ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ ಪನೀರ್ಸೆಲ್ವಂ (O Paneerselvam) ಅವರ ಪತ್ನಿ ಪಿ ವಿಜಯಲಕ್ಷ್ಮಿ (P Vijayalakshmi) ಬುಧವಾರ ಬೆಳಗ್ಗೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 66 ವಯಸ್ಸಾಗಿತ್ತು. ಉದರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಕಳೆದ 10 ದಿನಗಳಿಂದ ಪೆರುಂಗುಡಿಯ ಜೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಹೃದ್ರೋಗಿಯಾಗಿದ್ದ ಆಕೆ ಇಂದು ಮುಂಜಾನೆ 5 ಗಂಟೆಗೆ ಭಾರೀ ಹೃದಯಾಘಾತಕ್ಕೆ ಒಳಗಾದರು ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ವಿಜಯಲಕ್ಷ್ಮಿ ಬೆಳಿಗ್ಗೆ 6.45 ಕ್ಕೆ ನಿಧನರಾಗಿದ್ದಾರೆ.
ವಿಜಯಲಕ್ಷ್ಮಿ ಅವರ ಪಾರ್ಥಿವ ಶರೀರವನ್ನು ರಸ್ತೆಯ ಮೂಲಕ ತೇನಿ ಜಿಲ್ಲೆಯ ಪೆರಿಯಕುಲಂನಲ್ಲಿರುವ ಒಪಿಎಸ್ ಮನೆಗೆ ತರಲಾಗುವುದು. ಗುರುವಾರ ಬೆಳಗ್ಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.
ಕುಟುಂಬದ ಹತ್ತಿರದ ಮೂಲಗಳ ಪ್ರಕಾರ ವಿಜಯಲಕ್ಷ್ಮಿ ಒಪಿಎಸ್ ಗೆ ಬೆಂಬಲವಾಗಿ ನಿಂತಿದ್ದು ಅವರ ಮೂವರು ಕಿರಿಯ ಸಹೋದರರು ಮತ್ತು ಅನೇಕ ಸಹೋದರಿಯರನ್ನು ಒಳಗೊಂಡ ಒಪಿಎಸ್ ನ ಅವಿಭಕ್ತ ಕುಟುಂಬವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನವೆಂಬರ್ 14, 1977 ರಂದು ಒಪಿಎಸ್ ಅವರನ್ನು ವಿಜಯಲಕ್ಷ್ಮಿ ಮದುವೆಯಾಗಿದ್ದರು.
ಉತ್ತಮಪಾಳ್ಯದ ಹಾಜಿ ಕರುತಾರಾವುತರ್ ಕಾಲೇಜಿನಲ್ಲಿ ಬಿಎ ಪದವೀಧರಾಗಿದ್ದ ಅವರು ತೇನಿ ಜಿಲ್ಲೆಯ ರೈತ ದಂಪತಿಗಳಾದ ಅಳಗುಪಾಂಡಿ ತೇವನ್ ಮತ್ತು ವಲ್ಲಿಯಮ್ಮಾಳ್ ಅವರ ಪುತ್ರಿ. ಸೆಪ್ಟೆಂಬರ್ 17, 1954 ರಂದು ಜನಿಸಿದ ಅವರು ಒಪಿಎಸ್ಗಿಂತ ಮೂರು ವರ್ಷ ಚಿಕ್ಕವರು.
ಒಪಿಎಸ್ ತಮ್ಮ ಮದುವೆಯ ಸಮಯದಲ್ಲಿ ಎಐಎಡಿಎಂಕೆಯ ಪೆರಿಯಾಕುಲಂ ಪಟ್ಟಣದ ಕಾರ್ಯದರ್ಶಿಯಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಜಯಲಕ್ಷ್ಮಿ ಅವರು 44 ವರ್ಷಗಳ ಹಿಂದೆ ಮಾಡಿದಂತೆಯೇ ಅತಿಥಿ ಸತ್ಕಾರ ಮಾಡುತ್ತಿದ್ದರು. ನಾವು ಯಾವ ಸಮಯದಲ್ಲಿ ಅವರ ಮನೆಗೆ ಹೋದರು ಅವರು ಕೋಪಗೊಂಡಿಲ್ಲ ಅಂತಾರೆ ಪಕ್ಷದ ಕಾರ್ಯಕರ್ತರು.
ಅವಿಭಕ್ತ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ವಹಿಸಿಕೊಂಡರು ಮತ್ತು ಇದು ಪನ್ನೀರ್ಸೆಲ್ವಂ ಪಕ್ಷದಲ್ಲಿ ಮೇಲೇರಲು ಸಹಾಯ ಮಾಡಿತು ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಹಿಸಿದ ವಿವಿಧ ಜವಾಬ್ದಾರಿಗಳಲ್ಲಿ ಒಬ್ಬ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಒತ್ತಡವನ್ನು ಅವರು ನಿಭಾಯಿಸಿದರು.
ಅವರಿಗೆ ಒಪಿಎಸ್ನ ಇಷ್ಟ ಮತ್ತು ಇಷ್ಟವಿಲ್ಲದೇ ಇರುವ ವಿಷಯಗಳು ತಿಳಿದಿತ್ತು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ – ಪಿ ರವೀಂದ್ರನಾಥ್ (ತೇನಿ ಎಂಪಿ) ಮತ್ತು ವಿ ಪಿ ಜಯಪ್ರದೀಪ್ ಮತ್ತು ಮಗಳು – ಕವಿತಾ ಬಾನು.
ಎಐಎಡಿಎಂಕೆ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕುಟುಂಬದೊಂದಿಗೆ ಅಂತಿಮ ವಿಧಿವಿಧಾನಗಳ ವ್ಯವಸ್ಥೆ ಮಾಡಲು ಪೆರಿಯಾಕುಲಂ ಮನೆಗೆ ಹೋಗಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರು ಜಿಇಎಂ ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಉಚ್ಛಾಟಿತ ಎಐಎಡಿಎಂಕೆ ನಾಯಕಿ ವಿ ಕೆ ಶಶಿಕಲಾ ಅವರು ಪನ್ನೀರ್ಸೆಲ್ವಂ ಅವರನ್ನು ಭೇಟಿ ಮಾಡಿ ಅವರ ಪತ್ನಿ ಪಿ ವಿಜಯಲಕ್ಷ್ಮಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.
ಇದನ್ನೂ ಓದಿ: C.1.2 ಕೊವಿಡ್ -19 ರೂಪಾಂತರ: ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ ಎಂದ ಕೇಂದ್ರ ಸರ್ಕಾರ, ಆದರೆ ಇದು ಎಷ್ಟು ಮಾರಕ?
(Former Tamil Nadu chief minister O Paneerselvam’s wife P Vijayalakshmi dies in a Chennai)
Published On - 2:00 pm, Wed, 1 September 21