Horoscope Today 8 January 2025: ಬುಧವಾರದ ದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಜಾತಕ ತಿಳಿಯಿರಿ
ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ ಸಂಜೆ 14:04ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:26 ರಿಂದ ಬೆಳಿಗ್ಗೆ 09:50 ರವರೆಗೆ, ಗುಳಿಕ ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 12:40 ರವರೆಗೆ.
ಮೇಷ ರಾಶಿ :ನಿಮ್ಮ ಗತಿ ಯಾವುದರಲ್ಲಿ ಎನ್ನುವುದು ಗೊಂದಲವಾಗುವುದು. ಇಂದು ಅಂದುಕೊಂಡ ದೇವರ ಕಾರ್ಯವು ನಡೆಯದೇಹೋಗಬಹುದು. ಸ್ತ್ರೀಯರಿಗೆ ಮಾತುಗಾರಿಕೆಯಿಂದ ಪ್ರಶಂಸೆ ಸಿಗಲಿದೆ. ನಯವಾದ ಮಾತಿನಿಂದ ನಿಮ್ಮನ್ನು ಕಾರ್ಯಕ್ಕೆ ಒಲಿಸಿಬಹುದು. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಅವರ ಜೊತೆ ಸಂತೋಷದ ಸಮಯವನ್ನು ನೆನಪಿಸಿಕೊಳ್ಳುವಿರಿ. ನೀವು ಪ್ರಸಿದ್ಧಿಯನ್ನು ಪಡೆಯಲು ಆಸಕ್ತಿಯು ಹೆಚ್ಚುವುದು. ಕೆಲವು ವಿಚಾರವನ್ನು ನೀವೇ ದೊಡ್ಡ ಮಾಡಿಕೊಂಡು ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಸಾಹಸದಿಂದ ಯಶಸ್ಸು ಸಿಗುತ್ತದೆ ಎಂಬ ಭ್ರಮೆ ಬರಬಹುದು.
ವೃಷಭ ರಾಶಿ :ಬಾಹ್ಯ ಸೌಂದರ್ಯ ನಿಮಗೆ ಅಪ್ಯಾಯಮಾನವನ್ನು ಕೊಡುವುದು. ವೃತ್ತಿಯಲ್ಲಿ ಹೊಂದಾಣಿಕೆಯನ್ನು ರೂಢಿಸಿಕೊಳ್ಳುವಿರಿ. ಅನಿರೀಕ್ಷಿತ ಪ್ರಯಾಣದಿಂದ ಆಯಾಸವು ಅಧಿಕವಾದೀತು. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಖರ್ಚು ಮಾಡಬೇಕಾಗಿಬರಬಹುದು. ಗೊಂದಲದಿಂದ ಹೊರಬರಲು ಸಹಾಯವನ್ನು ಪಡೆಯಿರಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ತಾಯಿಯಿಂದ ನಿಮಗೆ ಲಾಭವಾಗಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರ ದುಃಖಿಸುವುದರಲ್ಲಿ ಅರ್ಥವಿರದು. ಆರ್ಥಿಕ ತೊಂದರೆಗೆ ನೀವು ಬಂಧುಗಳ ಸಹಾಯವನ್ನು ಪಡೆಯಬಹುದು. ಸಂಗಾತಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು.
ಮಿಥುನ ರಾಶಿ :ಆನಾರೋಗ್ಯ ಹೋದರೂ ಆಯಾಸ ಹೋಗುವುದಿಲ್ಲ. ಸಕಾರಾತ್ಮಕ ಅಂಶಗಳನ್ನು ಹೆಚ್ಚು ಸ್ವೀಕರಿಸಿ. ಇಂದು ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಅವಕಾಶವು ನಿಮಗೆ ಸಿಗುವುದು. ನಿಮ್ಮ ಪಾಲಿಗೆ ಎಲ್ಲ ಬಾಂಧವ್ಯಗಳೂ ಸಮಯಕ್ಕೆ ಆಗಲಾರವು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಂಟಾಗುವುದು. ತಪ್ಪು ನಿರ್ಧಾರಗಳಿಂದ ಆರ್ಥಿಕ ಹೊಡೆತವನ್ನು ತಿನ್ನಬೇಕಾಗುವುದು. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ. ಪಾಲುದಾರಿಕೆಯಲ್ಲಿ ವ್ಯತ್ಯಾಸವನ್ನು ಮಾಡಬೇಕಾದೀತು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು.
ಕರ್ಕಾಟಕ ರಾಶಿ :ಹೂಡಿಕೆಯ ಪ್ರಯೋಜನವನ್ನು ಇಂದು ಕಾಣುವಿರಿ. ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ಹಿತಶತ್ರುಗಳ ಕಾರಣದಿಂದ ಅವಕಾಶದಿಂದ ವಂಚಿತರಾಗುವಿರಿ. ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು. ಆರ್ಥಿಕಲಾಭವನ್ನು ಕೇವಲ ತರ್ಕದಿಂದ ಸಾಧಿಸಲಾಗದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಹಿತಶತ್ರುಗಳ ತೊಂದರೆಯ ನಡುವೆಯೂ ನಿಮ್ಮ ಅಭಿವೃದ್ಧಿಯು ಆಗಲಿದೆ. ಇದರಿಂದ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಪ್ರಯೋಗಾತ್ಮಕ ವಿಚಾರಕ್ಕೆ ಒಲವು ಹೆಚ್ಚಾಗುವುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ನಿಂದಿಸುವ ಮಾತು ವಿವಾದಕ್ಕೆ ಗುರಿಯಾಗಬಹುದು. ಬೇಕಾದಲ್ಲಿ ಮಾತ್ರ ನಿಮ್ಮ ಪ್ರಭಾವವನ್ನು ಬಳಸುವಿರಿ.
ಸಿಂಹ ರಾಶಿ :ಪ್ರಾಮಾಣಿಕತೆಯಿಂದ ಶೀಘ್ರ ಯಶಸ್ಸು ಸಿಗದು. ಅನಿರೀಕ್ಷಿತ ಪ್ರಯಾಣವಾದರೂ ಕಾರ್ಯದಲ್ಲಿ ಜಯ ಸಿಕ್ಕೀತು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ನಿಮ್ಮ ತಪ್ಪೇ ಇದ್ದರೂ ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ. ಕೆಲವೊಮ್ಮೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗಬಹುದು. ಮನೋವಿಕಾರಕ್ಕೆ ಕಾರ್ಯದಲ್ಲಿ ಮಗ್ನರಾಗುವುದು ಬಿಟ್ಟರೆ ಬೇರೆ ಗತಿಯಿಲ್ಲ. ಶತ್ರುಗಳನ್ನು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ.
ಕನ್ಯಾ ರಾಶಿ :ತೋರಿಕೆಗೆ ಮಾಡುವ ಪ್ರೀತಿ ಕೆಲವು ಸಮಯವಷ್ಟೇ ಜೀವಂತವಾಗಿ ಇರುವುದು. ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ಇಂದಿನ ಮನೆಯ ವಾತಾವರಣದುಮನದ ನಿಮ್ಮ ಅಧ್ಯಯನಕ್ಕೆ ತೊಡಬಲಕಾಗಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ಒಳ್ಳೆಯದನ್ನು ಮಾಡಲು ಅನುಕೂಲವಿದ್ದರೂ ಮಾಡುವ ಮನಸ್ಸು ಬಾರದು. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ನೀವು ಇನ್ನೊಬ್ಬರ ಮೇಲಿನ ಅವಲಂಬನೆಯನ್ನು ಕಡಿಮೆಮಾಡುವಿರಿ. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು.
ತುಲಾ ರಾಶಿ :ಮೇಲಧಿಕಾರಿಗಳು ನಿಮ್ಮ ಮೇಲೆ ಮಾನಸಿಕವಾಗಿ ದಾಳಿ ಮಾಡುವಿಮರು. ಇಂದು ನಿಮ್ಮ ಮುಂದೆಯೇ ವಿವಾಹದ ಪ್ರಸ್ತಾಪಗಳು ಬರಬಹುದು. ಕಡೆಗಣಿಸುವ ಸ್ಥಿತಿಯಲ್ಲಿ ನೀವಿಲ್ಲ. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು. ಆಲಸ್ಯವೆನ್ನುವ ಶತ್ರುವನ್ನು ಮಟ್ಟಹಾಕಿ ಜೀವನಿಗೆಲ್ಲಬೇಕು. ಕಛೇರಿಯ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಮಿತವಾದ ಮಾತಿರಲಿ. ಯಾರಿಂದಲಾದರೂ ಆರ್ಥಿಕ ಬೆಂಬಲವನ್ನು ನಿರೀಕ್ಷಿಸುವಿರಿ. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ.
ವೃಶ್ಚಿಕ ರಾಶಿ :ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿದ್ದರೂ ಸಾಮಾಹಿಕವಾಗಿ ಕಷ್ಟವಾಗುವುದು. ಧಾರ್ಮಿಕ ಆಚರಣೆಯನ್ನು ಸಂಭ್ರಮದಿಂದ ಮಾಡುವಿರಿ. ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಮುಖಸ್ತುತಿ ಕೆಲವೊಮ್ಮೆ ನಿಮಗೆ ಪ್ರಯೋಜನವಾಗಲಿದೆ. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರಕ್ಕೆ ಕರೆ ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ಸಮಾರಂಭಗಳಿಗೆ ನೀವು ಮುಖ್ಯರಾಗಿ ಇರುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳುವರು. ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ಪಡೆಯಿರಿ. ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ಪಡೆಯಿರಿ. ಅನಾರೋಗ್ಯ ಭಯದಿಂದ ಇನ್ನಷ್ಟು ಕುಗ್ಗುವಿರಿ.
ಧನು ರಾಶಿ :ನೀವು ಯಾರ ಹಿಡಿತದಲ್ಲಿಯೂ ಇರಲು ಇಷ್ಟಪಡುವುದಿಲ್ಲ ಚರಾಸ್ತಿಯ ಹಂಚಿಕೆಯನ್ನು ನೀವು ಪಕ್ಷಪಾತದಿಂದ ಮಾಡುವಿರಿ. ದೀರ್ಘಕಾಲದ ಪ್ರೇಮವು ಸಾಕೆನಿಸುವುದು. ಏನನ್ನೂ ಮಾಡದೇ ಸುಮ್ಮನಿರಲಾರಿರಿ. ಸಂತಾನ ಪ್ರಾಪ್ತಿಯಿಂದ ನಿಮಗೆ ಖುಷಿ ಸಿಗಲಿದೆ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ನಾನಾ ಚಿಂತೆಗಳು ಹುಟ್ಟಬಹುದು. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಸರಿಯಾದ ನಿರ್ಧಾರಕ್ಕೆ ಬನ್ನಿ. ಇಂದು ಸ್ತ್ರೀಯರಿಗೆ ಸೌಂದರ್ಯಪ್ರಜ್ಞೆಯು ಅಧಿಕವಾಗಿದ್ದು ಹೆಚ್ಚು ಸಮಯವನ್ನು ಕೊಡುವಿರಿ. ಉದ್ಯೋಗದ ಸ್ಥಳವು ಬೆಲೆಯು ಕಡಿಮೆ ಆದಂತೆ ತೋರುವುದು. ಕ್ಷಣಿಕ ಸುಖಕ್ಕಾಗಿ ಸಂಪತ್ತನ್ನು ಅಧಿಕವಾಗಿ ತ್ಯಾಗ ಮಾಡುವಿರಿ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಬೇಕಾಗುವುದು.
ಮಕರ ರಾಶಿ :ಪಾಲುದಾರಿಕೆಯಿಂದ ಹೊರ ಬಂದು ಸ್ವತಂತ್ರರಾಗಲು ಯೋಜನೆ ಮಾಡುವಿರಿ. ಬೇಕಾದ ವಸ್ತುಗಳನ್ನು ಅಗ್ಗದಲ್ಲಿ ಖರೀದಿಸಲು ಪ್ರಯತ್ನಿಸುವಿರಿ. ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಕಾರ್ಯಗಳನ್ನು ಸರಳವಾಗಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾಹನದಲ್ಲಿ ಸಂಚರಿಸುವಾಗ ಮರಣಭೀತಿಯು ನೆನಪಾಗುವುದು. ಎಲ್ಲರಿಂದ ದೂರವಾಗಲು ಬಯಸುವಿರಿ. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ. ಉದ್ಯೋಗದಲ್ಲಿ ದೂರದೃಷ್ಟಿ ಇರಲಿ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯು ಅಧಿಕವಾಗಬಹುದು. ಯಾವ ಕಾರ್ಯವೇ ಆದರೂ ದೃಷ್ಟಿ ನೇರವಾಗಿರಲಿ.
ಕುಂಭ ರಾಶಿ :ಸ್ವ ಉದ್ಯೋಗಕ್ಕೆ ಆರ್ಥಿಕ ಸಂಸ್ಥೆಗಳ ಸಹಾಯವನ್ನು ಕೇಳುವಿರಿ. ಹಿರಿಯರಾಗಿ ಉತ್ತಮ ಮಾರ್ಗದರ್ಶನ ಮಾಡಬೇಕಾಗುವುದು. ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ಶುಭ ಕಾರ್ಯವೇ ಆಗಿದ್ದರೆ ದೈವಾನುಗ್ರಹ ನಿಮ್ಮ ಪಾಲಿಗೆ ಇದೆ. ನಿಮ್ಮ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸಿ ಸಿಗದೇ ಬೇಸರಗೊಳ್ಳುವಿರಿ. ಸ್ನೇಹಿತರ ಒತ್ತಾಯದ ಮೇರೆಗೆ ಪ್ರಯಾಣ ಮಾಡುವಿರಿ. ನೀವು ಸ್ವತಂತ್ರವಾಗಿ ನಿರ್ಧಾರವನ್ನು ತೆಗದುಕೊಳ್ಳಬೇಕಾಗಬಹುದು.
ಮೀನ ರಾಶಿ :ನಿಮ್ಮಿಂದ ನಂಬಿಕೆ ಬರುವಂತಹ ಮಾತುಗಳನ್ನು ಆಡಿಸುವರು. ನಿಮ್ಮ ಮೂಲ ಧನವನ್ನು ತೆಗೆಯಬೇಕಾಗಬಹುದು. ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಹೋರಾಟದ ಮನೋಭಾವವು ಇಂದು ಎದ್ದು ತೋರುವುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾದೀತು. ಪ್ರೀತಿಪಾತ್ರರ ಜೊತೆ ಧನಾತ್ಮಕವಾದ ಚಿಂತನೆಯನ್ನು ಮಾಡುವಿರಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಸಂಬಂಧಗಳನ್ನು ಚೆನ್ನಾಗಿ ಇಟ್ಟಕೊಳ್ಳಲು ಇಷ್ಟಪಡುವಿರಿ. ಕೆಲವು ಸಮಸ್ಯೆಯನ್ನು ಸುಮ್ನೇ ಬಿಡುವುದು ಯೋಗ್ಯ. ಕೆಲವು ಸಂಬಂಧಗಳು ಹತ್ತಿರವಾಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)