ಅಣ್ಣಾಮಲೈ ನಂತರ ಮತ್ತೊಬ್ಬ IAS ಅಧಿಕಾರಿ ರಾಜಕೀಯಕ್ಕೆ ಪಾದಾರ್ಪಣೆ

|

Updated on: Nov 08, 2020 | 12:17 PM

ಚೆನ್ನೈ: ಮಾಜಿ IPS ಅಧಿಕಾರಿ ಅಣ್ಣಾಮಲೈರ ನಂತರ ಮತ್ತೊಬ್ಬ ಮಾಜಿ IAS ಅಧಿಕಾರಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ನವೆಂಬರ್ 9ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ. ಮೂಲತ: ತಮಿಳುನಾಡಿನವರಾಗಿರುವ ಸಸಿಕಾಂತ್ ಸೆಂಥಿಲ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ DC ಆಗಿದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಸೇರಿದಂತೆ ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ 2019ರ ಸೆಪ್ಟೆಂಬರ್​ನಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ರಾಜೀನಾಮೆ ಬಳಿಕ ಸಿಎಎ, […]

ಅಣ್ಣಾಮಲೈ ನಂತರ ಮತ್ತೊಬ್ಬ IAS ಅಧಿಕಾರಿ ರಾಜಕೀಯಕ್ಕೆ ಪಾದಾರ್ಪಣೆ
Follow us on

ಚೆನ್ನೈ: ಮಾಜಿ IPS ಅಧಿಕಾರಿ ಅಣ್ಣಾಮಲೈರ ನಂತರ ಮತ್ತೊಬ್ಬ ಮಾಜಿ IAS ಅಧಿಕಾರಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ನವೆಂಬರ್ 9ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ.

ಮೂಲತ: ತಮಿಳುನಾಡಿನವರಾಗಿರುವ ಸಸಿಕಾಂತ್ ಸೆಂಥಿಲ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ DC ಆಗಿದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಸೇರಿದಂತೆ ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ 2019ರ ಸೆಪ್ಟೆಂಬರ್​ನಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ರಾಜೀನಾಮೆ ಬಳಿಕ ಸಿಎಎ, ಎನ್​ಆರ್​ಸಿ ಹೋರಾಟದಲ್ಲಿ ಸಸಿಕಾಂತ್ ತೊಡಗಿಕೊಂಡಿದ್ದರು.

ಸದ್ಯ, ಸಸಿಕಾಂತ್​ ಈಗ ಕಾಂಗ್ರೆಸ್​ಗೆ ಸೇರುತ್ತಿದ್ದಾರೆ. ಇದೇ ರೀತಿ ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಹ ರಾಜೀನಾಮೆ ನಂತರ ಬಿಜೆಪಿಗೆ ಸೇರಿಕೊಂಡರು. ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಈ ಇಬ್ಬರೂ ಅಧಿಕಾರಿಗಳು ಇದೀಗ ತಮಿಳುನಾಡಿನ ರಾಜಕೀಯ ಕಣಕ್ಕೆ ಪಾದಾರ್ಪಣೆ ಮಾಡಿದ್ದಾರೆ.