ಅಣ್ಣಾಮಲೈ ನಂತರ ಮತ್ತೊಬ್ಬ IAS ಅಧಿಕಾರಿ ರಾಜಕೀಯಕ್ಕೆ ಪಾದಾರ್ಪಣೆ
ಚೆನ್ನೈ: ಮಾಜಿ IPS ಅಧಿಕಾರಿ ಅಣ್ಣಾಮಲೈರ ನಂತರ ಮತ್ತೊಬ್ಬ ಮಾಜಿ IAS ಅಧಿಕಾರಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ನವೆಂಬರ್ 9ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ. ಮೂಲತ: ತಮಿಳುನಾಡಿನವರಾಗಿರುವ ಸಸಿಕಾಂತ್ ಸೆಂಥಿಲ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ DC ಆಗಿದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಸೇರಿದಂತೆ ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ 2019ರ ಸೆಪ್ಟೆಂಬರ್ನಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ರಾಜೀನಾಮೆ ಬಳಿಕ ಸಿಎಎ, […]
ಚೆನ್ನೈ: ಮಾಜಿ IPS ಅಧಿಕಾರಿ ಅಣ್ಣಾಮಲೈರ ನಂತರ ಮತ್ತೊಬ್ಬ ಮಾಜಿ IAS ಅಧಿಕಾರಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ನವೆಂಬರ್ 9ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ.
ಮೂಲತ: ತಮಿಳುನಾಡಿನವರಾಗಿರುವ ಸಸಿಕಾಂತ್ ಸೆಂಥಿಲ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ DC ಆಗಿದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಸೇರಿದಂತೆ ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ 2019ರ ಸೆಪ್ಟೆಂಬರ್ನಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ರಾಜೀನಾಮೆ ಬಳಿಕ ಸಿಎಎ, ಎನ್ಆರ್ಸಿ ಹೋರಾಟದಲ್ಲಿ ಸಸಿಕಾಂತ್ ತೊಡಗಿಕೊಂಡಿದ್ದರು.
ಸದ್ಯ, ಸಸಿಕಾಂತ್ ಈಗ ಕಾಂಗ್ರೆಸ್ಗೆ ಸೇರುತ್ತಿದ್ದಾರೆ. ಇದೇ ರೀತಿ ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಹ ರಾಜೀನಾಮೆ ನಂತರ ಬಿಜೆಪಿಗೆ ಸೇರಿಕೊಂಡರು. ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಈ ಇಬ್ಬರೂ ಅಧಿಕಾರಿಗಳು ಇದೀಗ ತಮಿಳುನಾಡಿನ ರಾಜಕೀಯ ಕಣಕ್ಕೆ ಪಾದಾರ್ಪಣೆ ಮಾಡಿದ್ದಾರೆ.