AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಲು ಹುಡುಗಿ ಬೇಕೆಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಹಳ್ಳಿ ಹೈದ; ಆಸ್ಟ್ರೇಲಿಯ, ಇಂಗ್ಲೆಂಡ್​ನಿಂದಲೂ ಬಂತು ಆಫರ್!

Viral News: ಕೇರಳದ ಹಳ್ಳಿಯಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಅಂಗಡಿಯೆದುರು ಬೋರ್ಡ್​ ಹಾಕಿದ್ದಾರೆ. ಆ ಬೋರ್ಡ್​ನ ಫೋಟೋ ವೈರಲ್ ಆಗುತ್ತಿದ್ದಂತೆ ವಿದೇಶಗಳಿಂದಲೂ ಅವರಿಗೆ ಫೋನ್ ಬರೆತೊಡಗಿವೆ.

ಮದುವೆಯಾಗಲು ಹುಡುಗಿ ಬೇಕೆಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಹಳ್ಳಿ ಹೈದ; ಆಸ್ಟ್ರೇಲಿಯ, ಇಂಗ್ಲೆಂಡ್​ನಿಂದಲೂ ಬಂತು ಆಫರ್!
ಅಂಗಡಿಯ ಎದುರು ಉನ್ನಿಕೃಷ್ಣನ್
TV9 Web
| Updated By: ಸುಷ್ಮಾ ಚಕ್ರೆ|

Updated on:Sep 01, 2021 | 3:13 PM

Share

ತ್ರಿಶೂರ್: ಮದುವೆಗೆ ಹುಡುಗಿಯನ್ನು ಹುಡುಕಲು ಬ್ರೋಕರ್ ಬಳಿ ಹೋಗಬೇಕು, ನೆಂಟರಿಷ್ಟರ ಬಳಿ ವಿಚಾರಣೆ ಮಾಡಬೇಕೆಂಬ ಕಾಲವೆಲ್ಲ ಹಳೆಯದಾಯ್ತು. ಈಗೇನಿದ್ದರೂ ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಬೇಕಾದಷ್ಟು ಹೊಸ ಹೊಸ ಆಯ್ಕೆಗಳಿವೆ, ತಂತ್ರಜ್ಞಾನವಿದೆ. ಶಾದಿ ಡಾಟ್ ಕಾಂನಂತಹ ಆನ್​ಲೈನ್ ವೇದಿಕೆಗಳು ನಿಮಗೆ ಬೇಕಾದ ಸಂಗಾತಿಯನ್ನು ಹುಡುಕಿಕೊಡುವ ಬ್ಯುಸಿನೆಸ್ ಅನ್ನು ಸಹ ಶುರು ಮಾಡಿವೆ. ಆನ್​ಲೈನ್​ನಲ್ಲಿ ನಿಮ್ಮ ಮಾಹಿತಿ, ಯಾವ ರೀತಿಯ ಹುಡುಗಿ ಬೇಕೆಂಬ ವಿವರ ನೀಡಿದರೆ ರಾಶಿ ರಾಶಿ ಪ್ರೊಫೈಲ್​ಗಳು ಸಿಗುತ್ತವೆ. ಆದರೆ, ಹಳ್ಳಿಗಳಲ್ಲಿ ಇರುವವರಿಗೆ ನೆಟ್​ವರ್ಕ್ ಸಮಸ್ಯೆಯಿಂದ ಈ ಸೌಲಭ್ಯವನ್ನು ಬಳಸುವುದು ಕಷ್ಟ. ಕೇರಳದಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಹೊಸ ಉಪಾಯ ಕಂಡುಕೊಂಡಿದ್ದಾರೆ. ಏನದು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕೇರಳದ ವಲ್ಲಾಚಿರ ಎಂಬ ಊರಿನವರಾದ 33 ವರ್ಷದ ಎನ್​.ಎನ್​. ಉನ್ನಿಕೃಷ್ಣನ್ ಮದುವೆಯಾಗಲು ಹುಡುಗಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿದ್ದರು. ಆದರೆ, ಯಾವ ಹುಡುಗಿಯೂ ಹೊಂದಿಕೆಯಾಗಿರಲಿಲ್ಲ. ವಲ್ಲಾಚಿರದಲ್ಲಿ ತನ್ನದೇ ಆದ ಅಂಗಡಿಯನ್ನು ಇಟ್ಟುಕೊಂಡಿರುವ ಉನ್ನಿಕೃಷ್ಣನ್ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ತಾನೇ ಹುಡುಗಿಯನ್ನು ಹುಡುಕಿಕೊಳ್ಳಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ಅಂಗಡಿಯ ಮುಂದೆ ವಧು ಬೇಕಾಗಿದ್ದಾಳೆ ಎಂದು ಬೋರ್ಡ್​ ಒಂದನ್ನು ಹಾಕಿ, ಅದರ ಕೆಳಗೆ ತಮ್ಮ ನಂಬರನ್ನು ನಮೂದಿಸಿದ್ದಾರೆ.

ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದೇನೆ. ಜಾತಿ, ಧರ್ಮ ಯಾವುದಾದರೂ ತೊಂದರೆಯಿಲ್ಲ ಎಂದು ಉನ್ನಿಕೃಷ್ಣನ್ ಫಲಕದಲ್ಲಿ ಬರೆದು, ಅಂಗಡಿ ಎದುರು ನೇತು ಹಾಕಿದ್ದಾರೆ. ಇತ್ತೀಚೆಗೆ ಈ ಅಂಗಡಿಗೆ ಬಂದಿದ್ದ ಅವರ ಗೆಳೆಯರೊಬ್ಬರು ಈ ಫಲಕವನ್ನು ನೋಡಿ ಅದರ ಫೋಟೋ ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು. ಅದುವರೆಗೂ ಸುತ್ತಮುತ್ತಲಿನ ಊರುಗಳಲ್ಲಿ ಹುಡುಗಿಗಾಗಿ ಹುಡುಕಾಡುತ್ತಿದ್ದ ಉನ್ನಿಕೃಷ್ಣನ್​ಗೆ ಈ ಒಂದು ಪೋಸ್ಟ್​ನಿಂದ ಈಗ ಆಸ್ಟ್ರೇಲಿಯ, ಇಂಗ್ಲೆಂಡ್​ನಿಂದಲೂ ಫೋನ್ ಕಾಲ್​ಗಳು ಬಂದಿವೆಯಂತೆ!

ನನ್ನ ತಲೆಬುರುಡೆಯನ್ನು ಗೆಡ್ಡೆ ಬೆಳೆದಿದ್ದರಿಂದ ಈಗಾಗಲೇ ಆಪರೇಷನ್ ಆಗಿದೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಇನ್ನಾದರೂ ಜೀವನದಲ್ಲಿ ಸೆಟಲ್ ಆಗಬೇಕೆಂದು ಮದುವೆಯಾಗಲು ನಿರ್ಧರಿಸಿದೆ. ಆದರೆ, ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರಲಿಲ್ಲ. ನನಗೆ ನನ್ನದೇ ಸ್ವಂತದ್ದೊಂದು ಅಂಗಡಿಯಿದೆ. ನಮ್ಮ ಮನೆ ಬಳಿಯೇ ಲಾಟರಿ ಅಂಗಡಿಯೊಂದನ್ನು ತೆರೆದಿದ್ದೇನೆ. ಅಲ್ಲಿಯೇ ಟೀಯನ್ನು ಕೂಡ ಮಾರುತ್ತೇನೆ. ಬ್ರೋಕರ್ ಮೂಲಕ ಹುಡುಗಿಯನ್ನು ಹುಡುಕುವುದು ಇಷ್ಟವಿಲ್ಲದ ಕಾರಣಕ್ಕೆ ಈ ರೀತಿ ಅಂಗಡಿಯೆದುರು ನನಗೆ ನಾನೇ ಜಾಹೀರಾತು ಕೊಟ್ಟುಕೊಂಡಿದ್ದೇನೆ. ನಮ್ಮ ಮನೆಯವರು ಕೂಡ ಹುಡುಗಿಯನ್ನು ಹುಡುಕುತ್ತಿದ್ದಾರೆ. ಆದರೆ, ಇನ್ನೂ ನನಗೆ ಸರಿಯೆನಿಸುವ ಹುಡುಗಿ ಸಿಕ್ಕಿಲ್ಲ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ.

ಈ ಬೋರ್ಡ್​ನ ಫೋಟೋ ತೆಗೆದು ಉನ್ನಿಕೃಷ್ಣನ್​ ಅವರ ಸ್ನೇಹಿತ ಸಾಜಿ ಎಡಪಿಲ್ಲಿ ತಮ್ಮ ಫೇಸ್​ಬುಕ್ ಪೇಜಿನಲ್ಲಿ ಹಾಕಿಕೊಂಡಿದ್ದರು. ಮಲಯಾಳಂನಲ್ಲಿ ಬರೆದಿದ್ದ ಆ ಬೋರ್ಡ್​ನ ಅರ್ಥವನ್ನು ಇಂಗ್ಲಿಷ್​ನಲ್ಲಿ ಅನುವಾದಿಸಿ ಪೋಸ್ಟ್ ಮಾಡಿದ್ದರು. ನನ್ನನ್ನು ಮದುವೆಯಾಗಲು ಇಚ್ಛಿಸುವ ಯಾವುದೇ ಧರ್ಮ, ಜಾತಿಯ ಹುಡುಗಿ ಈ ನಂಬರ್​ಗೆ ಸಂಪರ್ಕಿಸಿ ಎಂದು ಬರೆದಿದ್ದ ಆ ಬೋರ್ಡ್​ ಅನ್ನು ನೋಡಿ ಅನೇಕರು ಇಂಪ್ರೆಸ್ ಆಗಿದ್ದಾರೆ. ಇದೀಗ ಆ ಪೋಸ್ಟ್ ನೋಡಿದ ಆಸ್ಟ್ರೇಲಿಯ, ಇಂಗ್ಲೆಂಡ್​ ಮುಂತಾದ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ಫೋನ್ ಮಾಡಿ ತಮ್ಮ ಕುಟುಂಬದಲ್ಲಿ ಹುಡುಗಿ ಇರುವುದಾಗಿ ತಿಳಿಸುತ್ತಿದ್ದಾರೆ. ಹಲವರು ಫೋನ್ ಮಾಡಿ ಜಾತಿ, ಧರ್ಮವನ್ನು ಲೆಕ್ಕಿಸದೆ ಮದುವೆಯಾಗಲು ಬಯಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!

(Wanting life partner, Kerala man puts signboard outside his Lottery shop gets Marriage Proposals from Australia, England)

Published On - 3:08 pm, Wed, 1 September 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ