Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..

ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ! ಅಂದಹಾಗೆ ಈತನ ಹೆಸ್ರು ರಾವುಲ ಮಹೇಶ ಅಲಿಯಾಸ್ ಮಲ್ಲಯ್ಯ ಅಂತಾ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮದ್ದಿರಾಲ ನಿವಾಸಿ. ಸೂರ್ಯಪೇಟೆಯಲ್ಲಿ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿರುವ […]

ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..
Follow us
ಆಯೇಷಾ ಬಾನು
|

Updated on: Nov 08, 2020 | 7:11 AM

ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ.

ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ! ಅಂದಹಾಗೆ ಈತನ ಹೆಸ್ರು ರಾವುಲ ಮಹೇಶ ಅಲಿಯಾಸ್ ಮಲ್ಲಯ್ಯ ಅಂತಾ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮದ್ದಿರಾಲ ನಿವಾಸಿ. ಸೂರ್ಯಪೇಟೆಯಲ್ಲಿ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿರುವ ಮಲ್ಲಯ್ಯನಿಗೆ ಮದುವೆ ಆಗೋದೇ ಕಾಯಕವಾಗಿತ್ತಂತೆ. ಒಂದಲ್ಲ ಎರಡಲ್ಲ 4 ಮದುವೆಯಾಗಿದ್ದಾನೆಂಬ ಆರೋಪ ಈತನ ವಿರುದ್ಧ ಕೇಳಿಬಂದಿದೆ. 3ನೇ ಮದುವೆ ವಿಚ್ಚೇದನ ಪ್ರಕರಣ ಇನ್ನೂ ಕೋರ್ಟ್​ನಲ್ಲಿರುವಾಗಲೇ 4ನೇ ಮದುವೆಯಾಗಿದ್ದಾನೆ. ಈತನ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಮದುವೆಯಾದ ಪತ್ನಿಯರು ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ.

ಮಹೇಶ ಮೊದಲಿಗೆ 2014ರಲ್ಲಿ ಮೋತ ಮಂಡಲದ ನಿವಾಸಿಯಾಗಿದ್ದ ಮಹಿಳೆಯನ್ನ ಮದುವೆಯಾಗಿದ್ದನಂತೆ. 1 ವರ್ಷ ಕಳೆಯುವುದರ ಒಳಗಾಗಿ ಆಕೆಯೊಂದಿಗೆ ಕಿತ್ತಾಡಿಕೊಂಡು ವಿವಾಹ ವಿಚ್ಚೇದನ ಪಡೆದುಕೊಂಡಿದ್ದಾನೆ. ಮತ್ತೆ 2016ರಲ್ಲಿ 2ನೇ ವಿವಾಹವಾಗಿದ್ದ, 2018ರಲ್ಲಿ 3ನೇ ಮದುವೆಯಾಗಿದ್ದ ಮಲ್ಲಯ್ಯ ಅಕ್ಟೋಬರ್ 29ರಂದು 4ನೇ ಮದುವೆಯಾಗಿ ಲಾಕ್ ಆಗಿದ್ದಾನೆ. ಈತನ ವಿರುದ್ಧ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತನ ಜೊತೆ ಸಪ್ತಪದಿ ತುಳಿದಿದ್ದ ಮಹಿಳೆಯರು ದಾರಿ ಕಾಣದೆ ಪರದಾಡ್ತಿದ್ದಾರೆ.

ಒಟ್ನಲ್ಲಿ ಈಗ ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣದ ಬಗ್ಗೆಯೇ ಮಾತು. ಇಷ್ಟೆಲ್ಲಾ ಆರೋಪಗಳು ಕೇಳಿಬಂದಿದ್ದರೂ ಕಾನ್ಸ್​​ಟೇಬಲ್ ವಿರುದ್ಧ ದೂರು ಕೂಡ ದಾಖಲಾಗಿಲ್ಲ ಹಾಗೂ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕಿದೆ. ಈ ಮೂಲವಾದ್ರು ನೊಂದವರಿಗೆ ನ್ಯಾಯ ಕೊಡಿಸಬೇಕಿದೆ. ಇಲ್ಲವಾದ್ರೆ ಈತನಿಗೆ ಮದುವೆ ಆಗೋದೆ ಕೆಲಸವಾಗಿಬಿಟ್ರೂ ಅಚ್ಚರಿಯಿಲ್ಲ.

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ