C.1.2 ಕೊವಿಡ್ -19 ರೂಪಾಂತರ: ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ ಎಂದ ಕೇಂದ್ರ ಸರ್ಕಾರ, ಆದರೆ ಇದು ಎಷ್ಟು ಮಾರಕ?

C.1.2 Covid-19 variant: ಈ ಹಿಂದೆ ಉಲ್ಲೇಖಿಸಿದ ಅಧ್ಯಯನದ ಪ್ರಕಾರ, C.1.2 ವಂಶಾವಳಿಯು ವರ್ಷಕ್ಕೆ 41.8 ರೂಪಾಂತರಗಳ ಮ್ಯುಟೇಶನ್ ದರವನ್ನು ಹೊಂದಿದೆ. ಇದು ಇತರ ರೂಪಾಂತರಗಳ ಪ್ರಸ್ತುತ ಜಾಗತಿಕ ರೂಪಾಂತರ ದರಕ್ಕಿಂತ ಎರಡು ಪಟ್ಟು ವೇಗವಾಗಿರುತ್ತದೆ.

C.1.2 ಕೊವಿಡ್ -19 ರೂಪಾಂತರ: ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ ಎಂದ ಕೇಂದ್ರ ಸರ್ಕಾರ, ಆದರೆ ಇದು ಎಷ್ಟು ಮಾರಕ?
ಪ್ರಾತಿನಿಧಿಕ ಚಿತ್ರ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Sep 01, 2021 | 1:28 PM

ಎಎನ್ಐ ಸುದ್ದಿ ಸಂಸ್ಥೆಯ ಪ್ರಕಾರ ಕೇಂದ್ರ ಸರ್ಕಾರವು ಸೆಪ್ಟೆಂಬರ್ 1 ರ ಬುಧವಾರದಂದು ಹೊಸ ಸಿ .1.2 ಕೊವಿಡ್ -19(C.1.2 Covid-19 variant) ರೂಪಾಂತರದ ಯಾವುದೇ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ದಕ್ಷಿಣ ಆಫ್ರಿಕಾದಿಂದ ಮೊದಲು ವರದಿಯಾದ ಕೊರೊನಾವೈರಸ್​​ನ ಈ ತಳಿ ಈಗ ಕನಿಷ್ಠ ಆರು ದೇಶಗಳಿಗೆ ಹರಡಿದೆ. ಒಂದು ಅಧ್ಯಯನದ ಪ್ರಕಾರ, ವಿಶ್ವಸಂಸ್ಥೆಯ (UN)ಸಾರ್ವಜನಿಕ ಆರೋಗ್ಯ ಸಂಸ್ಥೆ ಈ ವಾರ ಹೊಸ ಸಿ .1.2 ವೈರಸ್ ತಳಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.

ಸಿ .1.2 ಕೊವಿಡ್ -19 ರೂಪಾಂತರವನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಮೇ ತಿಂಗಳಲ್ಲಿ ಪತ್ತೆ ಮಾಡಲಾಯಿತು. ಆದರೆ ಸಿ .1.2 ವಂಶಾವಳಿಯ ಬಗ್ಗೆ ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೇಸಸ್ ಎಚ್ಚರಿಕೆ ನೀಡಿದೆ. ಆದಾಗ್ಯೂ, ಡೆಲ್ಟಾ ರೂಪಾಂತರವು ಈಗಲೂ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್‌ನ ಅತ್ಯಂತ ಪ್ರಬಲವಾದ ತಳಿ ಎಂದು ಹೇಳಿದೆ.

ಆರೋಗ್ಯ ವಿಜ್ಞಾನದ ಪ್ರಿಪ್ರಿಂಟ್ ಸರ್ವರ್ medRxiv ನಲ್ಲಿ ಪುನರ್ ಪರಿಶೀಲನೆ ಮಾಡಬೇಕಾದ ಅಧ್ಯಯನ ವರದಿ ಪ್ರಕಾರ ಸಿ .1.2 ಕೊವಿಡ್ -19 ರೂಪಾಂತರವನ್ನು ದಕ್ಷಿಣ ಆಫ್ರಿಕಾದ “ಬಹುಸಂಖ್ಯಾತ” ಪ್ರಾಂತ್ಯಗಳಲ್ಲಿ ಮತ್ತು ಆಫ್ರಿಕಾ, ಯುರೋಪ್, ಏಷ್ಯಾ ಮತ್ತು ಓಷಿಯಾನಿಯಾದ ಇತರ ಏಳು ದೇಶಗಳಲ್ಲಿ ಪತ್ತೆಹಚ್ಚಲಾಗಿದೆ ಎಂದು ಸೂಚಿಸಿದೆ. ಆದಾಗ್ಯೂ, ರೂಪಾಂತರದ ಹರಡುವಿಕೆಯ ನಿಖರವಾದ ಪ್ರಮಾಣವನ್ನು ಆರೋಗ್ಯ ಅಧಿಕಾರಿಗಳು ಇನ್ನೂ ದೃಢೀಕರಿಸಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾವೈರಸ್ ರೂಪಾಂತರಗಳನ್ನು ಅವುಗಳ ಹರಡುವಿಕೆ, ವೈರಸ್ ಅಥವಾ ಪರಿಣಾಮಕಾರಿತ್ವದ ಆಧಾರದ ಮೇಲೆ ಸಾಮಾಜಿಕ ಕ್ರಮಗಳ ಹಿನ್ನೆಲೆಯಲ್ಲಿ ವರ್ಗೀಕರಿಸುವ ವ್ಯವಸ್ಥೆಯನ್ನು ಹೊಂದಿದೆ. ಡೆಲ್ಟಾ ರೂಪಾಂತರದಂತಹ ‘ಕಾಳಜಿಯ ರೂಪಾಂತರಗಳು’ ಪ್ರಸರಣದ ಹೆಚ್ಚಳವನ್ನು ತೋರಿಸುತ್ತವೆ. ಹೆಚ್ಚು ತೀವ್ರವಾದ ರೋಗಗಳು (ಉದಾಹರಣೆಗೆ, ಹೆಚ್ಚಿದ ಆಸ್ಪತ್ರೆ ಅಥವಾ ಸಾವುಗಳು) ‘ಆಸಕ್ತಿಯ ರೂಪಾಂತರಗಳು’ ಸಾಮಾನ್ಯವಾಗಿ ಅನೇಕ ಕ್ಲಸ್ಟರ್‌ಗಳಲ್ಲಿ ಸಮುದಾಯ ಪ್ರಸರಣವನ್ನು ತೋರಿಸುತ್ತವೆ.

ಆದಾಗ್ಯೂ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದ C.1.2 ಕೊರೊನಾವೈರಸ್ ರೂಪಾಂತರವನ್ನು ‘ಆಸಕ್ತಿಯ ರೂಪಾಂತರ’ ಅಥವಾ ‘ಕಾಳಜಿಯ ರೂಪಾಂತರ’ ಎಂದು ವರ್ಗೀಕರಿಸಿಲ್ಲ.

C.1.2 ರೂಪಾಂತರವು ಕೆಲವು “ಪ್ರಮುಖ ರೂಪಾಂತರಗಳನ್ನು” ಹೊಂದಿರುವುದಾಗಿ ವರದಿಯಾಗಿರುವ ಕಾರಣ ದಕ್ಷಿಣ ಆಫ್ರಿಕಾದ ಸಂಸ್ಥೆ ಇದು ಆಸಕ್ತಿ ಅಥವಾ ಕಾಳಜಿಯ ರೂಪಾಂತರಗಳನ್ನು ಉಂಟುಮಾಡಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ. “ಯಾವಾಗಲಾದರೂ ನಾವು ಆ ನಿರ್ದಿಷ್ಟ ರೂಪಾಂತರಗಳು ಬರುವುದನ್ನು ನೋಡುತ್ತೇವೆ, ಅದು ಏನು ಮಾಡಲಿದೆ ಎಂಬುದನ್ನು ನೋಡಲು ನಾವು ವೇರಿಯಂಟ್ ಮೇಲೆ ಕಣ್ಣಿಡಲು ಬಯಸುತ್ತೇವೆ” ಎಂದು ಸಿಡ್ನಿಯಲ್ಲಿ ಇಮ್ಯುನಾಲಜಿ ಮತ್ತು ಸಾಂಕ್ರಾಮಿಕ ರೋಗಗಳ ವೈರಾಲಜಿಸ್ಟ್ ಮತ್ತು ಉಪನ್ಯಾಸಕ ಡಾ. ಮೇಗನ್ ಸ್ಟೇನ್ ಹೇಳಿರುವುದಾಗಿ ಗಾರ್ಡಿಯನ್ ಪತ್ರಿಕೆ ಉಲ್ಲೇಖಿಸಿದೆ. ಈ ರೂಪಾಂತರಗಳು ಇದು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ತಪ್ಪಿಸುತ್ತದೆಯೇ ಅಥವಾ ವೇಗವಾಗಿ ಹರಡುತ್ತವೆಯೇ ಎಂಬುದರ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಉಲ್ಲೇಖಿಸಿದ ಅಧ್ಯಯನದ ಪ್ರಕಾರ, C.1.2 ವಂಶಾವಳಿಯು ವರ್ಷಕ್ಕೆ 41.8 ರೂಪಾಂತರಗಳ ಮ್ಯುಟೇಶನ್ ದರವನ್ನು ಹೊಂದಿದೆ. ಇದು ಇತರ ರೂಪಾಂತರಗಳ ಪ್ರಸ್ತುತ ಜಾಗತಿಕ ರೂಪಾಂತರ ದರಕ್ಕಿಂತ ಎರಡು ಪಟ್ಟು ವೇಗವಾಗಿರುತ್ತದೆ. “ಇದು ಹೆಚ್ಚು ಹರಡಬಲ್ಲದು ಮತ್ತು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಕೊಲ್ಕತ್ತಾದ ಸಿಎಸ್‌ಐಆರ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿಯ ವೈರಾಲಜಿಸ್ಟ್ ಉಪಾಸನಾ ರೇ ಹೇಳಿದರು. “ಸ್ಪೈಕ್ ಪ್ರೋಟೀನ್‌ನಲ್ಲಿ ಹಲವು ರೂಪಾಂತರಗಳು ಇರುವುದರಿಂದ. ಇದು ರೋಗನಿರೋಧಕದಿಂದ ತಪ್ಪಿಸಿಕೊಳ್ಳಲು ಕಾರಣವಾಗಬಹುದು ಮತ್ತು ಹರಡಲು ಅವಕಾಶ ನೀಡಿದರೆ ವಿಶ್ವಾದ್ಯಂತ ವ್ಯಾಕ್ಸಿನೇಷನ್ ಡ್ರೈವ್‌ಗೆ ಇದು ಸವಾಲಾಗುತ್ತದೆ ಎಂದಿದ್ದಾರೆ ರೇ.

ಇಲ್ಲಿಯವರೆಗೆ ಸಂಶೋಧಕರು ಹೇಳುವಂತೆ N440K ಮತ್ತು Y449H ರೂಪಾಂತರಗಳು ಕೆಲವು ಪ್ರತಿಕಾಯಗಳಿಂದ ರೋಗನಿರೋಧಕ ಮೀರುವ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು ಇವುಗಳು C.1.2 ಅನುಕ್ರಮಗಳಲ್ಲಿ ಸಹ ಕಂಡುಬಂದಿದೆ. ಈ ಸಂಶೋಧನೆಗಳ ಆಧಾರದ ಮೇಲೆ ತಜ್ಞರ ಊಹೆಯ ಪ್ರಕಾರ ಇದು ಹಿಂದೆ ಬೀಟಾ ಮತ್ತು ಡೆಲ್ಟಾದಂತಹ ರೂಪಾಂತರಗಳಲ್ಲಿ ಕಂಡುಬಂದಂತೆ ಹೋಲುತ್ತದೆ. ಆದ್ದರಿಂದ, ಸೆರಮ್ ತಟಸ್ಥಗೊಳಿಸದಿರುವ ಸಾಧ್ಯತೆಯಿದೆ ಮತ್ತು ಇದು ಈ ಹಿಂದಿನ ತಳಿಗಿಂತ ವಿರುದ್ಧವಾಗಿರಬಹುದು. ಪ್ರಸ್ತುತ ಕೊವಿಡ್‌ನ ಪರಿಣಾಮಕಾರಿತ್ವವನ್ನು ಸರಿಯಾಗಿ ನಿರ್ಣಯಿಸಲು ಕೊವಿಡ್ -19 ಲಸಿಕೆಗಳ ಬಗ್ಗೆ ಹೆಚ್ಚಿನ ಅನುಭವಗಳು ಬೇಕಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:  Coronavirus cases in India: ದೇಶದಲ್ಲಿ 41,965 ಹೊಸ ಕೊವಿಡ್ ಪ್ರಕರಣ ಪತ್ತೆ, 460 ಮಂದಿ ಸಾವು

(How deadly is the C.1.2 Covid-19 variant Which was first detected in South Africa in May)

Published On - 1:25 pm, Wed, 1 September 21