AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್​ಸೆಲ್ವಂ ಪತ್ನಿ ಪಿ.ವಿಜಯಲಕ್ಷ್ಮಿ ವಿಧಿವಶ

ವಿಜಯಲಕ್ಷ್ಮಿ ಅವರ ಪಾರ್ಥಿವ ಶರೀರವನ್ನು ರಸ್ತೆಯ ಮೂಲಕ ತೇನಿ ಜಿಲ್ಲೆಯ ಪೆರಿಯಕುಲಂನಲ್ಲಿರುವ ಒಪಿಎಸ್ ಮನೆಗೆ ತರಲಾಗುವುದು. ಗುರುವಾರ ಬೆಳಗ್ಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್​ಸೆಲ್ವಂ ಪತ್ನಿ ಪಿ.ವಿಜಯಲಕ್ಷ್ಮಿ ವಿಧಿವಶ
ಪಿ.ವಿಜಯಲಕ್ಷ್ಮಿ
TV9 Web
| Edited By: |

Updated on:Sep 01, 2021 | 2:07 PM

Share

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ ಪನೀರ್​​ಸೆಲ್ವಂ (O Paneerselvam) ಅವರ ಪತ್ನಿ ಪಿ ವಿಜಯಲಕ್ಷ್ಮಿ (P Vijayalakshmi) ಬುಧವಾರ ಬೆಳಗ್ಗೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 66 ವಯಸ್ಸಾಗಿತ್ತು. ಉದರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಕಳೆದ 10 ದಿನಗಳಿಂದ ಪೆರುಂಗುಡಿಯ ಜೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಹೃದ್ರೋಗಿಯಾಗಿದ್ದ ಆಕೆ ಇಂದು ಮುಂಜಾನೆ 5 ಗಂಟೆಗೆ ಭಾರೀ ಹೃದಯಾಘಾತಕ್ಕೆ ಒಳಗಾದರು ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ವಿಜಯಲಕ್ಷ್ಮಿ ಬೆಳಿಗ್ಗೆ 6.45 ಕ್ಕೆ ನಿಧನರಾಗಿದ್ದಾರೆ. ವಿಜಯಲಕ್ಷ್ಮಿ ಅವರ ಪಾರ್ಥಿವ ಶರೀರವನ್ನು ರಸ್ತೆಯ ಮೂಲಕ ತೇನಿ ಜಿಲ್ಲೆಯ ಪೆರಿಯಕುಲಂನಲ್ಲಿರುವ ಒಪಿಎಸ್ ಮನೆಗೆ ತರಲಾಗುವುದು. ಗುರುವಾರ ಬೆಳಗ್ಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಕುಟುಂಬದ ಹತ್ತಿರದ ಮೂಲಗಳ ಪ್ರಕಾರ ವಿಜಯಲಕ್ಷ್ಮಿ ಒಪಿಎಸ್ ಗೆ ಬೆಂಬಲವಾಗಿ ನಿಂತಿದ್ದು ಅವರ ಮೂವರು ಕಿರಿಯ ಸಹೋದರರು ಮತ್ತು ಅನೇಕ ಸಹೋದರಿಯರನ್ನು ಒಳಗೊಂಡ ಒಪಿಎಸ್ ನ ಅವಿಭಕ್ತ ಕುಟುಂಬವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನವೆಂಬರ್ 14, 1977 ರಂದು ಒಪಿಎಸ್ ಅವರನ್ನು ವಿಜಯಲಕ್ಷ್ಮಿ ಮದುವೆಯಾಗಿದ್ದರು.

ಉತ್ತಮಪಾಳ್ಯದ ಹಾಜಿ ಕರುತಾರಾವುತರ್ ಕಾಲೇಜಿನಲ್ಲಿ ಬಿಎ ಪದವೀಧರಾಗಿದ್ದ ಅವರು ತೇನಿ ಜಿಲ್ಲೆಯ ರೈತ ದಂಪತಿಗಳಾದ ಅಳಗುಪಾಂಡಿ ತೇವನ್ ಮತ್ತು ವಲ್ಲಿಯಮ್ಮಾಳ್ ಅವರ ಪುತ್ರಿ. ಸೆಪ್ಟೆಂಬರ್ 17, 1954 ರಂದು ಜನಿಸಿದ ಅವರು ಒಪಿಎಸ್‌ಗಿಂತ ಮೂರು ವರ್ಷ ಚಿಕ್ಕವರು.

ಒಪಿಎಸ್ ತಮ್ಮ ಮದುವೆಯ ಸಮಯದಲ್ಲಿ ಎಐಎಡಿಎಂಕೆಯ ಪೆರಿಯಾಕುಲಂ ಪಟ್ಟಣದ ಕಾರ್ಯದರ್ಶಿಯಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಜಯಲಕ್ಷ್ಮಿ ಅವರು 44 ವರ್ಷಗಳ ಹಿಂದೆ ಮಾಡಿದಂತೆಯೇ ಅತಿಥಿ ಸತ್ಕಾರ ಮಾಡುತ್ತಿದ್ದರು. ನಾವು ಯಾವ ಸಮಯದಲ್ಲಿ ಅವರ ಮನೆಗೆ ಹೋದರು ಅವರು ಕೋಪಗೊಂಡಿಲ್ಲ ಅಂತಾರೆ ಪಕ್ಷದ ಕಾರ್ಯಕರ್ತರು.

ಅವಿಭಕ್ತ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ವಹಿಸಿಕೊಂಡರು ಮತ್ತು ಇದು ಪನ್ನೀರ್​​ಸೆಲ್ವಂ ಪಕ್ಷದಲ್ಲಿ ಮೇಲೇರಲು ಸಹಾಯ ಮಾಡಿತು ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಹಿಸಿದ ವಿವಿಧ ಜವಾಬ್ದಾರಿಗಳಲ್ಲಿ ಒಬ್ಬ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಒತ್ತಡವನ್ನು ಅವರು ನಿಭಾಯಿಸಿದರು.

ಅವರಿಗೆ ಒಪಿಎಸ್‌ನ ಇಷ್ಟ ಮತ್ತು ಇಷ್ಟವಿಲ್ಲದೇ ಇರುವ ವಿಷಯಗಳು ತಿಳಿದಿತ್ತು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ – ಪಿ ರವೀಂದ್ರನಾಥ್ (ತೇನಿ ಎಂಪಿ) ಮತ್ತು ವಿ ಪಿ ಜಯಪ್ರದೀಪ್ ಮತ್ತು ಮಗಳು – ಕವಿತಾ ಬಾನು. ಎಐಎಡಿಎಂಕೆ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕುಟುಂಬದೊಂದಿಗೆ ಅಂತಿಮ ವಿಧಿವಿಧಾನಗಳ ವ್ಯವಸ್ಥೆ ಮಾಡಲು ಪೆರಿಯಾಕುಲಂ ಮನೆಗೆ ಹೋಗಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರು ಜಿಇಎಂ ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಉಚ್ಛಾಟಿತ ಎಐಎಡಿಎಂಕೆ ನಾಯಕಿ ವಿ ಕೆ ಶಶಿಕಲಾ ಅವರು  ಪನ್ನೀರ್​​ಸೆಲ್ವಂ ಅವರನ್ನು ಭೇಟಿ ಮಾಡಿ ಅವರ ಪತ್ನಿ ಪಿ ವಿಜಯಲಕ್ಷ್ಮಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.

ಇದನ್ನೂ ಓದಿ: C.1.2 ಕೊವಿಡ್ -19 ರೂಪಾಂತರ: ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ ಎಂದ ಕೇಂದ್ರ ಸರ್ಕಾರ, ಆದರೆ ಇದು ಎಷ್ಟು ಮಾರಕ?

(Former Tamil Nadu chief minister O Paneerselvam’s wife P Vijayalakshmi dies in a Chennai)

Published On - 2:00 pm, Wed, 1 September 21

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್