲಾಕ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಬಾಬುಲಾಲ್ ಪುರೋಹಿತ್ ಹೇಳುತ್ತಾರೆ.
ಅಂಜಲಿ “ಬಾಯಾರಿಕೆಯಿಂದ ಮೃತಪಟ್ಟಿದ್ದಾಳೆ” ಎಂದು ವೈದ್ಯರು ಹೇಳಿದ್ದಾರೆ ಎಂದು ಮಹೇಂದ್ರ ಹೇಳುತ್ತಾರೆ. ಐದು ವರ್ಷದ ಮಗು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದೆ ಎಂದು ವೈದ್ಯಕೀಯ ವರದಿಗಳು ಸೂಚಿಸಿವೆ ಎಂದು ಜಿಲ್ಲಾಧಿಕಾರಿ ನಮ್ರತಾ ವೃಷ್ಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಸುಖಿ ಈಗ ಚೆನ್ನಾಗಿದ್ದಾಳೆ ಎಂದು ವೃಷ್ಣಿ ಹೇಳಿದರು.
ಅಂಜಲಿಯ ಸಾವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದೆ., ಮುಖ್ಯ ಎಂಜಿನಿಯರ್ ಮಾಥುರ್ ಪ್ರಕಾರ ರೊಡಾದ ಜನರು ಟ್ಯೂಬ್‌ವೆಲ್ ಮತ್ತು ನರ್ಮದಾ ಕಾಲುವೆಯಿಂದ ನೀರನ್ನು ಪಡೆಯುತ್ತಾರೆ. “ದಿನಕ್ಕೆ ಒಬ್ಬ ವ್ಯಕ್ತಿಗೆ 90 ಲೀಟರ್ ನೀರು” ಎಂದು ಬೇಕಾಗುತ್ತದೆ.
ಆದಾಗ್ಯೂ, ಜೂನ್ 18 ರ ಹೊತ್ತಿಗೆ ಪಿಎಚ್‌ಇಡಿ ದತ್ತಾಂಶದ ಪ್ರಕಾರ ಗ್ರಾಮೀಣ ರಾಜಸ್ಥಾನದ 1.01 ಕೋಟಿ ಕುಟುಂಬಗಳಲ್ಲಿ ಕೇವಲ 20 ಲಕ್ಷ ಜನರು ಮಾತ್ರ ಟ್ಯಾಪ್‌ಗಳ ಮೂಲಕ ಕುಡಿಯುವ ನೀರನ್ನು ಪಡೆಯುತ್ತಾರೆ ಎಂದು ತೋರಿಸುತ್ತದೆ. ಜಲೋರ್ ದರಗಳು ಸ್ವಲ್ಪ ಉತ್ತಮವಾಗಿದ್ದು, ಅದರ ಗ್ರಾಮೀಣ ಕುಟುಂಬಗಳಲ್ಲಿ ಶೇ 26.3 ನಷ್ಟಿದೆ.
“ಹೇಳಿ, ಪಿಹೆಚ್ಇಡಿನ ತಪ್ಪು ಏನಿದೆ? ಯಾರಾದರೂ ಕಾಡಿನ ಮೂಲಕ ಹಾದು ಹೋಗುತ್ತಿದ್ದರೆ, ಅವರು ತಮ್ಮ ನೀರನ್ನು ತೆಗೆದುಕೊಳ್ಳಬೇಕು ಎಂದು ರಾಜಸ್ಥಾನದ PHED ಮಂತ್ರಿ ಬಿ. ಡಿ. ಕಲ್ಲಾ ಹೇಳುತ್ತಾರೆ.
ರಾಜಸ್ಥಾನದಂತಹ ಮರುಭೂಮಿ ರಾಜ್ಯಕ್ಕಾಗಿ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರವು ನೀಡಿದ ಸಹಾಯವನ್ನು ಕೇಂದ್ರ ಮತ್ತು ರಾಜ್ಯವು ತಲಾ ಶೇ100 ರಿಂದ ಶೇ 45 ಕ್ಕೆ ಏಕೆ ಕಡಿತಗೊಳಿಸಿದೆ ಎಂದು ಅವರು ಕೇಳುತ್ತಾರೆ. “ಉಳಿದ ಶೇ 10ಅನ್ನು ಗ್ರಾಮಗಳು ಭರಿಸಬೇಕಾಗಿದೆ. ಯಾವ ಗ್ರಾಮವು ಶೇ10 ಹೊರಲು ಸಾಧ್ಯ ಎಂದು ಭಲ್ಲಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಸುಗಳ ಕಳ್ಳ ಸಾಗಾಣಿಕೆ ಶಂಕೆ: ರಾಜಸ್ಥಾನದಲ್ಲಿ ಗುಂಪು ಹಲ್ಲೆಗೆ ವ್ಯಕ್ತಿ ಬಲಿ