Osmania Biscuits: ಉಸ್ಮಾನಿಯಾ ಬಿಸ್ಕೆಟ್ ತಿನ್ನುತ್ತೀರಾ? ಹುಷಾರು ಅದ ತಿಂದರೆ ಸೀದಾ ಉಸ್ಮಾನಿಯಾ ಆಸ್ಪತ್ರೆಗೆ ಹೋಗಬೇಕಾದೀತು!

|

Updated on: Sep 05, 2023 | 2:09 PM

Hyderabad Osmania Biscuits: ಉಸ್ಮಾನಿಯಾ ಬಿಸ್ಕತ್ ತಯಾರಿಕೆಯಲ್ಲಿ ಸತ್ಯಾಸತ್ಯತೆ ಮತ್ತು ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಅಧಿಕಾರಿಗಳು ಫೀಲ್ಡ್​​ ವರ್ಕ್​​​ಗೆ ಇಳಿದಿದ್ದಾರೆ. ಸುಮಾರು 35 ಸಾವಿರ ರೂ. ಮೌಲ್ಯದ ಉಸ್ಮಾನಿಯಾ ಬಿಸ್ಕತ್ ದಾಸ್ತಾನು ವಶಪಡಿಸಿಕೊಂಡಿದ್ದಾರೆ. ನಿಜವಾಗಿ ಏನಾಯಿತೆಂದರೆ, ಕಳೆದ ವಾರಾಂತ್ಯ ಹೈದರಾಬಾದಿನ ಮಿಯಾಪುರದಲ್ಲಿ ವಿನಯ್ ವಂಗಾಲ ಎಂಬ ಯುವಕ ಉಸ್ಮಾನಿಯಾ ಬಿಸ್ಕತ್ ಪ್ಯಾಕೆಟ್ ಖರೀದಿಸಿದ್ದ. ಆದರೆ ಅದು ತಿನ್ನುತ್ತಿದ್ದಾಗ ಬಿಸ್ಕೆಟ್ ನಲ್ಲಿ ನೊಣವಿತ್ತು!

Osmania Biscuits: ಉಸ್ಮಾನಿಯಾ ಬಿಸ್ಕೆಟ್ ತಿನ್ನುತ್ತೀರಾ? ಹುಷಾರು ಅದ ತಿಂದರೆ ಸೀದಾ ಉಸ್ಮಾನಿಯಾ ಆಸ್ಪತ್ರೆಗೆ ಹೋಗಬೇಕಾದೀತು!
ಉಸ್ಮಾನಿಯಾ ಬಿಸ್ಕೆಟ್ ತಿನ್ನುತ್ತೀರಾ? ಹುಷಾರು
Follow us on

ಹೈದರಾಬಾದ್, ಸೆಪ್ಟೆಂಬರ್ 5: ಬಿರಿಯಾನಿ ಜೊತೆಗೆ ಉಸ್ಮಾನಿಯಾ ಬಿಸ್ಕತ್ ಸಹ ಹೈದರಾಬಾದ್ ನ ಜನರಿಗೆ ಮತ್ತು ಪ್ರವಾಸಿಗರಿಗೆ ಬಹಳ ಪರಿಚಿತವಾಗಿದೆ. ಉಸ್ಮಾನಿಯಾ ಬಿಸ್ಕತ್‌ಗಳು ತುಂಬಾ ರುಚಿಯಾಗಿರುವುದರಿಂದ ಅದನ್ನು ತಿನ್ನಲು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸತ್ಯ ತಿಳಿದರೆ ಇನ್ನು ಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಉಸ್ಮಾನಿಯಾ ಬಿಸ್ಕತ್ ತಯಾರಿಕೆಯಲ್ಲಿ ಸತ್ಯಾಸತ್ಯತೆ ಮತ್ತು ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಅಧಿಕಾರಿಗಳು ಫೀಲ್ಡ್​​ ವರ್ಕ್​​​ಗೆ ಇಳಿದಿದ್ದಾರೆ. ಸುಮಾರು 35 ಸಾವಿರ ರೂ. ಮೌಲ್ಯದ ಉಸ್ಮಾನಿಯಾ ಬಿಸ್ಕತ್ (Osmania Biscuits) ದಾಸ್ತಾನು ವಶಪಡಿಸಿಕೊಂಡಿದ್ದಾರೆ. ನಿಜವಾಗಿ ಏನಾಯಿತೆಂದರೆ, ಕಳೆದ ವಾರಾಂತ್ಯ ಹೈದರಾಬಾದಿನ ಮಿಯಾಪುರದಲ್ಲಿ ವಿನಯ್ ವಂಗಾಲ ಎಂಬ ಯುವಕ ಉಸ್ಮಾನಿಯಾ ಬಿಸ್ಕತ್ ಪ್ಯಾಕೆಟ್ ಖರೀದಿಸಿದ್ದ. ಆದರೆ ಅದು ತಿನ್ನುತ್ತಿದ್ದಾಗ ಬಿಸ್ಕೆಟ್ ಒಂದರಲ್ಲಿ ನೊಣ (Fly) ಇರುವುದನ್ನು ವಿನಯ್ ಗಮನಿಸಿದ್ದಾನೆ. ಅಷ್ಟೇ.. ತಕ್ಷಣ ತಮ್ಮ ಟ್ವಿಟರ್ ಖಾತೆಯಿಂದ ಸ್ಥಳೀಯ ಆಹಾರ ನಿರೀಕ್ಷಕರು ಹಾಗೂ ಆಹಾರ ಸುರಕ್ಷತಾ ಆಯುಕ್ತರಿಗೆ ಆತ ದೂರು ನೀಡಿದ್ದಾರೆ.

ವಿನಯ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಸಹಾಯಕ ಆಹಾರ ನಿಯಂತ್ರಕ ಅಧಿಕಾರಿಗಳು ಭಾನುವಾರ ಮಿಯಾಪುರದ ಅಂಗಡಿಯಲ್ಲಿ ತಪಾಸಣೆ ನಡೆಸಿದರು. ತಪಾಸಣೆಯ ಭಾಗವಾಗಿ, ಅಧಿಕಾರಿಗಳು ಮಾದರಿಗಳನ್ನು ತೆಗೆದುಕೊಂಡು ತಕ್ಷಣವೇ 36,000 ರೂಪಾಯಿ ಮೌಲ್ಯದ ಉಸ್ಮಾನಿಯಾ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ವಿನಯ್ ಟ್ವೀಟ್ ಗೆ ಸ್ಪಂದಿಸಿದ್ದಾರೆ.

ಮತ್ತೊಂದೆಡೆ, ಅಧಿಕಾರಿಗಳು ಉಸ್ಮಾನಿಯಾ ಬಿಸ್ಕತ್ ದಾಸ್ತಾನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ, ನಗರದ ಅನೇಕ ನೆಟ್ಟಿಗರು ಹೈದರಾಬಾದ್‌ನಾದ್ಯಂತ ಇಂತಹ ಅನೇಕ ಅಂಗಡಿಗಳಿದ್ದು, ಅವುಗಳನ್ನೂ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಕೇಳುತ್ತಿದ್ದಾರೆ. ಅಲ್ಲದೆ, ಉಸ್ಮಾನಿಯಾ ಬಿಸ್ಕತ್ ತಯಾರಿಕೆಯಲ್ಲಿ ಸ್ವಚ್ಛತೆ ಎಷ್ಟರಮಟ್ಟಿಗೆ ಅಧ್ವಾನವಾಗಿರುತ್ತದೆ ಎಂಬುದು ಗೊತ್ತಿದೆ, ತಯಾರಕರು ತಮ್ಮ ಕೈಗೆ ಕನಿಷ್ಠ ಗ್ಲೌಸೂ ಹಾಕಿಕೊಂಡಿರುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಅಧಿಕಾರಿಗಳ ಪ್ರತಿಕ್ರಿಯೆ ಶ್ಲಾಘನೀಯ ಎಂದೂ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ