ಭಾರೀ ಮಳೆಗೆ ತೆಲಂಗಾಣದ ಭದ್ರಾಚಲಮ್‌ ನಗರದ ತುಂಬೆಲ್ಲಾ ನೀರೇ ನೀರು!

|

Updated on: Aug 16, 2020 | 11:03 PM

ಹೈದರಾಬಾದ್‌: ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ತೆಲಂಗಾಣದ ಭದ್ರಾಚಲಮ್‌ನಲ್ಲಂತೂ ಇಡೀ ನಗರಕ್ಕೆ ನಗರವೇ ನೀರಿನಿಂದಾವೃತವಾಗಿದೆ. ನಗರದ ತುಂಬೆಲ್ಲಾ ಎಲ್ಲಿ ನೋಡಿದರೂ ನೀರೇ ನೀರು ಕಾಣಿಸುತ್ತಿದೆ. ಜನರು ಮನೆಯಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇನು ಪಟ್ಟಣವೋ ಅಥವಾ ನಡುಗಡ್ಡೆಯೋ ಎನ್ನುವಂತಾಗಿದೆ. ಮನೆಗಳಲ್ಲೂ ನೀರು ತುಂಬಿಕೊಂಡಿದ್ದು, ಕೆಲವೆಡೆ ಮನೆಯ ಕಂಪೌಂಡ್‌ ಕೂಡಾ ನೀರಿನಲ್ಲಿ ಮುಳುಗಿವೆ ಎಂದರೇ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದಾಗಿದೆ. ನಗರದ ಪಕ್ಕವೇ ಹಾದು ಹೋಗುವ ಗೋದಾವರಿ ನದಿ ತುಂಬಿ ಹರಿಯುತ್ತಿದ್ದು […]

ಭಾರೀ ಮಳೆಗೆ ತೆಲಂಗಾಣದ ಭದ್ರಾಚಲಮ್‌ ನಗರದ ತುಂಬೆಲ್ಲಾ ನೀರೇ ನೀರು!
Follow us on

ಹೈದರಾಬಾದ್‌: ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ತೆಲಂಗಾಣದ ಭದ್ರಾಚಲಮ್‌ನಲ್ಲಂತೂ ಇಡೀ ನಗರಕ್ಕೆ ನಗರವೇ ನೀರಿನಿಂದಾವೃತವಾಗಿದೆ.

ನಗರದ ತುಂಬೆಲ್ಲಾ ಎಲ್ಲಿ ನೋಡಿದರೂ ನೀರೇ ನೀರು ಕಾಣಿಸುತ್ತಿದೆ. ಜನರು ಮನೆಯಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇನು ಪಟ್ಟಣವೋ ಅಥವಾ ನಡುಗಡ್ಡೆಯೋ ಎನ್ನುವಂತಾಗಿದೆ.

ಮನೆಗಳಲ್ಲೂ ನೀರು ತುಂಬಿಕೊಂಡಿದ್ದು, ಕೆಲವೆಡೆ ಮನೆಯ ಕಂಪೌಂಡ್‌ ಕೂಡಾ ನೀರಿನಲ್ಲಿ ಮುಳುಗಿವೆ ಎಂದರೇ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದಾಗಿದೆ. ನಗರದ ಪಕ್ಕವೇ ಹಾದು ಹೋಗುವ ಗೋದಾವರಿ ನದಿ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ದಾಟಿದೆ.