ನೇಪಾಳದ ಮೇಲೆ ಹಿಡಿತ ಸಾಧಿಸುವತ್ತ ಭಾರತ?
ದೆಹಲಿ: ಮೂರು ದಿನಗಳ ನೇಪಾಳ ಭೇಟಿಯಲ್ಲಿರುವ ಭಾರತದ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರಲ್ಲಿ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮಾತುಕತೆಯ ಮೂಲಕ ಉಭಯ ದೇಶಗಳ ಸಂಬಂಧ ಸುಧಾರಿಸುವ ಮಾತನಾಡಿದ್ದಾರೆ. ಈ ಮೂಲಕ ಭಾರತದ ಹಿಡಿತದಿಂದ ಕೈತಪ್ಪಿ ಚೀನಾ ತೆಕ್ಕೆಗೆ ಸೇರುವ ಹಂತದಲ್ಲಿದ್ದ ನೇಪಾಳ ಮತ್ತೆ ತನ್ನ ಮೂಲ ಸ್ನೇಹಿತನತ್ತ ಮುಖಮಾಡಿದೆ. ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸೇನಾ ಮುಖ್ಯಸ್ಥರ ಜೊತೆ ನರವಣೆ ಅವರು ಮಾತುಕತೆ ನಡೆಸಲಿದ್ದಾರೆ. ಇತ್ತೀಚಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೈಲಾಸ ಮಾನಸಸರೋವರ ಯಾತ್ರಾರ್ಥಿಗಳಿಗೆ ಸಹಾಯವಾಗುಂತೆ ಲಿಪುಲೇಕ್ ಮತ್ತು […]
ದೆಹಲಿ: ಮೂರು ದಿನಗಳ ನೇಪಾಳ ಭೇಟಿಯಲ್ಲಿರುವ ಭಾರತದ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರಲ್ಲಿ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮಾತುಕತೆಯ ಮೂಲಕ ಉಭಯ ದೇಶಗಳ ಸಂಬಂಧ ಸುಧಾರಿಸುವ ಮಾತನಾಡಿದ್ದಾರೆ. ಈ ಮೂಲಕ ಭಾರತದ ಹಿಡಿತದಿಂದ ಕೈತಪ್ಪಿ ಚೀನಾ ತೆಕ್ಕೆಗೆ ಸೇರುವ ಹಂತದಲ್ಲಿದ್ದ ನೇಪಾಳ ಮತ್ತೆ ತನ್ನ ಮೂಲ ಸ್ನೇಹಿತನತ್ತ ಮುಖಮಾಡಿದೆ. ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸೇನಾ ಮುಖ್ಯಸ್ಥರ ಜೊತೆ ನರವಣೆ ಅವರು ಮಾತುಕತೆ ನಡೆಸಲಿದ್ದಾರೆ. ಇತ್ತೀಚಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೈಲಾಸ ಮಾನಸಸರೋವರ ಯಾತ್ರಾರ್ಥಿಗಳಿಗೆ ಸಹಾಯವಾಗುಂತೆ ಲಿಪುಲೇಕ್ ಮತ್ತು ಧಾರ್ಚುಲಾಗಳ ನಡುವೆ 17,000 ಅಡಿ ಎತ್ತರದಲ್ಲಿ 80 ಕಿ.ಮಿ ದೂರದ ಸೇತುವೆ ಉದ್ಘಾಟಿಸಿದ್ದರು. ಇದು ಚೀನಾ ಗಡಿಗೆ ಹೊಂದಿಕೊಂಡಿರುವುದು ಇತ್ತೀಚಿಗೆ ಚೀನಾಕ್ಕೆ ಆಪ್ತನಾಗಿದ್ದ ನೇಪಾಳಕ್ಕೆ ಇರಿಸುಮುರುಸು ಉಂಟುಮಾಡಿತ್ತು. ಅಲ್ಲದೇ ಕೆಲವೇ ದಿನಗಳಲ್ಲಿ ಲಿಪುಲೇಕ್ ಪ್ರದೇಶವನ್ನು ಒಳಗೊಂಡ ನೇಪಾಳದ ಭೂಪಟವನ್ನು ಬಿಡುಗಡೆಗೊಳಿಸಿ ಪ್ರತಿರೋಧ ವ್ಯಕ್ತಪಡಿಸಿತ್ತು. ನೇಪಾಳದ ಹೊಸ ಭೂಪಟವನ್ನು ಭಾರತ ಒಪ್ಪದೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು.
ಕೆಲ ದಿನಗಳ ಹಿಂದೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನಡೆಗಳು ಚೀನಾ ಪರವಾಗಿದ್ದವು ಎಂದು ಸ್ವತಃ ನೇಪಾಳ ಸಂಸತ್ತಿನಲ್ಲೇ ಟೀಕೆಗಳು ಕೇಳಿಬಂದಿದ್ದವು. ನೇಪಾಳದ ಕವಿ ಭಾನು ಭಕ್ತ ಆಚಾರ್ಯರ 206ನೇ ಹುಟ್ಟುಹಬ್ಬದಂದು ಅಯೋಧ್ಯೆ ನೇಪಾಳದಲ್ಲಿದೆ. ಭಾರತ ನೇಪಾಳವನ್ನು ಸಾಂಸ್ಕೃತಿಕವಾಗಿ ತುಳಿದಿದೆ ಎಂದು ಅವರು ಹೇಳಿದ್ದರು. ಪ್ರಧಾನಿ ಪಟ್ವನ್ನು ಭದ್ರವಾಗಿಸಿಕೊಳ್ಳಲು ಬೀಜಿಂಗಿನ ಪ್ರಭಾವವನ್ನೂ ಬಳಸಿದ್ದರು ಎಂಬ ಮಾತುಗಳೂ ನೇಪಾಳದ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದ್ದವು. ನೇಪಾಳ ಕಮ್ಯುನಿಸ್ಟ್ ಪಕ್ಷದಲ್ಲೇ ಈ ಕುರಿತು ಒಡಕು ಕಂಡುಬಂದಿತ್ತು. ಸ್ವತಃ ನೇಪಾಳದ ರಕ್ಷಣಾ ಸಚಿವರೂ ಆಗಿರುವ ಓಲಿಯ ಈ ಎಲ್ಲ ನಡೆಗಳು ನೇಪಾಳ ಭಾರತದಿಂದ ದೂರವಾಗುತ್ತಿರುವ ಸೂಚನೆ ನೀಡಿದ್ದವು. ಭಾರತದ ನೆರೆ ರಾಷ್ಟ್ರಗಳ ಮೇಲೆ ಚೀನಾ ಹಿಡಿತ ಸಾಧಿಸಲು ಉಪಾಯ ಹೂಡುತ್ತಿರುವ ಮುನ್ಸೂಚನೆ ನೀಡಿದ್ದವು. ಇವೆಲ್ಲವೂ ಭಾರತ-ನೇಪಾಳದ ಸಂಬಂಧವನ್ನು ಹದಗೆಡಿಸಿದ್ದವು. ಇತ್ತ, ಗೆಳೆತನದ ಮಾತಾಡುತ್ತಲೇ ನೇಪಾಳದ 4 ಜಿಲ್ಲೆಗಳ11 ಪ್ರದೇಶಗಳನ್ನು ತನ್ನೆಡೆಗೆ ಎಳೆಯುವ ಸಂಚು ಹೂಡಿರುವ ಚೀನಾದ ನಡೆ ನೇಪಾಳದ ನಿದ್ದೆಗೆಡಿಸಿದೆ. ಈ ಕಾರಣಕ್ಕೆ ಮತ್ತೆ ಹಳೆ ಗೆಳೆಯನ ಬಳಿ ಮೈತ್ರಿಗೆ ಮುಂದಾಗುತ್ತಿದೆ ಎನ್ನಲಾಗಿದೆ.
ಎಂ.ಎಂ. ನರವಣೆ ಅವರ ನೇಪಾಳ ಭೇಟಿ ಉಭಯ ದೇಶಗಳ ನಡುವೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಭಾರತದ ದಿಟ್ಟ ಹೆಜ್ಜೆಯೆಂದು ವಿಶ್ಲೇಷಣೆ ಕೇಳಿಬರುತ್ತಿದೆ. ಅಲ್ಲದೇ ವಿಶೇಷ ಸಮಾರಂಭದಲ್ಲಿ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೇಪಾಳ ಸೇನೆಯ ಉನ್ನತ ಗೌರವವನ್ನು ಎಂ.ಎಂ. ನರವಣೆಗೆ ಪ್ರದಾನಿಸಿದರು. 1950ರಲ್ಲಿ ಶುರುವಾದ ಈ ಸಂಪ್ರದಾಯ ಉಭಯ ದೇಶಗಳ ನಡುವಿನ ಸಬಂಧ ವೃದ್ಧಿಸುವ ಕ್ರಮ ಎಂದೇ ಬಿಂಬಿತವಾಗಿದೆ. ಜನರಲ್ ಎಂ ಕಾರ್ಯಪ್ಪ ಅವರು ಮೊದಲ ಬಾರಿಗೆ ಈ ಗೌರವಕ್ಕೆ ಪ್ರಾಪ್ತವಾಗಿದ್ದರು. ಶ್ರೀಲಂಕಾ, ಮೈನ್ಮಾರ್, ಬಾಂಗ್ಲಾದೇಶಗಳಿಗೂ ಭಾರತದ ವಕ್ತಾರರು ಭೇಟಿ ನೀಡುವ ಸಂಭಾವ್ಯತೆಯನ್ನು ಇದು ಸೂಚಿಸಿದೆ. ಈ ಮೂಲಕ ಚೀನಾದ ತಂತ್ರಗಳಿಗೆ ಸೂಕ್ತ ಪ್ರತಿತಂತ್ರ ಹೆಣೆಯುವತ್ತ ಭಾರತ ಸರ್ಕಾರ ಗಮನ ಹರಿಸಿದೆ.