ಪ್ರಾಯಶ್ಚಿತವಾಗಿ ಗುರುದ್ವಾರವನ್ನು ಸ್ವಚ್ಛಗೊಳಿಸುವೆ; ಪಂಜ್ ಪ್ಯಾರೆ ಪದ ಬಳಕೆಗೆ ಕ್ಷಮೆಯಾಚಿಸಿದ ಹರೀಶ್ ರಾವತ್

Harish Rawat ಪ್ರಾಯಶ್ಚಿತ್ತವಾಗಿ ನಾನು ನನ್ನ ರಾಜ್ಯದ ಗುರುದ್ವಾರವನ್ನು ಪೊರಕೆಯಿಂದ ಸ್ವಚ್ಛಗೊಳಿಸುತ್ತೇನೆ. ನಾನು ಯಾವಾಗಲೂ ಸಿಖ್ ಧರ್ಮ ಮತ್ತು ಅದರ ಶ್ರೇಷ್ಠ ಸಂಪ್ರದಾಯಗಳ ಬಗ್ಗೆ ಸಮರ್ಪಣೆ ಮತ್ತು ಗೌರವವನ್ನು ಹೊಂದಿದ್ದೇನೆ ಗೌರವದ ಸಂಕೇತವಾಗಿ ಬಳಸಿದ ಪದಕ್ಕಾಗಿ ನಾನು ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ ಎಂದ ಹರೀಶ್ ರಾವತ್

ಪ್ರಾಯಶ್ಚಿತವಾಗಿ ಗುರುದ್ವಾರವನ್ನು ಸ್ವಚ್ಛಗೊಳಿಸುವೆ; ಪಂಜ್ ಪ್ಯಾರೆ ಪದ ಬಳಕೆಗೆ ಕ್ಷಮೆಯಾಚಿಸಿದ ಹರೀಶ್ ರಾವತ್
ಹರೀಶ್ ರಾವತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 01, 2021 | 3:42 PM

ದೆಹಲಿ: ಪಂಜಾಬ್‌ನಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದ ನಂತರ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಬುಧವಾರ ತಮ್ಮ ‘ಪಂಜ್ ಪ್ಯಾರೆ’  ಪದ ಬಳಕೆದೆ ಕ್ಷಮೆಯಾಚಿಸಿದರು ಮತ್ತು ಸಿಖ್ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದರು. “ಕೆಲವೊಮ್ಮೆ ನೀವು ಗೌರವವನ್ನು ವ್ಯಕ್ತಪಡಿಸುತ್ತೀರಿ ಮತ್ತು ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸುತ್ತೀರಿ. ನನ್ನ ಗೌರವಾನ್ವಿತ ಅಧ್ಯಕ್ಷರು ಮತ್ತು ನಾಲ್ವರು ಕಾರ್ಯಾಧ್ಯಕ್ಷರಿಗೆ ನಿನ್ನೆ ‘ಪಂಜ್ ಪ್ಯಾರೆ’ ಪದವನ್ನು ಬಳಸುವ ಮೂಲಕ ನಾನು ಕೂಡ ತಪ್ಪು ಮಾಡಿದ್ದೇನೆ. ನಾನು ದೇಶದ ಇತಿಹಾಸದ ವಿದ್ಯಾರ್ಥಿಯಾಗಿದ್ದೇನೆ ಮತ್ತು ಪಂಜ್ ಪ್ಯಾರರ ನಾಯಕತ್ವದ ಸ್ಥಾನವನ್ನು ಬೇರೆಯವರೊಂದಿಗೆ ಹೋಲಿಸಲಾಗದು. ನಾನು ಈ ತಪ್ಪು ಮಾಡಿದ್ದೇನೆ, ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಪ್ರಾಯಶ್ಚಿತ್ತವಾಗಿ ನಾನು ನನ್ನ ರಾಜ್ಯದ ಗುರುದ್ವಾರವನ್ನು ಪೊರಕೆಯಿಂದ ಸ್ವಚ್ಛಗೊಳಿಸುತ್ತೇನೆ. ನಾನು ಯಾವಾಗಲೂ ಸಿಖ್ ಧರ್ಮ ಮತ್ತು ಅದರ ಶ್ರೇಷ್ಠ ಸಂಪ್ರದಾಯಗಳ ಬಗ್ಗೆ ಸಮರ್ಪಣೆ ಮತ್ತು ಗೌರವವನ್ನು ಹೊಂದಿದ್ದೇನೆ ಗೌರವದ ಸಂಕೇತವಾಗಿ ಬಳಸಿದ ಪದಕ್ಕಾಗಿ ನಾನು ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಾಯಕ ದಲ್ಜೀತ್ ಸಿಂಗ್ ಚೀಮಾ ಮಂಗಳವಾರ ಈ ಹೇಳಿಕೆಗೆ ಆಕ್ಷೇಪ ಪಡಿಸಿದ್ದು ರಾವತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು.

ಚೀಮಾ ರಾವತ್ ವಿರುದ್ಧ ವಾಗ್ದಾಳಿ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದು, ಇಂತಹ ಟೀಕೆಗಳು ತಮಾಷೆಯಲ್ಲ ಮತ್ತು ಸಿಖ್ ಸಮುದಾಯದ ಭಾವನೆಗಳನ್ನು ನೋಯಿಸುತ್ತದೆ ಎಂದು ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಸಭೆಯ ಅಧ್ಯಕ್ಷತೆಯನ್ನು ಪಂಜ್ ಪ್ಯಾರೆಗೆ ವಹಿಸಿರುವುದಾಗಿ ಹೇಳಿದ್ದು ತುಂಬಾ ದುಃಖ ಮತ್ತು ನಿರಾಶಾದಾಯಕವಾಗಿದೆ. ಸಿಖ್ ಸಮುದಾಯದಲ್ಲಿ ‘ಪಂಜ್ ಪ್ಯಾರಸ್’ ಅನ್ನು ಗೌರವಿಸಲಾಗುತ್ತದೆ. ಅದು ಹಾಸ್ಯದ ವಿಷಯವಲ್ಲ, ಇಂತಹ ಟೀಕೆಗಳು ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಚೀಮಾ ಹೇಳಿದರು.

ಅವರು ತಕ್ಷಣವೇ ಹೇಳಿಕೆಯನ್ನು ಹಿಂಪಡೆಯಬೇಕು, ಮತ್ತು ಇಡೀ ಕಾಂಗ್ರೆಸ್ ಇಡೀ ಸಿಖ್ ಸಮುದಾಯಕ್ಕೆ ಕ್ಷಮೆಯಾಚಿಸಬೇಕು. ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಸಿಖ್ ವಿರೋಧಿ ಮತ್ತು ಸಿಖ್ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಯಾವಾಗಲೂ ಸಿಖ್ ವಿರೋಧಿ ಮತ್ತು ಸಿಖ್ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ನೀಡಿದ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಇಡೀ ಕಾಂಗ್ರೆಸ್ ಇಡೀ ಸಿಖ್ ಸಮುದಾಯದ ಕ್ಷಮೆ ಕೇಳಬೇಕು “ಎಂದು ಚೀಮಾ ಟ್ವೀಟ್ ಮಾಡಿ ವಿಡಿಯೊ ಹಂಚಿಕೊಂಡಿದ್ದಾರೆ.

ಹರೀಶ್ ರಾವತ್ ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಕಾರ್ಯಾಧ್ಯಕ್ಷರಾದ ಪವನ್ ಗೋಯೆಲ್, ಕುಲ್ಜಿತ್ ಸಿಂಗ್ ನಾಗ್ರಾ ಮತ್ತು ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಮತ್ತು ಮಾಧ್ಯಮದವರನ್ನು ಉದ್ದೇಶಿಸಿ ಸಿಧು ಮತ್ತು ನಾಲ್ವರು ಕಾರ್ಯನಿರತ ಅಧ್ಯಕ್ಷರನ್ನು ‘ಪಂಜ್ ಪ್ಯಾರಸ್’ ಎಂದು ಕರೆದರು.

“ಪಿಸಿಸಿ ಮುಖ್ಯಸ್ಥ, ಅವರ ತಂಡ ಮತ್ತು ‘ಪಂಜ್ ಪ್ಯಾರೆ’ (ನವಜೋತ್ ಸಿಂಗ್ ಸಿಧು +4 ಕಾರ್ಯಾಧ್ಯಕ್ಷರು) ಜೊತೆ ಚರ್ಚಿಸುವುದು ನನ್ನ ಜವಾಬ್ದಾರಿಯಾಗಿತ್ತು. ಮತದಾನದ ಕುರಿತು ಚರ್ಚೆಗಳು, ಸಾಂಸ್ಥಿಕ ರಚನೆಯನ್ನು ಸಜ್ಜುಗೊಳಿಸಲು ಸಿಧು ನನಗೆ ಹೇಳಿದ್ದಾರೆ. ಪಿಸಿಸಿ ಕೆಲಸ ಮಾಡುತ್ತಿದೆ ಎಂದು ರಾವತ್ ಮಾಧ್ಯಮಗಳನ್ನುದ್ದೇಶಿಸಿ ಹೇಳಿದ್ದರು.

ಇದನ್ನೂ ಓದಿ: ಕಳೆದೊಂದು ವರ್ಷದಲ್ಲಿ ಗಗನ ಚುಂಬಿಸಿದ ಅಗತ್ಯ ವಸ್ತುಗಳ ಬೆಲೆ: ಯಾವುದರ ಬೆಲೆ, ಎಷ್ಟೆಷ್ಟು ಏರಿಕೆ?

ಇದನ್ನೂ ಓದಿ: ವಾಯು ಮಾಲಿನ್ಯವು ಶೇ 40 ಭಾರತೀಯರ ಜೀವಿತಾವಧಿಯನ್ನು 9 ವರ್ಷ ಕಡಿತಗೊಳಿಸಬಹುದು: ಅಮೆರಿಕದ ಅಧ್ಯಯನ ವರದಿ

(As Atonement I will clean a gurudwara Punjab Congress in-charge Harish Rawat Apologises for ‘Panj Pyare’ Remark )

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ