AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾದ ಮಾಜಿ ಸಿಜೆಐ ಎಸ್​.ಎ.ಬೊಬ್ಡೆ; ಒಂದು ತಾಸು ಮಾತುಕತೆ

Maharashtra: ಎಸ್​.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್​ ಮಾಡಿದ್ದರು. 2021ರ ಏಪ್ರಿಲ್​ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾದ ಮಾಜಿ ಸಿಜೆಐ ಎಸ್​.ಎ.ಬೊಬ್ಡೆ; ಒಂದು ತಾಸು ಮಾತುಕತೆ
ಮೋಹನ್​ ಭಾಗವತ್​ ಮತ್ತು ಎಸ್​.ಎ.ಬೊಬ್ಡೆ
TV9 Web
| Edited By: |

Updated on: Sep 01, 2021 | 2:19 PM

Share

ಮಾಜಿ ಸಿಜೆಐ (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ) (Former CJI) ಎಸ್.ಎ.ಬೊಬ್ಡೆ (S.A.Bobde) ನಿನ್ನೆ (ಆಗಸ್ಟ್​ 31) ಆರ್​ಎಸ್​ಎಸ್​ ಸರಸಂಘಸಂಚಾಲಕ ಮೋಹನ್​ ಭಾಗವತ್​ (Mohan Bhagwat)ರನ್ನು ನಾಗ್ಪುರದಲ್ಲಿ ಭೇಟಿಯಾಗಿ ಸುಮಾರು 1 ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ. ನಾಗ್ಪುರದ ಆರ್​ಎಸ್​ಎಸ್​ ಪ್ರಧಾನ ಕಚೇರಿಯಲ್ಲೇ ಈ ಭೇಟಿ ನಡೆದಿದೆ ಎಂದು ನಂಬಲರ್ಹ ಮೂಲಗಳಿಂದಲೇ ತಿಳಿದುಬಂದಿದ್ದರೂ, ಆರ್​ಎಸ್​ಎಸ್​ ಮಾತ್ರ ಇದನ್ನು ನಿರಾಕರಿಸಿದೆ. ಒಂದು ತಾಸುಗಳ ಮಾತುಕತೆ ನಡೆದಿದ್ದರೂ, ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎಂಬುದಿನ್ನೂ ತಿಳಿದಿಲ್ಲ. ಹಾಗೇ, ಮೋಹನ್​ ಭಾಗವತ್ ಆಗಲೀ, ಎಸ್.ಎ.ಬೊಬ್ಡೆಯವರಾಗಲೀ ಈ ಬಗ್ಗೆ ಇನ್ನೂ ಮಾತನಾಡಿಲ್ಲ.

ಬೊಬ್ಡೆಯವರು ಆರ್​ಎಸ್​ಎಸ್​ ಕಚೇರಿಯನ್ನಾಗಲೀ, ಮುಖ್ಯಸ್ಥ ಮೋಹನ್​ ಭಾಗವತ್​​ ಅವರನ್ನಾಗಲಿ ಭೇಟಿಯಾಗಿದ್ದು ಇದೇ ಮೊದಲು. ಇಲ್ಲಷ್ಟೇ ಅಲ್ಲದೆ, ಮಹಲ್​ ಏರಿಯಾದಲ್ಲಿರುವ, ಆರ್​ಎಸ್​ಎಸ್​ ಸಂಸ್ಥಾಪಕ ಕೇಶವ್​ ಬಲಿರಾಮ್​ ಹೆಗ್ಡೆವಾರ್ ಅವರ 100 ವರ್ಷಗಳಷ್ಟು ಹಳೆಯದಾದ ಮನೆಗೂ ಎಸ್​.ಎ.ಬೊಬ್ಡೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ​​ ಆ ಮನೆಯನ್ನು ಹೇಗೆ ನಿರ್ವಹಿಸಲಾಗುತ್ತಿದೆ..ಹೇಗೆಲ್ಲ ರಕ್ಷಿಸಲಾಗುತ್ತಿದೆ ಎಂಬುದನ್ನು ತಿಳಿಯಲು ಬೊಬ್ಡೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.

ಅಯೋಧ್ಯಾ ಐತಿಹಾಸಿಕ ತೀರ್ಪು ನೀಡಿದ್ದ ಬೊಬ್ಡೆ ಎಸ್​.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್​ ಮಾಡಿದ್ದರು. 2021ರ ಏಪ್ರಿಲ್​ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅವರು ನಿವೃತ್ತರಾಗುವ ಕೆಲವೇ ದಿನಗಳ ಮೊದಲು ಅಯೋಧ್ಯೆ ಐತಿಹಾಸಿಕ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಮಾಜಿ ಸಿಜೆಐ ಅಂದರೆ ಎಸ್.ಎ.ಬೊಬ್ಡೆಗೂ ಮುನ್ನ ಇದ್ದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದೀಗ ಎಸ್​.ಎ.ಬೊಬ್ಡೆ ಮತ್ತು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಭೇಟಿ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಅಪ್ಪನ ಸಾಲ ಮಗ ತೀರಿಸಬೇಕಲ್ಲ; ಯುಪಿಎ ಸರ್ಕಾರ ಮಾಡಿದ್ದನ್ನ ನಾವು ತೀರಿಸ್ತಾ ಇದೀವಿ; ಎಲ್​ಪಿಜಿ ಬೆಲೆ ಏರಿಕೆಗೆ ಸಂಗಣ್ಣ ಕರಡಿ ಉತ್ತರ

ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ; ಕೇರಳದಿಂದ ಬಂದವರೇ ಸೂಪರ್​ ಸ್ಪ್ರೆಡರ್ಸ್

Follow Us
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್