ತಾಲಿಬಾನಿಗಳು ಉಗ್ರರು ಅಂತಾದಮೇಲೆ ಯಾಕೆ ಮಾತಾಡಬೇಕು?- ರಾಜತಾಂತ್ರಿಕ ಸಭೆಯನ್ನು ಟೀಕಿಸಿದ ಒಮರ್ ಅಬ್ದುಲ್ಲಾ
ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, ತಾಲಿಬಾನ್ ಉಗ್ರಸಂಘಟನೆ ಹೌದೋ..ಅಲ್ಲವೋ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳ ಉನ್ನತ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಝೈರೊಂದಿಗೆ, ಕತಾರ್ನಲ್ಲಿರುವ ಭಾರತ ರಾಯಭಾರಿ ದೀಪಕ್ ಮಿತ್ತಲ್ ನಿನ್ನೆ ದೋಹಾದಲ್ಲಿ ಸಭೆ ನಡೆಸಿದ್ದರು. ಶೇರ್ ಮೊಹಮ್ಮದ್ ಅಬ್ಬಾಸ್, ದೋಹಾದಲ್ಲಿರುವ ತಾಲಿಬಾನಿ ರಾಜಕೀಯ ಕಚೇರಿ ಮುಖ್ಯಸ್ಥರೂ ಹೌದು. ಆದರೆ ನಿನ್ನೆ ತಾಲಿಬಾನಿಗಳೊಂದಿಗೆ ಭಾರತದ ರಾಯಭಾರಿ ನಡೆಸಿದ ಸಭೆಯ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಪ್ರಶ್ನೆ ಎತ್ತಿದ್ದಾರೆ. ತಾಲಿಬಾನ್ ಒಂದು ಭಯೋತ್ಪಾದಕ ಸಂಘಟನೆ ಎಂದಾದ ಮೇಲೆ, ಅವರ ಬಳಿ ಯಾಕೆ ಮಾತನಾಡಬೇಕು? ಮಾತನಾಡುವುದು ಏನಿರುತ್ತದೆ ಎಂದು ಕೇಳಿದ್ದಾರೆ.
ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಉಗ್ರಸಂಘಟನೆ ಹೌದೋ..ಅಲ್ಲವೋ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಅವರು ಭಯೋತ್ಪಾದಕರು ಹೌದು ಎಂದಾದ ಮೇಲೆ ಅವರ ಬಳಿ ಮಾತನಾಡುವುದು ಏನಿರುತ್ತದೆ? ಹಾಗೊಮ್ಮೆ ತಾಲಿಬಾನಿಗಳು ಭಯೋತ್ಪಾದಕರಲ್ಲ ಎಂದರೆ ನೀವು ವಿಶ್ವಸಂಸ್ಥೆಗೆ ಹೋಗಿ, ಅಲ್ಲಿ ಉಗ್ರಸಂಘಟನೆ ಪಟ್ಟಿಯಿಂದ ತಾಲಿಬಾನ್ನ್ನು ರದ್ದುಗೊಳಿಸುತ್ತೀರಾ? ನಿಮ್ಮ ಮನಸಿಗೆ ಮೊದಲು ಸ್ಪಷ್ಟನೆ ಕೊಟ್ಟುಕೊಳ್ಳಿ ಎಂದು ಒಮರ್ ಅಬ್ದುಲ್ಲಾ ಕೇಂದ್ರಕ್ಕೆ ಹೇಳಿದ್ದಾರೆ.
ನಿನ್ನೆ ಕತಾರ್ನ ದೋಹಾದಲ್ಲಿ ನಡೆದ ಭಾರತ ರಾಯಭಾರಿ ಮತ್ತು ತಾಲಿಬಾನ್ ಮುಖಂಡ ನಡುವಿನ ಸಭೆಯಲ್ಲಿ ಸುರಕ್ಷತೆ, ಭದ್ರತೆ ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂಥರ ಪ್ರಕ್ರಿಯೆ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಅದರೊಂದಿಗೆ ಭಾರತಕ್ಕೆ ಬರಲು ಇಚ್ಛಿಸುತ್ತಿರುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ದೀಪಕ್ ಮಿತ್ತಲ್, ಅಫ್ಘಾನ್ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಯಬಹುದೇ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ತಾಲಿಬಾನ್ ಮುಖಂಡ, ಅಂಥ ಬೆದರಿಕೆ ಒಡ್ಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ಧನಾತ್ಮಕವಾಗಿಯೇ ಪರಿಹರಿಸಿಕೊಳ್ಳೋಣ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನ್ ನೂತನ ಸರ್ಕಾರ ರಚನೆ ಸಾಧ್ಯತೆ
Vedanta Limited: ವೇದಾಂತ ಕಂಪೆನಿಯಿಂದ ಪ್ರತಿ ಷೇರಿಗೆ 18 ರೂಪಾಯಿ ಮಧ್ಯಂತರ ಡಿವಿಡೆಂಡ್ ಘೋಷಣೆ
Published On - 5:27 pm, Wed, 1 September 21




